225 ಪ್ರಕರಣದಲ್ಲಿ 345 ಆರೋಪಿಗಳ ಬಂಧನ: 7 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳು ಜಪ್ತಿ

ಜಿಲ್ಲೆ

ವಿಜಯಪುರ: ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, 7 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದು, 225 ಕೇಸ್‌ನಲ್ಲಿದ್ದ 345 ಆರೋಪಿಗಳನ್ನು ಬಂಧಿಸಿದ್ದಾರೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳನ್ನು ಬೇಧಿಸಿ, ಚಿನ್ನ, ಬೆಳ್ಳಿ ಹಾಗೂ ಇನ್ನಿತರ ವಸ್ತುಗಳು ಸೇರಿದಂತೆ ಒಟ್ಟು 7 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಸಂಬಂಧಪಟ್ಟ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.

ಒಟ್ಟು 5,145.02 ಗ್ರಾಂ ಚಿನ್ನದ ಆಭರಣ ಮತ್ತು 1,723 ಗ್ರಾಂ ಬೆಳ್ಳಿ ಆಭರಣ, 1,06,72,000 ರೂ. ಮೌಲ್ಯದ 73 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. 1,32,41,000 ರೂ. ಮೌಲ್ಯದ 12 ಕಾರುಗಳನ್ನು ವಶಕ್ಕೆ ಪಡೆದು, 19 ಜನರನ್ನು ಬಂಧಿಸಿದ್ದಾರೆ. 19,00,000 ರೂ. ಮೌಲ್ಯದ 2 ಟಿಪ್ಪರ್ ವಶಕ್ಕೆ ಪಡೆದು, 5 ಜನರನ್ನು ಬಂಧಿಸಿದ್ದಾರೆ.

ಇನ್ನೂ ನಗದು ಕಳ್ಳತನ ಪ್ರಕರಣ ಬೇಧಿಸಿದ್ದು, 19 ಪ್ರಕರಣಗಳಲ್ಲಿನ 31 ಆರೋಪಿಗಳನ್ನು ಬಂಧಿಸಿ, 1,91,89,404 ರೂ. ನಗದು ಹಣ ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published. Required fields are marked *