ಸುದ್ದಿ ಸಂಗ್ರಹ ಚಿತ್ತಾಪುರ
ಜೀಪ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೆ ಸಾವನ್ನಪ್ಪಿದ್ದು, 6 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಾಡಬೂಳ ಸಮೀಪ ಶುಕ್ರವಾರ ನಡೆದಿದೆ.
ಘಟನೆಯಲ್ಲಿ ಹರಳಯ್ಯ ಎಂಬ ವ್ಯಕ್ತಿ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಗಾಯಗೊಂಡವರನ್ನು ಕಲಬುರಗಿಯ ಆಸ್ಪತ್ರೆಗೆ ದಾಖಲಿಸಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸೇಡಂ ನಿಂದ ಕಲಬುರಗಿಗೆ ಕಾರು ತೆರಳುತ್ತಿತ್ತು, ಕಲಬುರಗಿಯಿಂದ ಮಳಖೇಡ್ ಗ್ರಾಮಕ್ಕೆ ಜೀಪ್ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಮಾಡಬೂಳ ಪಿಎಸ್’ಐ ಗೌತಮ್, ಕ್ರೈಂ ಪಿಎಸ್’ಐ ಸಿದ್ಧಲಿಂಗ, ಸಿಬ್ಬಂದಿಗಳಾದ ವೀರಶೆಟ್ಟಿ, ಪ್ರೇಮ್, ಕೊಟ್ರೇಶ ಮತ್ತು ಚಂದ್ರಶೇಖರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತು ಮಾಡಬೂಳ ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಿಸಲಾಗಿದೆ.