ಕನ್ನಡ ಸಾಹಿತ್ಯಕ್ಕೆ ಜನಪದ ಕೊಡುಗೆ ಅಪಾರ

ಪಟ್ಟಣ

ಸುದ್ದಿ ಸಂಗ್ರಹ ಶಹಾಬಾದ
ಕನ್ನಡ ನಾಡು, ನುಡಿ, ಸುಗ್ಗಿಯ ಸಂಭ್ರಮ, ಪರಂಪರೆ ಬಗ್ಗೆ ಇಂದಿನ ಪಿಳಿಗೆಗೆ ಜೋಗುಳ ಪದ, ಹಂತಿಯ ಹಾಡು ಕನ್ನಡ ಸಾಹಿತ್ಯಕ್ಕೆ ಜನಪದ ಕೊಡುಗೆ ಅಪಾರ ಅದನ್ನು ಉಳಿಸಿ ಮುಂದಿನ ಪಿಳಿಗೆಗ ಕೊಂಡೊಯ್ಯುವದು ಯುವ ಜನರ ಕರ್ತವ್ಯವಾಗಿದೆ ಎಂದು ಕನ್ನಡ ಜಾನಪದ ಅಧ್ಯಕ್ಷ ರಾಜಶೇಖರ ದೇವರಮನಿ  ಹೇಳಿದರು.‌

ನಗರದ ಕೂಡಲ ಸಂಗಮ ಶಿಕ್ಷಣ ಸಂಸ್ಥೆ ಶಾಲೆ ಹಳೆ ಶಹಾಬಾದ ಆವರಣಲ್ಲಿ ಕನ್ನಡ ಜಾನಪದ ಪರಿಷತ್ತು ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಸುಗ್ಗಿಯ ಸಂಭ್ರಮ’ ಹಾಗೂ ‘ಮಕ್ಕಳ ವೇಷಭೂಷಣ ಸ್ಪರ್ಧೆ’ಯಲ್ಲಿ 5 ಜನ ಮಹಿಳಾ ಕಲಾವಿದರಿಗೆ ಸನ್ಮಾನ  ಮತ್ತು ಮಕ್ಕಳ ವೇಷಭೂಷಣ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಕಲಾವಿದರು ಜೋಗುಳ ಪದ, ಹಂತಿಯ ಹಾಡು, ಸುಗ್ಗಿಯ ಹಾಡು ಜನರನ್ನು ಆಕರ್ಷಿಸಿತು.

ಈ ಸಂದರ್ಭದಲ್ಲಿ ಸುಗಂದ ಸಾಪೂರ ಕಲಾವಿದರು ಲಿಂಗದ ಕುರಿತು ಹಾಡಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಶಶಿಕಲಾ ಸೂರ, ಶಾಂತಬಾಯಿ ಪೊತನ್ಕರ, ಭೀಮಬಾಯಿ ಕಲಾವಿದರು, ಅಂಬಿಕಾ ಎಸ್ ಜಿಂಗಾಡೆ, ಸವಿತಾ ಬೆಳಗುಂಪಿ, ರೇಖಾ ಆರ್ ವಿಶ್ವಕರ್ಮ, ತಾರಾಬಾಯಿ ವಿಶ್ವಕರ್ಮ, ಗಿರಿಜಾ ಪಾಟೀಲ, ವಿದ್ಯಾವತಿ ಹಡಪದ, ಸೃತಿ ನಂದಿದ್ವಜ ಪ್ರೀತಿ ಸೇರಿದಂತೆ ತಾಯಿಂದಿರು, ಅಕ್ಕತಂಗಿಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *