ಶಹಾಬಾದ ಹೋಳಿ ಹಬ್ಬ ಮಾದರಿಯಾಗಲಿ: ಡಿವೈಎಸ್‌ಪಿ ಶಂಕರಗೌಡ ಪಾಟೀಲ

ತಾಲೂಕು

ಸುದ್ದಿ ಸಂಗ್ರಹ

ಶಹಾಬಾದ: ಹೋಳಿ ಹಬ್ಬದಲ್ಲಿ ಕಾಮದಹನ ಮಾಡುವಾಗ ವಿದ್ಯುತ್ ತಂತಿ, ಕೇಬಲ್, ವಿದ್ಯುತ್ ಟಿಸಿಗಳ ಬಗ್ಗೆ ಎಚ್ಚರ ವಹಿಸಿ ಎಂದು ಡಿವೈಎಸ್ಪಿ ಶಂಕರಗೌಡ ಪಾಟೀಲ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಹೋಳಿ ಹಬ್ಬ ಹಾಗೂ ರಂಜಾನ್ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಹಬ್ಬದ ದಿನದಂದು ಒತ್ತಾಯಪೂರ್ವಕವಾಗಿ ಬಣ್ಣ ಎರಚುವುದು ಅಥವಾ ಶಾಂತಿ ಕದಡುವ ಕೆಲಸ ಮಾಡಬಾರದು. ಪ್ರತಿ ವರ್ಷದಂತೆ ಈ ವರ್ಷವು ಕೂಡ ಅತ್ಯಂತ ಸಂಭ್ರಮದಿಂದ ಹೋಳಿ ಹಬ್ಬ ಅಚರಿಸಿ ಮಾದರಿಯಾಗಲಿ ಎಂದರು.

ಪೌರಾಯುಕ್ತ ಡಾ.ಕೆ ಗುರುಲಿಂಗಪ್ಪ ಮಾತನಾಡಿ, ಹೊಳಿ ಹಬ್ಬ ಹಾಗೂ ರಂಜಾನ್ ಹಬ್ಬ ಇರುವದರಿಂದ ದಿನದ 24 ಗಂಟೆ ನೀರು ಸರಬರಾಜು ಮಾಡಲಾಗುವದು ಎಂದರು. 

ಪಿಐ ನಟರಾಜ ಲಾಡೆ ಮಾತನಾಡಿ, ಹಬ್ಬದ ಸಂದರ್ಭದಲ್ಲಿ ನೈಸರ್ಗಿಕ ಬಣ್ಣ ಬಳಸಬೇಕು, ವಾರಮಿಸ್, ಕೃತಕ ಬಣ್ಣ ಬಳಸಬೇಡಿ, ಸ್ನಾನಕ್ಕೆ ಸಣ್ಣ ಮಕ್ಕಳು ನದಿಗೆ ಹೋಗುವದನ್ನು ತಡೆಯಬೇಕು, ಈಜು ಬರದೆ ಇದ್ದವರು ನದಿಗೆ ಇಳಿಯಬಾರದು, ಒತ್ತಾಯ ಪೂರ್ವಕ ಬಣ್ಣ ಹಾಕದೆ, ಶಾಂತಿ, ಸೌಹಾರ್ದಯುತವಾಗಿ ಹಬ್ಬ ಆಚರಿಸಬೇಕು ಎಂದರು.

ಸಭೆಯಲ್ಲಿ ತಹಸೀಲ್ದಾರ ಜಗದೀಶ ಚೌರ, ಪಿಎಸ್‌ಐ ಚಂದ್ರಕಾಂತ ಮೆಕಾಲೆ, ಡಿಎಸ್‌ಎಸ್ ರಾಜ್ಯ ಸಂ.ಸಂಚಾಲಕ ಮರೆಪ್ಪ ಹಳ್ಳಿ, ಜಾಮೀಯಾ ಮಜೀದ್ ಸಮಿತಿ ಅಧ್ಯಕ್ಷ ಮತೀನ್ ಸೇಠ್, ಬಿಸಿಸಿ ಅಧ್ಯಕ್ಷ ಡಾ.ಎಂ.ಎ ರಶೀದ, ಮುಖಂಡರಾದ ಚಂದ್ರಕಾಂತ್ ಗೊಬ್ಬುಕರ್, ಕನಕಪ್ಪ ದಂಡಗುಲಕರ್, ರಾಜು ಮೇಸ್ತ್ರಿ, ಹಾಶಮ್ ಖಾನ್, ಬಾಕ್ರೋದ್ದಿನ್ ಸೇಠ, ಡಿ.ಡಿ ಓಣಿ, ನರಸಿಂಹಲು ರಾಯಚೂರಕರ್, ಮಲ್ಲಿಕಾರ್ಜುನ ಕಟ್ಟಿ, ಬಸವರಾಜ ಮದ್ರಕಿ, ಅಪ್ಪಾರಾವ ನಾಗಶೆಟ್ಟಿ, ನಾಗಣ್ಣಗೌಡ ಪಾಟೀಲ, ಶರಣು ಪಗಲಾಪುರ, ದಿನೇಶ ಗೌಳಿ, ಬಸವರಾಜ ಸಾತಿಹಾಳ, ರಾಜೇಶ ಯನಗುಂಟಿಕರ್, ರಾಮು ಕುಸಾಳೆ, ಸುಭಾಷ ಸಾಕ್ರೆ, ಮ. ಮಸ್ತಾನ್, ರಫೀಕ ಬಾಗವಾನ, ರವಿ ರಾಠೋಡ, ನಿಂಗಣ್ಣ ಪೂಜಾರಿ ಸೇರಿದಂತೆ ಅನೇಕರು ಇದ್ದರು. 



Leave a Reply

Your email address will not be published. Required fields are marked *