ಬಲೂನಿನಂತೆ ಊದಿಕೊಂಡ ಈಕೆಯ ಹೊಟ್ಟೆಯಲ್ಲಿ ಮಕ್ಕಳೆಷ್ಟು ಗೊತ್ತಾ ?

ಅಂತಾರಾಷ್ಟ್ರೀಯ

ಗರ್ಭಧಾರಣೆ ಮಹಿಳೆಯ ಜೀವನದ ಪ್ರಮುಖ ಘಟ್ಟವಾಗಿದೆ. ಇಲ್ಲೊಬ್ಬ ತಾಯಿಯ ಹೊಟ್ಟೆಯಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 4 ಮಕ್ಕಳು ಬೆಳೆಯುತ್ತಿವೆ. ಇದರಿಂದ ಆಕೆಯ ಹೊಟ್ಟೆ ಬಲೂನಿನಂತೆ ಊದಿಕೊಂಡಿದ್ದು, ಇದರಿಂದ ಆಕೆಗೆ ನಡೆಯಲು, ಕುಳಿತುಕೊಳ್ಳಲು ತುಂಬಾ ಕಷ್ಟಪಡುವಂತಾಗಿದೆ.

ಆಕೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೋಡುಗರು ಬೆಚ್ಚಿಬೀಳುವಂತೆ ಮಾಡಿದೆ. ಈ ವಿಡಿಯೊ ಈಗಾಗಲೇ ಲಕ್ಷಾಂತರ ವ್ಯೂವ್ಸ್ ಗಳಿಸಿದೆ.

ವೈರಲ್ ಆದ ವಿಡಿಯೊದಲ್ಲಿ, 4 ಶಿಶುಗಳನ್ನು ಹೊತ್ತು ಆಕೆ ನಡೆಯಲು ಕಷ್ಟಪಡುವ ದೃಶ್ಯ ಸೆರೆಯಾಗಿದೆ. ತನ್ನ ಹೊಟ್ಟೆಯಲ್ಲಿ 4 ಮಕ್ಕಳು ಇರುವುದನ್ನು ತಿಳಿದು ಮಹಿಳೆ ಕೂಡ ಶಾಕ್‌ ಆಗಿದ್ದಾಳೆ.

ಅಮೇರಿಕನ್ ಪ್ರೆಗ್ನೆನ್ಸಿ ಅಸೋಸಿಯೇಷನ್ ​​ಪ್ರಕಾರ, ನೈಸರ್ಗಿಕವಾಗಿ ಸಂಭವಿಸುವ ಗರ್ಭಧಾರಣೆಯಲ್ಲಿ 4 ಮಕ್ಕಳು ಬೆಳೆಯುವ ಸಾಧ್ಯತೆ ಅಪರೂಪ ಮತ್ತು ಆಶ್ಚರ್ಯಕರವಾಗಿದೆ ಎನ್ನಲಾಗಿದೆ. ಸರಿಸುಮಾರು 7 ಕೋಟಿ ಜನರಲ್ಲಿ ಒಬ್ಬರು ಈ ರೀತಿ ಗರ್ಭ ಧರಿಸುತ್ತಾರೆ ಎಂದು ವೈದ್ಯರು ಹೇಳಿದ್ದಾರೆ. ಇಂತಹ ಗರ್ಭಧಾರಣೆಯು ತಾಯಿ ಮತ್ತು ಹುಟ್ಟಲಿರುವ ಮಕ್ಕಳು ಇಬ್ಬರ ಆರೋಗ್ಯದ ಮೇಲೂ ಅಪಾಯಗಳನ್ನುಂಟು ಮಾಡುತ್ತದೆ. ಅಕಾಲಿಕ ಹೆರಿಗೆ, ಸರಿಯಾಗಿ ಬೆಳೆವಣಿಗೆಯಾಗದ ಅಂಗಗಳು ಮತ್ತು ಕಡಿಮೆ ಜನನ ತೂಕದಂತಹ ಸಮಸ್ಯೆ ಕಾಡುತ್ತವೆ. ಇಂತಹ ಗರ್ಭಧಾರಣೆಯಲ್ಲಿ ತಾಯಿಗೆ ಪೌಷ್ಟಿಕಾಂಶದ ಕೊರತೆ, ನಡೆದಾಡಲು ಸಮಸ್ಯೆ ಮತ್ತು ಹೆರಿಗೆಯ ಸಮಯದಲ್ಲಿ ಉಂಟಾಗುವ ತೊಂದರೆಗಳ ಸಾಧ್ಯತೆ ಹೆಚ್ಚಾಗಿರುತ್ತದೆ.

ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ವೈದ್ಯರು ಮಹಿಳೆಗೆ ಕಟ್ಟುನಿಟ್ಟಿನ ಬೆಡ್ ರೆಸ್ಟ್ ಪಾಲಿಸುವಂತೆ ಮತ್ತು ಆಗಾಗ್ಗೆ ವೈದ್ಯಕೀಯ ಮೇಲ್ವಿಚಾರಣೆಗೆ ಒಳಗಾಗುವಂತೆ ಸೂಚಿಸಿದ್ದಾರೆ. ಇದರಿಂದ ಗರ್ಭಧಾರಣೆಯನ್ನು ಸುರಕ್ಷಿತವಾಗಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸಾಕಷ್ಟು ಜನ ಕಾಮೆಂಟ್‌ ಮಾಡಿದ್ದಾರೆ. ಅನೇಕರು ತಾಯಿಯ ಬಗ್ಗೆ ಮೆಚ್ಚುಗೆ ಮತ್ತು ಸಹಾನುಭೂತಿಯನ್ನು ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *