ಇಂದೋರ್: ಸಾಧಿಸುವ ಛಲವೊಂದಿದ್ದರೆ ಎಂತಹ ಕೆಲಸವನ್ನು ಬೇಕಾದರೂ ಮಾಡಬಹುದು, ಅಸಾಧ್ಯವಾದದ್ದು ಸಾಧ್ಯ ಎಂದು ತೋರಿಸಬಹುದು. ದೈಹಿಕವಾಗಿ ಗಟ್ಟಿಮುಟ್ಟಾಗಿದ್ದರೆ ಏನು ಬೇಕಾದರೂ ಮಾಡಬಹುದು. ಆದರೆ ದೈಹಿಕ ನ್ಯೂನತೆಯಿದ್ದರೂ ಇಡಿ ದೇಶವೇ ಕೊಂಡಾಡುವಂತ ಸಾಧನೆಯೊಂದು ಇಂದೋರ್‌ನ ಮಹಿಳೆಯೊಬ್ಬರು ಮಾಡಿ ತೋರಿಸಿದ್ದಾರೆ.
ಗುರುದೀಪ್ ಕೌರ್ ವಾಸು 34 ವರ್ಷ ವಯಸ್ಸಿನ ಇವರು ಊರಿನಲ್ಲಿ ‘Indore’s Helen Keller’ ಎಂದೇ ಪ್ರಖ್ಯಾತಿ ಪಡೆದುಕೊಂಡಿದ್ದಾರೆ. (ಹೆಲೆನ್ ಆಡಮ್ಸ್ ಕೆಲ್ಲರ್ – ಅಮೆರಿಕ ಮೂಲದ ಕಿವುಡು ಮತ್ತು ಅಂಧ ವ್ಯಕ್ತಿಯಾಗಿ ಕಲಾ ಪದವಿ ಪಡೆದ ಪ್ರಪ್ರಥಮ ವ್ಯಕ್ತಿ)
ಗುರುದೀಪ್ ಅವರ ಸಾಧನೆ ಹೆಲೆನ್ ಕೆಲ್ಲರ್ ಅವರ ಸಾಧನೆಗಿಂತ ಕಡಿಮೆಯೆನಿಲ್ಲ. ಇವರು ಮಾಡಿದ ಸಾಧನೆ ಇಡಿ ದೇಶಕ್ಕೆ ಮಾದರಿಯಾಗಿದೆ.
ಗುರುದೀಪ್ ಅವರಿಗೆ ಕಣ್ಣು ಕಾಣಲ್ಲ, ಕಿವಿ ಕೇಳಲ್ಲ, ಮಾತನಾಡಲು ಬರಲ್ಲ. ಆದರೆ ಅವರು ಮಧ್ಯಪ್ರದೇಶದ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ನೇಮಕಾತಿ ಆಗುವ ಮೂಲಕ ಸಾಧನೆಗೆ ಛಲವೊಂದಿದ್ದರೆ ಸಾಕು ಏನು ಬೇಕಾದರೂ ಸಾಧಿಸಿ ತೋರಿಸಬಹುದು ಎಂಬಂತೆ ಇವರು ಸಾಧಿಸಿ ತೋರಿಸಿದ್ದಾರೆ.
ಶೈಕ್ಷಣಿಕ ಜೀವನ
ಇದೆ ವರ್ಷ ಕೌರ್ ಮಧ್ಯಪ್ರದೇಶ ಮಂಡಳಿಯ 12ನೇ ತರಗತಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. 400 ಅಂಕಗಳಲ್ಲಿ 207 ಅಂಕಗಳನ್ನು ಪಡೆದು ಎರಡನೇ ವಿಭಾಗದಲ್ಲಿ ಉತ್ತೀರ್ಣರಾಗಿದ್ದಾರೆ. ಅವರ ಈ ಸಾಧನೆ ಮಧ್ಯ ಪ್ರದೇಶ ರಾಜ್ಯದ ಶೈಕ್ಷಣಿಕ ಇತಿಹಾಸದಲ್ಲಿ ದಾಖಲಾಗಿತ್ತು. ದೈಹಿಕ ನೂನ್ಯತೆಯ ಹೊರತಾಗಿಯೂ ಇಂಗ್ಲಿಷ್, ಭೂಗೋಳ, ರಾಜ್ಯಶಾಸ್ತ್ರ, ಚಿತ್ರಕಲೆ ಮತ್ತು ಡಿಸೈನಿಂಗ್ ನಂತಹ ವಿಷಯಗಳಲ್ಲಿ 12ನೇ ತರಗತಿ ಪರೀಕ್ಷೆಗೆ ಕುಳಿತ ಮೊದಲ ವಿದ್ಯಾರ್ಥಿನಿ ಅವರಾಗಿದ್ದಾರೆ.
ಹಲವು ವರ್ಷಗಳಿಂದ ಗುರುದೀಪ್ ಅವರು ಅಂಗವಿಕಲರಿಗಾಗಿ ಕೆಲಸ ಮಾಡುವ ಆನಂದ್ ಸರ್ವಿಸ್ ಸೊಸೈಟಿ ಎಂಬ ಸರ್ಕಾರೇತರ ಸಂಸ್ಥೆಯಲ್ಲಿ ಪಡೆಯುತ್ತಿದ್ದರು ಎಂದು ವರದಿ ತಿಳಿಸಿದೆ.
ವಿದ್ಯಾಭ್ಯಾಸದಲ್ಲಿ ಉನ್ನತ ಸ್ಥಾನ ಗಳಿಸಬೇಕು, ಕಂಪ್ಯೂಟರ್ ಕೌಶಲ್ಯ ಕಲಿಯಬೇಕು ಮತ್ತು ದಿವ್ಯಾಂಗ (ಅಂಗವಿಕಲ) ಕೋಟಾದಡಿ ಸರ್ಕಾರಿ ಉದ್ಯೋಗ ಪಡೆಯಬೇಕು ಎಂಬ ಆಕಾಂಕ್ಷೆಯನ್ನು ಅವರು ಹೊಂದಿದ್ದರು.
ಸರ್ಕಾರಿ ಉದ್ಯೋಗ ಪಡೆದ ಗಟ್ಟಿಗಿತ್ತಿ
ದಿವ್ಯಾಂಗ (ಅಂಗವಿಕಲ) ಕೋಟಾದಡಿ ಸರ್ಕಾರಿ ಉದ್ಯೋಗ ಪಡೆಯುವ ಗುರಿ ಹೊಂದಿದ್ದ ಕೌರ್, ಮಧ್ಯಪ್ರದೇಶದ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಬಹು ಅಂಗವೈಕಲ್ಯ ಹೊಂದಿರುವವರ ಪ್ರವರ್ಗ IVರಲ್ಲಿ ನೇಮಕ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ದಿವ್ಯಾಂಗ ನೇಮಕಾತಿ ಅಭಿಯಾನದಡಿ ಅರ್ಹತೆಯ ಆಧಾರದ ಮೇಲೆ ನೇಮಕ ಮಾಡಲಾಗಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತೆ ಸಪ್ನಾ ಪಂಕಜ್ ಸೋಲಂಕಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಹೆರಿಗೆಯ ನಂತರ ಉಂಟಾದ ತೊಂದರೆಯಿಂದ ಎರಡು ತಿಂಗಳ ಕಾಲ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ತಾಯಿ ಮಂಜಿತ್ ಕೌರ್ ವಾಸು ಹೇಳಿದ್ದಾರೆ.
ಹುಟ್ಟಿದ ಐದು ತಿಂಗಳವರೆಗೆ ಗುರುದೀಪ್ ಯಾವುದಕ್ಕೂ ಪ್ರತಿಕ್ರಿಯೆ ತೋರಿಸಲಿಲ್ಲ, ನಂತರ ಮಾತನಾಡಲು, ಕೇಳಲು ಮತ್ತು ನೋಡಲು ಸಾಧ್ಯವಿಲ್ಲ ಎಂದು ಕುಟುಂಬಕ್ಕೆ ತಿಳಿಯಿತು ಎಂದು ತಾಯಿ ಹೇಳಿದ್ದಾರೆ.
ದೇಶದಲ್ಲಿ ಟಾಕ್, ಶ್ರವಣ ಮತ್ತು ದೃಷ್ಟಿಹೀನ ಮಹಿಳೆಯೊಬ್ಬರು ಸರ್ಕಾರಿ ಸೇವೆಗೆ ಸೇರುತ್ತಿರುವುದು ಇದೆ ಮೊದಲು ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.
ಗುರುದೀಪ್ ತಮ್ಮ ಕೈ ಮತ್ತು ಬೆರಳುಗಳನ್ನು ಒತ್ತುವ ಮೂಲಕ ‘ಸ್ಪರ್ಶ ಸಂಕೇತ ಭಾಷೆ’ ಜನರೊಂದಿಗೆ ಮಾತನಾಡುತ್ತಾರೆ.