ಸುದ್ದಿ ಸಂಗ್ರಹ ಶಹಾಬಾದ್
ಶಿಕ್ಷಕರು ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಅವರನ್ನು ಪ್ರೋತ್ಸಾಹಿಸುವತ್ತ ಗಮನ ಹರಿಸಬೇಕು ಎಂದು ಉದ್ಯಮಿ ಶಿವಕುಮಾರ ಇಂಗಿನಶೆಟ್ಟಿ ಹೇಳಿದರು.
ನಗರದ ಚವ್ಹಾಣ್ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಾಗಮ್ಮ ಚನ್ನಪ್ಪ ಇಂಗಿನಶೆಟ್ಟಿ ಶಾಲೆಯಲ್ಲಿ ದಿ.ಆದರ್ಶ ಕುಂಬಾರ ಅವರ ಹುಟ್ಟುಹಬ್ಬದ ನಿಮಿತ್ತ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಲೇಖನಿ, ಸಲಕರಣೆ ಪರೀಕ್ಷೆ ಪ್ಯಾಡ್‌ಗಳು ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಾಲಕರು ಮಕ್ಕಳಿಗೆ ಒಳ್ಳೆಯ ನಡೆತೆ ಬಗ್ಗೆ ಮಾರ್ಗದರ್ಶನ ಮಾಡಬೇಕು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡು ಉತ್ತಮವಾಗಿ ಅಧ್ಯಯನ ಮಾಡಿದರೆ ಮುಂದೆ ಉನ್ನತ ಶಿಕ್ಷಣ ಪಡೆದುಕೊಂಡು ಸ್ವಾವಲಂಭಿ ಜೀವನ ಮಾಡಲು ಅನುಕೂಲವಾಗುತ್ತದೆ ಎಂದರು.
ಮುಖ್ಯಗುರು ಸವಿತಾ ಬೆಳಗುಂಪಿ ಮಾತನಾಡಿ, 20
ವರ್ಷದ ಬಾಲಕ ದಿ.ಆದರ್ಶ ಕುಂಬಾರ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದು, ಅವರ ಕುಟುಂಬಸ್ಥರು ನಾಲ್ಕು ವರ್ಷಗಳಿಂದ ಹುಟ್ಟು ಹಬ್ಬದ ನಿಮಿತ್ತ, ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಮೂಲಕ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಉಪಯೋಗವಾಗುವ
ವಸ್ತುಗಳನ್ನು ನೀಡುವ ಹುಟ್ಟು ಹಬ್ಬ ಆಚರಣೆ ಮಾಡುವ ಮೂಲಕ ಮಾದರಿಯಾಗಿದ್ದಾರೆ ಎಂದರು.
ಪತ್ರಕರ್ತ ವಾಸುದೇವ ಚವ್ಹಾಣ್ ಮಾತನಾಡಿ, ದಿ.ಆದರ್ಶ ಅವರ ಹುಟ್ಟು ಹಬ್ಬದಂದು ಅವರು ಕುಟುಂಬಸ್ಥರು ಆಡಂಬರ ಮಾಡದೆ ಶಾಲೆಗಳಿಗೆ
ಮಕ್ಕಳಿಗೆ ಪ್ರೋತ್ಸಾಹಿಸು ಕೆಲಸ ಮೆಚ್ಚುವಂತದ್ದು. ಪ್ರತಿವರ್ಷ ಇದೆ ತರಹ ಶೈಕ್ಷಣಿಕ ಸೇವೆ ಮುಂದುವರಿಯಲ್ಲಿ ಎಂದರು.
ನಗರದ ಎನ್‌ಸಿ ಇಂಗಿನಶೆಟ್ಟಿ, ಹಾಗೂ ನಂದಗೋಕುಲ ಶಾಲೆಯ 200 ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪರೀಕ್ಷಾ ಪ್ಯಾಡ್, ಪೆನ್, ಪೇನ್ಸಿಲ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಶರಣು ಕುಂಬಾರ, ಪ್ರಶಾಂತ ಕುಂಬಾರ, ಸುಮಿತ, ಸಂಸ್ಥೆಯ ಸದಸ್ಯೆ ಸುಧಾರಾಣಿ ಚವ್ಹಾಣ್, ಶಿಕ್ಷಕಿಯರಾದ ಆರತಿ ವೆಂಕಟೇಶ, ಸುಜಾತಾ ಕುಂಬಾರ, ಮಂಜುಳಾ, ಮಹೇಬೂಬ ಬಿ, ಚೈತ್ರಾ, ಸಂಜನಾ ಹಾಗೂ ಶಿಕ್ಷಕ ವೃಂದ, ಸಿಬ್ಬಂದಿ, ಪಾಲಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದರು.