ಚಿತ್ತಾಪುರ: ಪ್ರಸ್ತುತ ದಿನಗಳಲ್ಲಿ ಪೊಲೀಸ್ ಇಲಾಖೆಗೆ ಸೇರುವ ಯುವಕರಿಗೆ ಎಎಸ್‌ಐ ಬಲವಂತರೆಡ್ಡಿ ಸೇವೆ ಮಾದರಿಯಾಗಿದೆ ಎಂದು ಡಿವೈಎಸ್ಪಿ ಶಂಕರಗೌಡ ಪಾಟೀಲ್ ಹೇಳಿದರು.
ಪಟ್ಟಣದ ಕಿಂಗ್ ಪ್ಯಾಲೆಸ್ ಸಭಾಂಗಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಎಎಸಐ ಬಲವಂತರೆಡ್ಡಿ ಸೇವಾ ನಿವೃತ್ತಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬಲವಂತ ರೆಡ್ಡಿ ಅವರಿಗೆ ವಹಿಸಿದ ಕೆಲಸವನ್ನು ನಿಷ್ಟೆಯಿಂದ ಮಾಡಿ ಮೇಲಾಧಿಕಾರಿಗಳ ಪ್ರೀತಿಗೆ ಪಾತ್ರರಾಗಿದ್ದರು. ಇವರು ನಿಖರ ಮಾಹಿತಿ ಕಲೆ ಹಾಕಿ ಅಪರಾಧಿಗಳನ್ನು ಹಿಡಿಯುವಲ್ಲಿ ನಿಪುಣರಾಗಿದ್ದರು. ಇದಕ್ಕೆ ಉದಾಹರಣೆ ಎಂದರೆ ಕುಖ್ಯಾತ ಅಪರಾಧಿ ಶ್ರೀನಿವಾಸ ಅಲಿಯಸ್ ಸಿನ್ಯಾ ಅನೇಕ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆಗೆ ತಲೆನೋವಾಗಿದ್ದನು. ಇದನ್ನು ಮನಗಂಡು ಮೇಲಾಧಿಕಾರಿಗಳ ಸಹಾಯ – ಸಹಕಾರ ಪಡೆದು ಅಪರಾಧಿಯನ್ನು ಸಿನಿಮಿಯ ರೀತಿಯಲ್ಲಿ ಬಂಧಿಸಿದ್ದರು. ಹೆಸರೆ ಸೂಚಿಸುವಂತೆ ಬಲವಂತರೆಡ್ಡಿ ಪೊಲೀಸ್ ಇಲಾಖೆಗೆ ಬಲ ತಂದುಕೊಟ್ಟಿದ್ದರು ಎಂದರು.
ಅವರು ಉತ್ತಮ ಯೋಜನೆ ರೂಪಿಸುತ್ತಿದ್ದರು. ಕೆಲಸದ ಜೊತಗೆ ಮಾನವಿಯತೆ ಗುಣ ಹೊಂದಿದರು. ಜಾತ್ರೆ ಉತ್ಸವಗಳ ಬಂದೋಬಸ್ತಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ಇವರ ಅನುಭವವನ್ನು ಇಂದಿನ ಪೊಲೀಸರು ಪಡೆದುಕೊಳ್ಳಬೇಕು ಎಂದರು.
ನಿವೃತ್ತ ಎಎಸ್‌ಐ ಬಲವಂತರೆಡ್ಡಿ ಮಾತನಾಡಿ, 2೦ ವರ್ಷ ಒಂದೇ ಕಡೆ ಸೇವೆ ಸಲ್ಲಿಸಿದ್ದರಿಂದ ನಾನು ಪ್ರತಿಯೊಬ್ಬರಿಗೂ ಚಿರಪರಿಚಿತನಾಗಿದ್ದೆನೆ. ನಿಮ್ಮ ಋಣ ಯಾವತ್ತೂ ಮರೆಯಲ್ಲ ಎಂದರು.
ಕಾರ್ಯಕ್ರಮದಲ್ಲಿ ಸಿಪಿಐಗಳಾದ ಚಂದ್ರಶೇಖರ ತಿಗಡಿ, ಜಗದೇವಪ್ಪ ಪಾಳಾ, ನಟರಾಜ ಲಾಡೆ, ನ್ಯಾಯಾವಾದಿ ಚಂದ್ರಶೇಖರ ಅವಂಟಿ, ಮುಖಂಡರಾದ ನಾಗರಾಜ ಭಂಕಲಗಿ, ಮುಕ್ತಾರ ಪಟೇಲ್, ಲಕ್ಷ್ಮೀಕಾಂತ ಸಾಲಿ, ಬಾಬು ಕಾಶಿ ಮಾತನಾಡಿದರು.
ಪೊಲೀಸ್ ಇಲಾಖೆ, ಮುಖಂಡರು, ಸಾರ್ವಜನಿಕರು ನಿವೃತ್ತಗೊಂಡ ಬಲವಂತರೆಡ್ಡಿ ಅವರನ್ನು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಪಿಎಸ್‌ಐಗಳಾದ ತಿರುಮಲೇಶ್ ಕುಂಬಾರ, ಚೇತನ್ ಪೂಜಾರಿ, ಚಂದ್ರಾಮಪ್ಪ, ಗೃಹರಕ್ಷಕ ದಳದ ಮುಖ್ಯಸ್ಥ ಮೆಹಮೂದ್ ಪುಲಾರೆ, ಪ್ರಮುಖರಾದ ಶಿವಕಾಂತ ಬೆಣ್ಣೂರಕರ್, ಮಲ್ಲಿಕಾರ್ಜುನ ಕಾಳಗಿ, ವಿನೋದ ಗುತ್ತೇದಾರ, ವಿಷ್ಣು, ಬಾಲಾಜಿ ಬುರುಬರೆ, ಆನಂದ ಪಾಟೀಲ್, ನಾಡಗೌಡ ಸನ್ನತಿ, ಮಲ್ಲಿಕಾರ್ಜುನ ಬೆಣ್ಣೂರಕರ್, ಶಿವರಾಜ ಗುರುಮಿಠಕಲ್, ಆನಂದ ದೊಡ್ಮನಿ, ಶೀಲಾದೇವಿ, ಚಂದ್ರಕಾಂತ, ಲಾಲಅಹ್ಮದ್, ನಾಗೇಂದ್ರ, ಗುಂಡಪ್ಪ, ಪ್ರಶಾಂತ ಹೇರೂರ್, ಶಿವಯ್ಯ ಸ್ವಾಮಿ, ಮುಕ್ತುಂ ಪಟೇಲ್, ಅಯ್ಯಣ್ಣ ಸೇರಿದಂತೆ ಕಾಳಗಿ, ಶಹಾಬಾದ, ವಾಡಿ, ಮಾಡಬೂಳ ಪೊಲೀಸ್ ಠಾಣೆಯ ಆಧಿಕಾರಿಗಳು ಸಿಬ್ಬಂದಿಗಳು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಪಿಎಸ್‌ಐ ಶ್ರೀಶೈಲ್ ಅಂಬಾಟೆ ಸ್ವಾಗತಿಸಿದರು, ನರಸಪ್ಪ ಚಿನ್ನಕಟ್ಟಿ ನಿರೂಪಿಸಿದರು, ನಾಗೇಂದ್ರಪ್ಪ ವಂದಿಸಿದರು.