ಭೂಮಿಗೆ ಗಂಗೆಯನ್ನು ಹರಿಸಿದ ಭಗೀರಥ ಮಹರ್ಷಿ: ಎಚ್.ಬಿ ಪಾಟೀಲ

ಜಿಲ್ಲೆ

ಕಲಬುರಗಿ: ಭಾರತ ಅನೇಕ ಮಹನೀಯರ, ಶರಣರ, ಋಷಿ-ಮುನಿಗಳ ತವರೂರಾಗಿದೆ. ಇದರಲ್ಲಿ ಭಗೀರಥ ಮಹರ್ಷಿ ಕೇವಲ ರಾಜ ಮಾತ್ರನಾಗಿರದೆ, ಭಕ್ತಿಯ ಸಂಪನ್ನರಾಗಿದ್ದರು. ಅವರು ಘೋರವಾದ ತಪ್ಪಸ್ಸು ಮಾಡಿ ಭೂಮಿಗೆ ಗಂಗೆಯನ್ನು ಹರಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು.

ನಗರದ ಶಹಾಬಜಾರ ಮಹಾದೇವ ನಗರದಲ್ಲಿರುವ ಸ್ವಾತಿ ಪ್ರೌಢಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ರವಿವಾರ ಜರುಗಿದ ‘ಭಗೀರಥ ಮಹರ್ಷಿ ಜಯಂತಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ನಾವು ನುಡಿಗಟ್ಟಾಗಿ ಬಳಸುವ ‘ಭಗೀರಥ ಪ್ರಯತ್ನ’ ಎಂಬ ಪದವು, ಅವರು ಪಟ್ಟಂತಹ ಪ್ರಯತ್ನ ಎಂಥಹದೆಂದು ನಮಗೆ ತಿಳಿದು ಬರುತ್ತದೆ. ‘ನಿರಂತರ ಪ್ರಯತ್ನವೆ ಸಾಧನೆಗೆ ಕಾರಣ’ ಎಂಬುದು ಭಗೀರಥರ ಪ್ರಮುಖ ಸಂದೇಶ, ತತ್ವವಾಗಿದೆ. ಅವರು ಬಾಲ್ಯದಿಂದಲೆ ಸದ್ಗುಣ, ವಿನಯಶೀಲತೆ, ಸಹೃದಯತೆ, ಸಂಸ್ಕಾರದಂತಹ ಮುಂತಾದರ್ಶ ಗುಣಗಳನ್ನು ಮೈಗೂಡಿಸಿಕೊಂಡಿದ್ದರು. ಅವರು ರಾಜನಾಗಿ ಎಲ್ಲಾ ಪ್ರಜೆಗಳನ್ನು ಗೌರವಯುತವಾಗಿ, ನ್ಯಾಯಬದ್ಧವಾಗಿ ನೋಡಿಕೊಳ್ಳುತ್ತಿದ್ದರು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ, ಶಿಕ್ಷಕಿಯರಾದ ಕಾಶಮ್ಮ ಎಸ್ ಚಿಂಚೋಳಿ, ಪ್ರೀತಿ ಸಣಮನಿ, ಸೇವಕಿ ಸುನಿತಾ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *