ಕಲಬುರಗಿ: ಹಗಲು ಕಬ್ಬು ಕಟಾವು, ರಾತ್ರಿ ಮನೆ ಕಳವು

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಕಲಬುರಗಿ
ಹಗಲು ಕಬ್ಬು ಕಟಾವು ಮಾಡಿ, ರಾತ್ರಿ ಮನೆಗಳ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಎಂ.ಬಿ.ನಗರ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಂದ 4 ಪ್ರಕರಣಗಳಿಗೆ ಸಂಬಂಧಿಸಿದ 67 ಗ್ರಾಂ ಚಿನ್ನಾಭರ ಮತ್ತು 12.14 ಲಕ್ಷ ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ.

ಅಳಂದ ತಾಲೂಕಿನ ಕಮಸರ ನಾಯಕ ತಾಂಡಾದ ಅಪ್ಪಾಜಿ
ಅಲಿಯಾಸ್ ಅಪ್ಪು ಗಂಗಾರಾಮ ಚವ್ಹಾಣ (22), ಶಕಾಪುರ
ತಾಂಡಾದ ಸಂತೋಷ ಅಲಿಯಾಸ್ ಅಂತಾ ಗೋವಿಂದ ಚವ್ಹಾಣ (30) ಬಂಧಿತ ಆರೋಪಿಗಳು.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್‌.ಡಿ ಮಾಹಿತಿ ನೀಡಿದ ಅವರು, ನಗರದ ವೀರೇಂದ್ರ ಪಾಟೀಲ ಬಡಾವಣೆಯ ನಿವಾಸಿ ವೀರಭದ್ರಯ್ಯ ಸ್ವಾಮಿ ಅವರ ಮನೆಯಲ್ಲಿ ಕಳೆದ ತಿಂಗಳು ಜೂನ್ 3 ರಂದು ಕಳ್ಳತನ ನಡೆದಿರುವ ಬಗ್ಗೆ ಎಂ.ಬಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಕೆಕೆಆರ್‌ಟಿಸಿಯಲ್ಲಿ ‌ಎಫ್’ಡಿಸಿ ಆಗಿರುವ ಸ್ವಾಮಿ ಅವರು
ಕುಟುಂಬದೊಂದಿಗೆ ಬಸವಕಲ್ಯಾಣದ ತ್ರಿಪುರಾಂತ ಗ್ರಾಮಕ್ಕೆ ಮದುವೆಗೆಂದು ನಾಲ್ಕು ದಿನಗಳ ಕಾಲ ಹೋದಾಗ ನಮ್ಮ ಮನೆಯ ಕೀಲಿ ಮುರಿದು ಅಲಮಾರಿಯಲ್ಲಿದ್ದ 1.20 ಲಕ್ಷ ರೂ ನಗದು, 20 ಗ್ರಾಂ. ಚಿನ್ನದ ತಾಳಿ ಚೈನ್, 15 ಗ್ರಾಂ. 3 ಉಂಗುರ ಕಳ್ಳತನ ಮಾಡಲಾಗಿತ್ತು ಎಂದರು.

ಪ್ರಕರಣದ ಪತ್ತೆಗಾಗಿ ಡಿಸಿಪಿ ಪ್ರವೀಣ ಎಚ್.ನಾಯಕ್, ಎಸಿಪಿ ಶಿವನಗೌಡ ಪಾಟೀಲ ಮತ್ತು ಪಿಐ ಖಾಜಾ ಹುಸೇನ ನೇತೃತ್ವದಲ್ಲಿ ಎಎಸ್‌ಐ ನಜಮೊದ್ದಿನ್‌, ಸಿಬ್ಬಂದಿ ರಾಜು ಟಾಕಳೆ, ದಸ್ತಯ್ಯ, ಬೀರಪ್ಪ, ಸಂತೋಷ, ನಾಗರಾಜ, ಬಸವರಾಜ, ಗುರುರಾಜ, ಮಹೇಶ, ಕಾತಿರಾಮ, ಸಿದ್ಧರಾಮ, ಚನ್ನವೀರೇಶ ಮತ್ತು ಸುಮೀತ ಅವರನ್ನೊಳಗೊಂಡ ತಂಡ ಬುಧವಾರ ಆರೋಪಿಗಳನ್ನು ಬಂಧಿಸಲಾಗಿದೆ. ಪಕ್ಕದ ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದ್ದ ದೃಶ್ಯಾವಳಿ ಕಳ್ಳರ ಸುಳಿವು ನೀಡಿದೆ ಎಂದರು.

ನಾಲ್ಕು ಪ್ರಕರಣಗಳಲ್ಲಿ 67 ಗ್ರಾಂ ಚಿನ್ನಾಭರಣ, 1.02 ಲಕ್ಷ ನಗದು ಮತ್ತು 1 ಬೈಕ್ ಜಪ್ತಿ ಮಾಡಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದರು.

ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಪೊಲೀಸ್ ಕಮಿಷನರ್ ಇದೆ ಸಂದರ್ಭದಲ್ಲಿ ಶ್ಲಾಘಿಸಿ ಪ್ರಶಂಸಾಪತ್ರ ವಿತರಿಸಿದರು.

ರಾತ್ರಿ ಹೊತ್ತು ನಗರಕ್ಕೆ ಬರುತ್ತಿದ್ದ ಕಳ್ಳರು
‘ಅಪ್ಪು ಚವ್ಹಾಣ ಮತ್ತು ಸಂತೋಷ ಚವ್ಹಾಣ ಇಬ್ಬರು ಸಂಬಂಧಿಕರಾಗಿದ್ದು, ಹಗಲಲ್ಲಿ ಕೃಷಿ ಕೂಲಿ ಕೆಲಸ ಮಾಡುವುದು. ರಾತ್ರಿ ಬೈಕ್ ಮೂಲಕ ನಗರಕ್ಕೆ ಬಂದು. ದೂರಲ್ಲಿ ಬೈಕ್ ನಿಲ್ಲಿಸಿ ನಗರದ ಹೊರವಲಯದ ಕೀಲಿ ಹಾಕಿದ ಮನೆಗಳನ್ನು ಹುಡುಕಿ ಕಳ್ಳತನ ಮಾಡುತ್ತಿದ್ದರು’ ಎಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್‌.ಡಿ ಹೇಳಿದರು.

ಆಪ್ಪು ಚವ್ಹಾಣ ವಿರುದ್ಧ ನರೋಣಾ ಸೇರಿದಂತೆ ವಿವಿಧ
ಠಾಣೆಗಳಲ್ಲಿ 4 ಹಳೆಯ ಪ್ರಕರಣಗಳಿವೆ, ಸಂತೋಷನ ವಿರುದ್ಧ‌ ನಿಂಬರ್ಗಾ 4, ಮಾದನಹಿಪ್ಪರಗಾ 1 ಮತ್ತು ಆಳಂದದಲ್ಲಿ 2 ಸೇರಿ ಒಟ್ಟು 7 ಪ್ರಕರಣಗಳಿವೆ. ದುಂದುವೆಚ್ಚಕ್ಕಾಗಿ ಕಳ್ಳತನ ಮಾಡುತ್ತಿದ್ದ ಇವರು ಕಳ್ಳತನ ಮಾಡಿದ ಮೇಲೆ ಒಂದೆರಡು ತಿಂಗಳು ಬಿಡುವು ಕೊಡುತ್ತಿದ್ದರು, ಕದ್ದಿರುವ ಚಿನ್ನಾಭರಣಗಳಲ್ಲಿ ಕೆಲವನ್ನು ಮಾರಾಟ ಮಾಡಿದ್ದಾರೆ’ ಎಂದರು.

Leave a Reply

Your email address will not be published. Required fields are marked *