ಸುದ್ದಿ ಸಂಗ್ರಹ ಶಹಾಬಾದ
ಸವಿತಾ ಸಮಾಜ ಬಾಂಧವರ ಹಾಗೂ ಹರಳಯ್ಯ ಸಮಾಜ ಬಾಂಧವರ ಕಾಯಕ ಶ್ರೇಷ್ಠವಾದದ್ದು, ಸಣ್ಣ ಸಮಾಜ ದೊಡ್ಡ ಸಮಾಜ ಎಂದು ಪ್ರತ್ಯೇಕಿಸಿ ನೋಡಬಾರದು ಎಂದು ಶಾಸಕ ಬಸವರಾಜ ಮತ್ತಿಮೂಡ ಹೇಳಿದರು.
ನಗರದ ಖುರ್ಷಿದ್ ಮೋಹಲ್ಲಾದಲಿ ನಡೆದ ಸವಿತಾ ಮಹರ್ಷಿ ಜಯಂತೋತ್ಸವ ಹಾಗೂ ಸವಿತಾ ಸಮಾಜದ ಸಮುದಾಯ ಭವನದ ಕಾಂಪೌಂಡ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜವು ಆರ್ಥಿಕವಾಗಿ ಹಿಂದೆ ಉಳಿದಿರಬಹುದು, ಆದರೆ ಶೈಕ್ಷಣಿಕವಾಗಿ ಮುಂದೆ ಬರುತ್ತಿರುವುದು ಸಂತೋಷದಾಯಕ, ಮುಂದೆ ಯಾವುದೆ ಕೆಲಸ ಕಾರ್ಯಕ್ಕೆ ನಾನು ಬೆಂಬಲವಾಗಿರುತ್ತೆನೆ ಎಂದರು.
ಸಂತೋಷ ಕೋಟನೂರ ಪ್ರಸ್ತಾವಿಕವಾಗಿ ಮಾತನಾಡಿದರು.
ವೇದಿಕೆ ಮೇಲೆ ಕಾಡಾ ಅಧ್ಯಕ್ಷ ಡಾ. ಎಂ.ಎಂ ರಶೀದ್, ನಗರಸಭೆ ಅಧ್ಯಕ್ಷೆ ಚಂಪಾಬಾಯಿ ಮೇಸ್ತ್ರಿ, ಪ್ರಮುಖರಾದ ಆನಂದ ವಾರಿಕ್, ನಿಂಗಣ್ಣ ಹುಳುಗೋಳ್ಕರ, ಬಸವರಾಜ ಮದ್ರಿಕಿ, ಶಿವಶೆಟ್ಟಿ ಪಾಟೀಲ, ಸಂಗಮೇಶ ವಾಲಿ, ಮೃತ್ಯುಂಜಯ ಸ್ವಾಮಿ ಹಿರೇಮಠ್, ರಾಜು ಮೇಸ್ತ್ರಿ, ಶಿವಕುಮಾರ ಇಂಗನಶೆಟ್ಟಿ, ಬಸವರಾಜ ಅಲ್ಲಿಪುರ್, ವೀರಭದ್ರಪ್ಪ ಮೋರೆ, ರವಿ ಸಾತನೂರು, ಶರಣಪ್ಪ ಗೋರಕುಂಡ, ಶರಣಪ್ಪ ಅರಜಣಗಿ, ನರಸಪ್ಪ ಸಾತನೂರ್, ರಾಜು ಸಾತನೂರ, ವಿಠ್ಠಲ್ ಸಾತನೂರು, ರವಿ ಸಾತನೂರು ಸೇರಿದಂತೆ ಸಮಾಜದ ಬಾಂಧವರು, ಸಾರ್ವಜನಿಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷ ದಶರಥ ಎಸ್ ಕೋಟನೂರ ವಹಿಸಿದ್ದರು, ರಾಜೇಶ ಅಲ್ಲಿಪುರ್ ಸ್ವಾಗತಿಸಿದರು, ಅಂಬಿಕಾ ಕೋಟನೂರು ನಿರೂಪಿಸಿದರು, ಸೌಮ್ಯ ಎಸ್ ಕೋಟನೂರ್ ವಂದಿಸಿದರು.