ಚಿತ್ತಾಪುರ: ತಾಲೂಕು ನ್ಯಾಯವಾದಿಗಳ ಸಂಘದಲ್ಲಿ ತೆರವುಗೊಂಡ ಸ್ಥಾನಗಳಿಗೆ ಮಾಡಲಾಯಿತು. ಉಪಾಧ್ಯಕ್ಷ ಸ್ಥಾನಕ್ಕೆ ಎ.ಎಂ ಅವಂಟಿ ಹಾಗೂ ಕಾರ್ಯದರ್ಶಿ ಸ್ಥಾನಕ್ಕೆ ಜಗದೀಶ ಸಂಗನ್ ಅವಿರೋದವಾಗಿ ಆಯ್ಕೆ ಮಾಡಲಾಗಿದೆ ಎಂದು ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ನಾಗರಾಜ ಕಡಬೂರ ತಿಳಿಸಿದ್ದಾರೆ.
ಪ್ರತಿ ಎರಡು ವರ್ಷಕೊಮ್ಮೆ ಹೊಸ ಪದಾಧಿಕರಿಗಳನ್ನು ಅಯ್ಕೆ ಮಾಡಲಾಗುತ್ತದೆ. ಈಗ ಒಂದು ವರ್ಷದ ಅವಧಿ ಮುಗಿದಿದೆ. ಇನ್ನೂ ಒಂದು ವರ್ಷ ಅವಧಿಯಿದೆ. ಈ ಮೊದಲು ಆಯ್ಕೆಯಾಗಿದ್ದ ಉಪಾಧ್ಯಕ್ಷ ಮಸ್ತಾನಪ್ಪ ಅರುಣಕರ್ ಮತ್ತು ಕಾರ್ಯದರ್ಶಿ ಚಂದ್ರಶೇಖರ ಅಂಗಡಿ ತಮ್ಮ ವೈಯುಕ್ತಿಕ ಕಾರಣದಿಂದ ರಾಜೀನಾಮೆ ನೀಡಿರುವದರಿಂದ ತೆರವಾದ ಸ್ಥಾನಗಳಿಗೆ ಸರ್ವ ಸದಸ್ಯರ ಸಭೆ ಕರೆದು ಸಹಮತದೊಂದಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ಚಂದ್ರಶೇಖರ ಅವಂಟಿ ಸೇರಿದಂತೆ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಇದ್ದರು.