ಚಿತ್ತಾಪುರ: ಒಬ್ಬ ಕವಿಯು ಕೇವಲ ಪೆನ್ನು ಕಾಗದ ಹಿಡಿದು ಕಾವ್ಯ ರಚನೆ ಮಾಡಲಿಕ್ಕೆ ಕಲ್ಪನಾ ಶಕ್ತಿಗಿಂತ ಬಡತನ , ಹಸಿವು, ಶೋಷಣೆ ಇವುಗಳ ಸ್ವಯಂ ಅನುಭವದಿಂದ ಕಾವ್ಯದ ವಸ್ತುಗಳಾಗುತ್ತವೆ ಎಂದು ಕೋಡ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಚಾರ್ಯ ರಾಜಶೇಖರ ಮಾಂಗ್ ಹೇಳಿದರು.
ಪಟ್ಟಣದ ಸಹ್ಯಾದ್ರಿ ಕಾಲೇಜಿನಲ್ಲಿ ನಡೆದ ನಾಗಾವಿ ಸಾಂಸ್ಕೃತಿಕ ಪ್ರತಿಷ್ಟಾನದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮುಂಗಾರು ಕಾವ್ಯ ಸಿಂಚನ ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸಿ ಉದ್ಘಾಟಿಸಿ ಮಾತನಾಡಿದ ಅವರು, ಕಾವ್ಯ ಬದುಕಿನ ತಲ್ಲಣ ತಳಮಳ ಹೊರ ಹಾಕುವ ಮಾದ್ಯಮವಾಗಿದೆ ಎಂದರು.
ಕವಿಯು ವಿಶಾಲ ಮನೋಭಾವ ಉಳ್ಳವನಾಗಿ ತಾನು ರಚಿಸಿದ ಕಾವ್ಯ ಜವಾಬ್ದಾರಿ ಹೆಚ್ಚಿಸುತ್ತದೆ ಮತ್ತು ಹೂಣೆಗಾರಿಕೆಯನ್ನು ನೆನಪಿಸುತ್ತದೆ, ಮೌಢ್ಯತೆ ನಿವಾರಣೆ ಬಗ್ಗೆ ಕವನಗಳು ಬರೆಯಬೇಕು ಎಂದು ಸಲಹೆ ನೀಡಿದರು.
ಪ್ರತಿಸ್ಥಾನದ ಅಧ್ಯಕ್ಷ ನಾಗಯ್ಯ ಸ್ವಾಮಿ ಅಲ್ಲೂರ ಮಾತನಾಡಿ, ನಮ್ಮ ಪ್ರತಿಷ್ಠಾನದ ಮೂಲಕ ಸಾಹಿತ್ಯ ಕಾರ್ಯಕ್ರಮಗಳು ಹೆಚ್ಚಿಸುವದು, ಜನಪದ ಕಲಾವಿದರನ್ನು ಮುನ್ನಲೆಗೆ ತರುವುದು ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ಎಲ್ಲಾ ವಯೋಮಾನದವರಿಗೆ ಆಯೋಜನೆ ಮಾಡುವ ಉದ್ದೇಶವಿದೆ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಬಳೂ0ಡಗಿ, ಸಹಾಯಕ ಕೃಷಿ ಅಧಿಕಾರಿ ಸಂಜೀವಕುಮಾರ ಮಾನಕರ್ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹ್ಯಾದ್ರಿ ಕಾಲೇಜಿನ ಪ್ರಾಚಾರ್ಯ ಶರಣಪ್ಪ ಹಾಶೆಟ್ಟಿ ವಹಿಸಿದ್ದರು. ಮಹಾತ್ಮ ಗಾಂಧಿ ಪ್ರೌಢ ಶಾಲೆ ಮುಖ್ಯಗುರು ರಮೇಶ ಬೆಟಗೇರಿ ಇದ್ದರು.
ಕಾರ್ಯಕ್ರಮದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಮೋನಯ್ಯ ಪಂಚಾಳ, ಸಿದ್ದಯ್ಯ ಶಾಸ್ತ್ರಿ, ಉಮೇಶಬಾಬು ಸಾಸನಾಳ, ಮಡಿವಾಳಪ್ಪ ಹೇರೂರ, ಚಂದ್ರಕಲಾ ಪಾಟೀಲ, ದಯಾನಂದ ಖಜೂರಿ, ವಿಶ್ವಾರಾಧ್ಯ ಕರದಾಳ, ವೀರಪ್ಪ ಕುಂಬಾರ, ಅಯ್ಯಣ್ಣ ಅವಂಟಿ, ಮಲ್ಲಿಕಾರ್ಜುನ ಮದನಕರ್, ರಂಗನಾಥ ದೊರೆ, ವೀರಭದ್ರಪ್ಪ ಗುರುಮಿಟಕಲ್, ಚಂದ್ರಶೇಖರ ಬಳ್ಳಾ, ನರಸಪ್ಪ ಚಿನ್ನಾಕಟ್ಟಿ, ಲಲಿತಾ ರೇಷ್ಮಿ, ಗಂಗಣ್ಣ ಹೊಸೂರ ಭಾಗವಹಿಸಿ ರೈತರ ಮುಂಗಾರು ಮಳೆ ಹರ್ಷ, ಬೆಳೆ ನೋವ ನಲಿವು ಸಂಕಷ್ಟಗಳ ಬಗ್ಗೆ ಕವಿಗಳ ಕಾವ್ಯ ವಾಚನದಲ್ಲಿ ಅನಾವರಣಗೊಂಡವು. ಎಲ್ಲರಿಗೂ ಪ್ರಮಾಣಪತ್ರ ಹಾಗೂ ಕಾವ್ಯ ತೊರೆ ಪುಸ್ತಕ ಕೊಟ್ಟು ಗೌರವಿಸಲಾಯಿತು.
ರಕ್ಷಿತಾ ಮತ್ತು ಭಾಗ್ಯಶ್ರೀ ಪ್ರಾರ್ಥನೆ ಗೀತೆ ಹಾಡಿದರು. ಮಲ್ಲಿಕಾರ್ಜುನ ಮದನಕರ್ ಸ್ವಾಗತಿಸಿದರು. ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿದರು, ಸರಸ್ವತಿ ಬಮ್ಮನಳ್ಳಿ ವಂದಿಸಿದರು.