ನಾಲವಾರ ರೈಲ್ವೆ ನಿಲ್ದಾಣದ ಸಲಹಾ ಸಮಿತಿಗೆ ನೇಮಕ

ಪಟ್ಟಣ

ನಾಲವಾರ: ದಕ್ಷಿಣ ಮಧ್ಯ ರೈಲ್ವೆಯ ಗುಂತಕಲ್ ವಿಭಾಗದ ನಾಲವಾರ ರೈಲ್ವೆ ನಿಲ್ದಾಣದ ಸಲಹಾ ಸಮಿತಿಯ ಸದಸ್ಯರನ್ನಾಗಿ ರಾಮರೆಡ್ಡಿ ಪಾಟೀಲ ಕೊಳ್ಳಿ, ವೀರಣ್ಣ ಯಾರಿ ಹಾಗೂ ಸರ್ವರ್ ಬೇಗ್ ಅವರನ್ನು ದಕ್ಷಿಣ ಮಧ್ಯ ರೈಲ್ವೆ ಗುಂತಕಲ್ ವಿಭಾಗದ ವ್ಯವಸ್ಥಾಪಕ ಧನಂಜಯಕುಮಾರ ಸಿಂಗ ನೇಮಕ ಮಾಡಿ ಅಧಿಸೂಚನೆ ಹೊರಡಿಸಿದ್ದಾರೆ. ಬಿಜೆಪಿ ಹಿರಿಯ ಮುಖಂಡ ಹಾಗೂ ರಾಜ್ಯ ತೊಗರಿ ಮಂಡಳಿ ಮಾಜಿ ಅಧ್ಯಕ್ಷ ಲಿಂಗಾರೆಡ್ಡಿ ಬಾಸರೆಡ್ಡಿ ನೂತನ ಸದಸ್ಯರುಗಳಿಗೆ ಪತ್ರ ನೀಡಿದರು.

ಈ ಸಲಹಾ ಸಮಿತಿಯ ಸದಸ್ಯರುಗಳು ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ ಪೂರಕವಾಗಿ ಕೈಜೋಡಿಸಿ ಪ್ರಯಾಣಿಕರ ಅನುಕೂಲಕರ ನಿಲ್ದಾಣಕ್ಕೆ ಸಲಹೆಗಳು ನೀಡುವುದಾಗಿದೆ. ಈ ಸಲಹಾ ಸಮಿತಿಯು 1 ಜನವರಿ 2025 ರಿಂದ 31 ಡಿಸೆಂಬರ್ 2026 ರವರೆಗೆ ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಲಿದೆ. ಸಮಿತಿಯ ಸ್ವರೂಪವು ಸಮಾಲೋಚನಾತ್ಮಕವಾಗಿರುತ್ತದೆ ಮತ್ತು ಈ ಸದಸ್ಯರು ರೈಲ್ವೆಯೊಂದಿಗೆ ಯಾವುದೆ ಲಾಭದಾಯಕ ಒಪ್ಪಂದ ಹೊಂದಿರಬಾರದು. ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹುದ್ದೆಯಲ್ಲಿ ಇರಬಾರದು ಎಂಬ ನಿಮಯಗಳಿವೆ ಎಂದು ಗುಂತಕಲ್ ವಿಭಾಗದ ಸಿಂಗ ಆದೇಶ ಪತ್ರದಲ್ಲಿ ವಿವರಿಸಿದ್ದಾರೆ. ಅದರಂತೆ ನೀವು ಕಾರ್ಯಪ್ರವೃತ್ತರಾಗಿ ನಿಮ್ಮ ಸಲಹೆ ಸೂಚನೆಗಳನ್ನು ನೀಡಿ ಪ್ರಯಾಣಿಕರಿಗೆ ಅನುಕೂಲ ಮಾಡಿ ಎಂದು ಲಿಂಗಾರೆಡ್ಡಿ ಬಾಸರೆಡ್ಡಿ ಗೌಡರು ಸದಸ್ಯರಿಗೆ ಹೇಳಿದರು.

ಈ ಸಂದರ್ಭದಲ್ಲಿ ನಾಗರಾಜಗೌಡ ಗೌಡಪ್ಪನೂರ, ಸತೀಶ ಸಾವಳಗಿ, ಭೀಮರಾಯ ಸಬೇದಾರ, ಅಯ್ಯಣ್ಣ ದಂಡೋತಿ, ಇಮ್ತಿಯಾಜ್ ಬೇಗ್, ಮಹಮ್ಮದ ಗೌಸ್ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *