ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ʻಬಿಗ್ಬಾಸ್ ಕನ್ನಡ ಸೀಸನ್ 13ರʼ ಆರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡೋಕೆ ಅಗ್ನಿಪರೀಕ್ಷೆಯ ವೇದಿಕೆ ಸಜ್ಜಾಗಿದೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾರಥ್ಯದ ಬಿಗ್ಬಾಸ್ ಕನ್ನಡ ಸೀಸನ್ 13 ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಇದೀಗ ವಾಹಿನಿ ಹೊಸ ಪ್ರೋಮೋ ರಿಲೀಸ್ ಮಾಡಿದ್ದು, ಆಗಸ್ಟ್ 16ರ ರಾತ್ರಿ 9ಕ್ಕೆ ಬಿಗ್ ಮನೆಗೆ ಎಂಟ್ರಿ ಕೊಡೋಕೆ ಅಗ್ನಿ ಪರೀಕ್ಷೆಯ ವೇದಿಕೆ ಸಜ್ಜಾಗಿದೆ.
ರಿಲೀಸ್ ಆದ ಪ್ರೋಮೋದಲ್ಲಿ `Thank You Karnataka’ ಎಂದು ಶುರುವಾಗಿ, ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ನಿಮ್ಮ ಕನಸುಗಳು ವಿಡಿಯೋ ಮೂಲಕ ನಮ್ಮನ್ನು ತಲುಪಿವೆ. ಈಗ ಆ ಕನಸುಗಳಿಗೆ ವೇದಿಕೆ ಸಜ್ಜಾಗ್ತಿದೆ. ಈ ಅಂತಿಮ ಪರೀಕ್ಷೆಯನ್ನು ಎದುರಿಸಿ ಬಿಗ್ಬಾಸ್ ಮನೆಗೆ ಎಂಟ್ರಿ ಕೊಡೋರು ಯಾರು ?. ಇದೆಲ್ಲದಕ್ಕೆ ಉತ್ತರ ಆಗಸ್ಟ್ 16ರ ರಾತ್ರಿ 9ಕ್ಕೆ ಸಿಗಲಿದೆ ಎಂದು ತಿಳಿಸಿದೆ. ಇನ್ನೂ ಆ.17ರಿಂದ ಪ್ರತಿ ಸೋಮವಾರದಿಂದ ರವಿವಾರದವರೆಗೆ ರಾತ್ರಿ 9:30ಕ್ಕೆ ಪ್ರಸಾರವಾಗಲಿದೆ.
ಇತ್ತೀಚಿಗಷ್ಟೆ ಕಿಚ್ಚ ಸುದೀಪ್ ಅವರ ಪ್ರೋಮೋ ಬಿಡುಗಡೆಯಾಗಿದ್ದು, ಈ ಮೂಲಕ ಹೊಸ ಸೀಸನ್ಗೆ ಅಧಿಕೃತವಾಗಿ ಕೌಂಟ್ಡೌನ್ ಶುರುವಾಗಿತ್ತು. The Bigg Wait is Over!” ಕ್ಯಾಪ್ಷನ್ ಬರೆದಿರುವ ಪ್ರೋಮೋದಲ್ಲಿ ಬ್ಲ್ಯಾಕ್ ಸೂಟ್ನಲ್ಲಿ ಸ್ಟೈಲಿಷ್ ಆಗಿ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್, ʻಕರ್ನಾಟಕದ ಜನ ಯಾರಿಗೂ ಕಾಯೊದಿಲ್ಲ, ಆದರೆ ವರ್ಷಕ್ಕೆ ಒಂದು ಸಲ ಕಾಯ್ತಾರೆ. ಒಂದೆ ಮನೆ, ಒಂದು ಅವಕಾಶ, ಕೋಟಿ ಕನಸುಗಳ, ಮತ್ತೆ ಶುರು ಮಾಡೋಣ್ವಾ ? ಎನ್ನುವ ಡೈಲಾಗ್ ಎಲ್ಲರ ಗಮನ ಸೆಳೆದಿತ್ತು. ಇದೀಗ ಇನ್ನೊಂದು ಪ್ರೋಮೋ ರಿಲೀಸ್ ಮಾಡುವ ಮೂಲಕ ಕುತೂಹಲ ಇನ್ನಷ್ಟು ಹೆಚ್ಚಿಸಿದೆ.