ವಾಡಿ: ಎಸಿಸಿ ಸಿಮೆಂಟ್ ಕಾರ್ಖಾನೆಯ ಎಐಟಿಯುಸಿ ಕಾರ್ಮಿಕ ಸಂಘದ ಚುನಾವಣೆಯ ಫಲಿತಾಂಶ ತಡರಾತ್ರಿ ಪ್ರಕಟವಾಗಿದೆ.
ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಕಾರ್ಮಿಕ ವೃಂದದ ವತಿಯಿಂದ ಹೃದಯ ಪೂರ್ವಕ ಅಭಿನಂದನೆಗಳು.
ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವಿರೆಂದು ಭಾವಿಸಿರುತ್ತೆವೆ.ತಮ್ಮೆಲ್ಲರ ಜೊತೆಗೆ ಕಾರ್ಮಿಕ ವೃಂದ ಬಹುಮತ ಚಲಾಯಿಸಿ ತಮಗೆ ಆಯ್ಕೆ ಮಾಡಿ ತಮ್ಮ ಜೊತೆಗೆ ಮುಂಬರುವ ದಿನಗಳಲ್ಲಿ ಸದಾಕಾಲ ಇರುತ್ತೆವೆ.
ನೂತನ ಪದಾಧಿಕಾರಿಗಳ ಆಯ್ಕೆ
ಅಧ್ಯಕ್ಷರಾಗಿ ಶರಣಬಸವ ಸಿರೂರಕರ್, ಉಪಾಧ್ಯಕ್ಷರಾಗಿ ಅನೀಲಕುಮಾರ, ಅವಿನಾಶ ರಾಠೋಡ, ದೀಪಕ ಪೂಜಾರಿ, ಕಾರ್ಯದರ್ಶಿಯಾಗಿ ವಿಶಾಲ್ ನಂದೂರಕರ್, ಜಂಟಿ ಕಾರ್ಯದರ್ಶಿಯಾಗಿ ಅಸನ ಅಲಿ, ಸಂಜಯ್ ತೆಜು, ಸತೀಶ ಮಾತ್ತು ಖಜಾಂಚಿಯಾಗಿ ಟಿ ಉಮೇಶ ಪವಾರ ಆಯ್ಕೆಯಾಗಿದ್ದಾರೆ ಎಂದು ಕಾರ್ಮಿಕ ಬಸವರಾಜ ಎಸ್ ರದ್ದೆವಾಡಿ ತಿಳಿಸಿದ್ದಾರೆ.
