ಕಲಬುರಗಿ: ಜಿಲ್ಲೆಯ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ಬಿ ಹಡಪದ ಸುಗೂರ (ಎನ್) ಅವರಿಗೆ ಡಾ. ಮಲ್ಲಯ್ಯ ಶಾಂತಮುನಿ ಮಹಾಸ್ವಾಮಿ ಅವರ ಅಮೃತ ಹಸ್ತದಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಂಗಳೂರಿನ ವಸಂತ ನಗರದ ಮಿಲ್ಲರ್ಸ್ ರೋಡ್ ನ ಡಾ. ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆದ ಹೆನಿ ಹೆಲ್ಪ್ ಸಂಸ್ಥೆ ಮತ್ತು ಜೀ ಕನ್ನಡ ವಾಹಿನಿಯ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ಬಿ ಹಡಪದ ಸುಗೂರ (ಎನ್) ಅವರಿಗೆ ಶಿವಗಂಗೆಯ ಪರಮ ಪೂಜ್ಯ ಡಾ. ಮಲ್ಲಯ್ಯ ಶಾಂತಮುನಿ ಮಹಾಸ್ವಾಮಿಯವರು ‘ಕರ್ನಾಟಕ ಬಿಸ್ನೆಸ್ ಸಾಮ್ರಾಟ್ ಪ್ರಶಸ್ತಿ’ ನೀಡಿ ಗೌರವಿಸಿದರು.

ಈ ಸಂಧರ್ಭದಲ್ಲಿ ಹೆನಿ ಹೆಲ್ಪ್ ಸಂಸ್ಥೆಯ ಅಧ್ಯಕ್ಷೆ ಪೂಜಾ, ಜಾಕೀರ್ ಹುಸೇನ್, ನಟಿ ಪ್ರೇಮಾ, ಮಿಮಿಕ್ರಿ ಹಿರಿಯ ಕಲಾವಿದ ಗೋಪಿ, ಜಿ ಟಿವಿ ಕನ್ನಡ ವಾಹಿನಿಯ ನಿರ್ಮಾಪಕ ನಿರ್ದೇಶಕ ಶೋಯೆಬ್ ಸೇರಿದಂತೆ ಅನೇಕರು ಇದ್ದರು.
ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ಬಿ ಹಡಪದ ಸುಗೂರ (ಎನ್) ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ವೃದ್ಧರು, ನಿರ್ಗತಿಕರು, ಅನಾಥಾಶ್ರಮದ ಮಕ್ಕಳು, ವಿಕಲಚೇತನರು, ಶಾಲಾ ಮಕ್ಕಳು ಸೇರಿದಂತೆ ಒಟ್ಟು 1,350 ಕ್ಕೊ ಹೆಚ್ಚು ಅನಾಥರಿಗೆ ಉಚಿತವಾಗಿ ಕ್ಷೌರ ಸೇವೆ ಸಲ್ಲಿಸಲಾಗಿದೆ ಎಂದರು.