ಸುದ್ದಿ ಸಂಗ್ರಹ ಚಿತ್ತಾಪುರ
ನೂತನ ಸಹಾಯಕ ಖಜಾನೆ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಸೈಯದ್ ನಾಸಿರ್ ಹಶ್ಮಿ ಅವರನ್ನು ಸರ್ಕಾರಿ ನೌಕರರ ಸಂಘದಿಂದ ಪಟ್ಟಣದಲ್ಲಿ ಸನ್ಮಾನಿಸಲಾಯಿತು.
ತಾಲೂಕು ಉಪ ಖಜಾನೆ ಕಚೇರಿಗೆ ಸಹಾಯಕ ಖಜಾನೆ ಅಧಿಕಾರಿಯಾಗಿ ಸೈಯದ್ ನಾಸಿರ್ ಹಶ್ಮಿ ಅವರು ಹಾಜರಾದ ಪ್ರಯುಕ್ತ ಇಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ನಾಲವಾರ, ಪದಾಧಿಕಾರಿಗಳಾದ ಪರಶುರಾಮ, ಉದಯಶಂಕರ ಮೋದಿ, ಅಮೃತ ಕ್ಷೀರಸಾಗರ, ಅಬ್ದುಲ್ ಸಲೀಂ, ಶರಣಪ್ಪ ಏಕೂರ, ಹುಸೇನ ಪಾಶಾ, ಬೇಬಿ ಬಿರಾದಾರ ಸೇರಿದಂತೆ ಅನೇಕರು ಇದ್ದರು.