ವಾಡಿ: ಫೆ.15 ರಂದು ಪಟ್ಟಣದಲ್ಲಿ ನಡೆಯುವ ಸಂತ ಸೇವಾಲಾಲ್ ಮಹಾರಾಜರ 286ನೇ ಜಯಂತೋತ್ಸವ ಸಮಾರಂಭಕ್ಕೆ ಬಿಜೆಪಿ ರಾಜಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರನ್ನು ಬಂಜಾರ ಸಮಾಜದ ಮುಖಂಡರು ಆಹ್ವಾನಿಸಿದರು.
ಸೇಡಂ ತಾಲೂಕಿನ ಬೀರನಳ್ಳಿಯಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಬಿ.ವೈ ವಿಜಯೇಂದ್ರ ಅವರನ್ನು ಕಲಬುರಗಿಯಲ್ಲಿ ಭೇಟಿಯಾಗಿ ಆಮಂತ್ರಿಸಿದರು.
ಪಟ್ಟಣದಲ್ಲಿ ಸುಮಾರು ಇಪ್ಪತ್ನಾಲ್ಕು ವರ್ಷಗಳಿಂದ ಬಂಜಾರ ಸಮಾಜದ ಮುಖಂಡರು ಸಂಪ್ರದಾಯದ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ಜಯಂತಿ ಆಚರಿಸಿಕೊಂಡು ಬರುತ್ತಿದ್ದಾರೆ. ಈ ಭಾಗದ ಸ್ವಾಮಿಜಿಗಳು, ಎಲ್ಲಾ ಸಮಾಜದ ಮುಖಂಡರು ಭಾಗವಹಿಸಿ ಹಬ್ಬದಂತೆ ಸಂಭ್ರಮಿಸುವುದು ಈ ಜಯಂತಿಯ ವಿಶೇಷವಾಗಿದೆ.
ಈ ಸಂದರ್ಭದಲ್ಲಿ ಸೇವಾಲಾಲ್ ಮಹಾರಾಜರ ಜಯಂತೋತ್ಸವ ಸಮಿತಿ ಅಧ್ಯಕ್ಷ ವಿಠಲ ವಾಲ್ಮಿಕಿ ನಾಯಕ, ಬಂಜಾರ ಸಮಾಜದ ಅಧ್ಯಕ್ಷ ರಮೇಶ ಕಾರಬಾರಿ, ಪ್ರಧಾನ ಕಾರ್ಯದರ್ಶಿ ಸೋಮು ಚವ್ಹಾಣ, ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ, ಮುಖಂಡರಾದ ಕಿಶನ ಜಾಧವ, ಅಂಬದಾಸ ಜಾಧವ, ರಾಜು ಪವಾರ, ನಾಗರಾಜಗೌಡ ಗೌಡಪ್ಪನೂರ, ದತ್ತಾ ಖೈರೆ ಸೇರಿದಂತೆ ಅನೇಕರು ಇದ್ದರು.