ವಾಡಿ ಜನತೆಯ ಸಂಕಷ್ಟಕ್ಕೆ ಸ್ಪಂದಿಸಲು ಜಿಲ್ಲಾಧಿಕಾರಿಗಳಿಗೆ ಬಿಜೆಪಿಯಿಂದ ಮನವಿ

ಪಟ್ಟಣ

ವಾಡಿ: ಪಟ್ಟಣವು ಸುಮಾರು ಐವತ್ತು ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣವಾಗಿದೆ. ಪ್ರಖ್ಯಾತ ಎಸಿಸಿ (ಆದಾನಿ) ಸಿಮೆಂಟ್ ಹಾಗೂ ಬೃಹತ್ ರೈಲ್ವೆ ನಿಲ್ದಾಣ‌ ಕೂಡಾ ಇದ್ದರು ಜನರು ಜೀವನ ಸಾಗಿಸಲು ಹರಸಾಹಸ ಸುಮಾರು ವರ್ಷಗಳಿಂದ ತಪ್ಪಿಲ್ಲ, ಪಟ್ಟಣದ ಜನತೆಯ ತೊಂದರೆಗೆ ಸ್ಪಂದಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಪತ್ರ ಬರೆದಿದ್ದಾರೆ.

ಪಟ್ಟಣಕ್ಕೆ ಮೂರು ನಾಲ್ಕು ದಿನಗಳಿಗೊಮ್ಮೆ ನೀರು ಸರಬರಾಜು ಆಗುತ್ತಿದೆ, ಪಕ್ಕದಲ್ಲೇ ಎರಡೂ ನದಿಗಳಿದ್ದರೂ ಅದು ರಾಡಿ ನೀರು, ಚರಂಡಿ ನೀರು ರಸ್ತೆ, ಮನೆಯೊಳಗೆ ಬರುತ್ತವೆ. ಅಸಮರ್ಪಕ ರಸ್ತೆ, ಹುರಿಯದ ಬಡಾವಣೆಯ ಬಿದಿ ದೀಪಗಳು, ಹಂದಿ ನಾಯಿಗಳ ಕಾಟದ ಜೊತೆ ಕಳ್ಳತನದ ಭಯ, ಬಸ್ ನಿಲ್ದಾಣ ಇಲ್ಲದೆ ಇರುವುದು, ಪಟ್ಟಣದಲ್ಲಿ ಪುರಸಭೆಯ ಸ್ವಚ್ಚತಾ ಕಾರ್ಯ ಸಮರ್ಪಕವಾಗಿ ನಿರ್ವಹಿಸದೆ ಇರುವುದರಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಜನತೆ, ಇಲ್ಲಿನ ಪುರಸಭೆಯಲ್ಲಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿರುವುದರಿಂದ ಸಾಮಾನ್ಯ ಸಾರ್ವಜನಿಕ ಸವಲತ್ತುಗಳಿಲ್ಲದೆ ಜನರ ಬದುಕು ದುಸ್ತರವಾಗಿದೆ. ಇದರ ಬಗ್ಗೆ ಸಾಕಷ್ಟು ಸಲ ತಮ್ಮ ಗಮನಕ್ಕೆ ತಂದರು ಪ್ರಯೋಜನವಾಗುತ್ತಿಲ್ಲ.

ಡೀಸೆಲ್’ನಲ್ಲಿ, ಪುರಸಭೆಯ ಕರ್ಮಚಾರಿಗಳ ಹಾಜರಾತಿಯಲ್ಲಿ ಅಧಿಕಾರಿಗಳು ಗೋಲ್ ಮಾಲ್ ಮಾಡುತ್ತಿದ್ದಾರೆ. ಪಟ್ಟಣದಲ್ಲಿ ನಡೆಯತ್ತಿರುವ ಸಿಸಿ ರಸ್ತೆಗಳನ್ನು ಕಳಪೆಯಾಗಿ ನಿರ್ಮಿಸಿ ಸಾರ್ವಜನಿಕ ಸಂಪತ್ತು ಕೆಲ ಭ್ರಷ್ಟ ಅಧಿಕಾರಿಗಳ, ಗುತ್ತಿಗೆದಾರರ ಪಾಲಾಗುತ್ತಿದೆ.
ಇಲ್ಲಿನ ಅಧಿಕಾರಿಗಳು ಮೀಟಿಂಗ್ ಗಳ ನೆಪದಲ್ಲಿ ಪುರಸಭೆಗೆ ಬರದೆ ಸಾರ್ವಜನಿಕರಿಗೆ ತೊಂದರೆ ನೀಡುವುದು ಸಾಮಾನ್ಯವಾಗಿ ಬಿಟ್ಟಿದೆ.ಯಾವುದೇ ಕೆಲಸಕ್ಕೆ ಲಂಚ ಕೊಡಬೇಕಾದ ಪರಿಸ್ಥಿತಿ ಇದೆ. ಸಾರ್ವಜನಿಕರ ಕಣ್ಣೆದುರೆ ಎಲ್ಲಾ ಸಮಸ್ಯೆಗಳು ತಾಂಡವಾಡುತ್ತಿವೆ, ದಿನಾ ಪತ್ರಿಕೆಗಳಲ್ಲಿ ಸುದ್ದಿ ಬರುತ್ತಿದ್ದರು ಅಧಿಕಾರಿಗಳ ಹೆಚ್ಚುತ್ತ ಕೊಳ್ಳುತ್ತಿಲ್ಲ. ಚುನಾಯಿತ ಪ್ರತಿನಿಧಿಗಳು ಇಲ್ಲದೇ ಇರುವುದು ಹಾಗೂ ಮೇಲಾಧಿಕಾರಿಗಳು ಸುಮ್ಮನೆ ಇರುವುದರಿಂದ ತಮ್ಮ ಕರ್ತವ್ಯ ಮರೆತು ಭ್ರಷ್ಟಾಚಾರದಲ್ಲಿ ಭಾಗಿಯಾಗುವುದೇ ಕಾಯಕ ಮಾಡಿ ಕೊಂಡ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈಗಲಾದರೂ ತಾವು ಸೂಕ್ತ ಕಾನೂನಿನ ಕ್ರಮ ಕೈಗೊಳ್ಳಿ, ಇಲ್ಲದಿದ್ದರೆ ಕೆಲವೇ ದಿನಗಳಲ್ಲಿ ಪುರಸಭೆ ಮುಂದೆ ಸಾರ್ವಜನಿಕರ ಸಂಪತ್ತಿನ ರಕ್ಷಣೆಗಾಗಿ ಮತ್ತು ಭ್ರಷ್ಟ ಅಧಿಕಾರಿಗಳಿಂದ ಜನಸಾಮಾನ್ಯರ ಅನುಭವುಸುತ್ತಿರುವ ಗೋಳಾಟದ ವಿರುದ್ಧ ನ್ಯಾಯಕ್ಕಾಗಿ ಪ್ರತಿಭಟನೆ ಹಮ್ಮಿಕೊಳ್ಳುಲಾಗುವುದು.

ಪಟ್ಟಣದ ಸಾರ್ವಜನಿಕರ ಹಿತಾಸಕ್ತಿಗಾಗಿ ಈ ಕೆಳಗಿನ ಕ್ರಮ ಕೈಗೊಳ್ಳಲು ಮನವಿ

1) ಶುದ್ಧ ನೀರು ಪೂರೈಕೆ ಜೊತೆಗೆ ಪ್ರತಿ ದಿನ ನೀರು ಸರಬರಾಜು ಮಾಡುವದು.

2) ಪುರಸಭೆ ಸಂಪತ್ತಿನ ಭ್ರಷ್ಟಾಚಾರದಲ್ಲಿ ತೋಡಗಿದ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮಕೈಗೊಳ್ಳುವುದು.

3) ಪಟ್ಟಣದಲ್ಲಿ ಮಿತಿಮೀರಿದ ಪರಿಸರ ಮಾಲಿನ್ಯಕ್ಕೆ ಕಡಿವಾಣ ಹಾಕಿ ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಕೈಗೊಳ್ಳುವುದು.

4) ತ್ಯಾಜ್ಯ ಸಂಸ್ಕರಣಾ ಘಟಕದ ನಿರ್ವಹಣೆ ಮಾಡಿ ಪರಿಸರ ಸಂರಕ್ಷಣೆಗೆ ಮಾಡುವದು ಮತ್ತು ಎಲ್ಲಾ ವಾರ್ಡ್ ಸಸಿ ನೆಟ್ಟು ಪೋಷಿಸುವುದು.

5) ಸಾರ್ವಜನಿಕ ಶೌಚಾಲಯ ಮತ್ತು ಬಸ್ ನಿಲ್ದಾಣ ನಿರ್ಮಾಣಕ್ಕೆ ತಕ್ಷಣ ಮುಂದಾಗುವದು.

6) ತರಕಾರಿ ಮತ್ತು ಮಾಂಸಕ್ಕೆ ಪ್ರತ್ಯೇಕ ಮಾರುಕಟ್ಟೆ ಒದಗಿಸಿ, ಅಕ್ರಮ ಕಸಾಯಿಖಾನೆಗಳ ವಿರುದ್ಧ ಕ್ರಮಕೈಗೊಳ್ಳುವದು.

7) ಪುರಸಭೆಯಲ್ಲಿ ಮತ್ತು ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರ ಅಳವಡಿಸಿ ಎಂದು ಕೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *