ಶಹಾಬಾದ್: ಎಮ್‌ಸಿಸಿ ಶಾಲೆಗೆ ಶೇ.97.83 ಫಲಿತಾಂಶ

ನಗರದ

ಸುದ್ದಿ ಸಂಗ್ರಹ ಶಹಾಬಾದ್
ನಗರದ ಪ್ರತಿಷ್ಠಿತ ಮೌಂಟ್ ಕಾರ್ಮೆಲ್ ಕಾನ್ವೆಂಟ್ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಎಸ್‌ಎಸ್’ಎಲ್‌ಸಿ ಪರೀಕ್ಷೆಯಲ್ಲಿ ದಾಖಲೆಯ ಸಾಧನೆ ಮಾಡುವ ಮೂಲಕ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.

ಶಾಲೆಯ 27 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 64 ವಿದ್ಯಾರ್ಥಿಗಳು ಪ್ರಥಮ ಸ್ಥಾನ, 27 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ, 17 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ. ಒಟ್ಟು 138 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 135 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶಾಲೆಗೆ ಶೇ‌.97.83 ಫಲಿತಾಂಶ ಬಂದಿದೆ.

ಜೋಯಾ ಮಲಿಕ್ 603 (96.48), ಸಮೃದ್ಧಿ ಸುಗಂಧಿ 599 (95.84), ವೈಷ್ಣವಿ ಪುತ್ರಪ್ಪ 596 (95.36), ಅಡ್ವಿನ 591 (94.56), ಜೋಹರಾ 584 (93.44), ಅಶ್ವಿನಿ ಎಂ 583(93.28), ಸಾನ್ವಿ 578(92.48), ಮಯೂರೇಶ 570 (91.2), ಸೋನಿಯಾ 566 (90.56), ಆದಿತ್ಯ 566 (90.56) ಮತ್ತು ಅನುಷ್ಕಾ 565 (90.4) ಅಂಕಗಳು ಪಡೆದಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಮುಖ್ಯಗುರು ಸಿಸ್ಟರ್ ಲೋವಿಟಾ, ಶಾಲೆಯ ಆಡಳಿತ ಮಂಡಳಿ, ಶಾಲೆಯ ಸಿಸ್ಟರ್ ವೃಂದದವರು, ಶಿಕ್ಷಕ ವೃಂದದವರು ಮತ್ತು ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *