ಸುದ್ದಿ ಸಂಗ್ರಹ ಚಿತ್ತಾಪುರ
ಪಟ್ಟಣದ ಶ್ರೀಗುರು ಬಸವ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಏಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಸ್ವತಂತ್ರ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 129ನೇ ಜನ್ಮದಿನಾಚರಣೆ ಮತ್ತು ವಸಂತ ಪಂಚಮಿ ಆಚರಿಸಲಾಯಿತು.
ವಿಜಯಲಕ್ಷ್ಮಿ ಶಾಲೆಯ ಮುಖ್ಯಗುರು ಪ್ರೀಯಾಕ ಬಿ ಅವರು ಸುಭಾಷ್ ಚಂದ್ರಬೋಸ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು, ವಿದ್ಯಾ ದೇವತೆ ಸರಸ್ವತಿ ಭಾವಚಿತ್ರಕ್ಕೆ ಶಾಲೆಯ ಜಂಟಿ ಕಾರ್ಯದರ್ಶಿ ಬಸವರಾಜ ಮತ್ತು ಪ್ರಭಾರಿ ಮುಖ್ಯಗುರು ಮಹಾದೇವ ಪೂಜೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನೇತಾಜಿಯವರ ಬಗ್ಗೆ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಸಲೀಮ್, ವಸಂತ, ಸುಜಾತ, ಸಾಧನ ಶಿಲ್ಪಿ, ಅಶ್ವಿನಿ, ಅಂಬಿಕಾ, ಅಂಕಿತಾ, ಬಸಮ್ಮ, ಫಿಜಾ, ಅಫ್ರೀನ್, ಮಮತಾ ಸೇರಿದಂತೆ ಅನೇಕರು ಇದ್ದರು.