ವಾಡಿ: ಪಟ್ಟಣದಲ್ಲಿ ಆರ್‌ಸಿಬಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತು. ಆರ್‌ಸಿಬಿ ಗೆದ್ದ ತಕ್ಷಣ ಮಕ್ಕಳು, ಯುವಕರು, ಅಭಿಮಾನಿಗಳು ಮನೆಯಿಂದ ಹೊರಗೆ ಬಂದು ಆರ್‌ಸಿಬಿ ವಿಜಯೋತ್ಸವದಲ್ಲಿ ಭಾಗಿಯಾದರು.
ಅಭಿಮಾನಿಗಳೊಂದಿಗೆ ಗೆಲುವಿ ಸಂಭ್ರಮಾಚರಣೆಯಲ್ಲಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಜಗತ್ತಿನಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದೆ ಆರ್‌ಸಿಬಿ ತಂಡ, ಆಟಗಾರರ ಕ್ರೀಡಾ ಸ್ಪೂರ್ತಿ, ಭಾವನಾತ್ಮಕವಾಗಿ ಪ್ರೇಕ್ಷಕರ ಮತ್ತು ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣದೊಂದಿಗೆ ಇರುವ ಒಡನಾಟದಿಂದ ಹದಿನೆಂಟು ವರ್ಷಗಳ ಸತತವಾಗಿ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ,
ಇಲ್ಲಿಯವರೆಗೂ ಕಪ್ ಗೆಲ್ಲಲಿಲ್ಲ. ಈ ಸಲ ನಮ್ಮದ್ದಾಗಿದ್ದು ಖುಷಿ ತಂದಿದೆ. ಜಗತ್ತಿನ ಶ್ರೀಮಂತರು ದುಬಾರಿ ಬೆಲೆಗಳಿಗೆ ಜಗತ್ತಿನ ಪ್ರಸಿದ್ಧ ಆಟಗಾರರನ್ನು ಖರೀದಿಸಿ ನಮಗೆ ಪೈಪೋಟಿ ನೀಡುತ್ತಿದ್ದಾರೆ.
ಆದರೆ ಜಗತ್ತಿನ ಅತಿ ಹೆಚ್ಚು ಅಭಿನಮಾನಿಗಳನ್ನು ಹೊಂದಿದ ಜಗತ್ತಿನ ಶ್ರೇಷ್ಠ ಕ್ರಿಕೇಟಿಗ ನಮ್ಮ ವಿರಾಟ್ ಕೊಹ್ಲಿ ನಮ್ಮ ಬೆಂಗಳೂರು ತಂಡದಲ್ಲಿ ಇರುವದು ಹೆಮ್ಮೆಯ ಸಂಗತಿ, ಅವರು ಜರ್ಸಿ ಸಂಖ್ಯೆ 18 ಹಾಗೂ ಇದು 18ನೇ ಐಪಿಎಲ್ ಇರುವುದರಿಂದ ಇಡಿ ಜಗತ್ತಿನ ವಿರಾಟ್ ಕೊಹ್ಲಿ ಅಭಿನಂದನೆಗಳು ಇದು ವಿರಾಟ್ ಅವರ ಕ್ರೀಡಾ
ಸಾಧನೆಗೆ ಒಲಿದ ಗೌರವ ಎಂದು ಹೆಮ್ಮೆಪಡುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಯುವ ಮುಖಂಡ ವಿಠಲ ನಾಯಕ, ಸಂಜಯ ಗಾಯಕವಾಡ, ಮಲ್ಲಿಕಾರ್ಜುನ ಸಾತಖೇಡ, ಮಲ್ಲಿನಾಥ ಧರ್ಮಾಪುರ, ಮನೋಹರ ರಾಠೊಡ, ಸಚಿನ್ ಡೌವಳೆ ಸೇರಿದಂತೆ ನೂರಾರು ಅಭಿಮಾನಿಗಳು ಪಾಲ್ಗೊಂಡಿದ್ದರು.
ಮಧ್ಯರಾತ್ರಿವರೆಗೆ ಡಿಜೆಗೆ ಹೆಜ್ಜೆ ಹಾಕಿ, ಪಟಾಕಿ ಸಿಡಿಸಿ, ಬೈಕ್ ರ್ಯಾಲಿ ಮಾಡಿದ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸಿದರು.