ಸುದ್ದಿ ಸಂಗ್ರಹ ಶಹಾಬಾದ್
ಸಮೂಹ ಮಾಧ್ಯಮದ ವಿದ್ಯಾರ್ಥಿಗಳಿಗೆ ಈ ಕ್ಷೇತ್ರವು ಜ್ಞಾನಾರ್ಜನೆ, ಉದ್ಯೋಗವಕಾಶ ಮತ್ತು ಸೃಜನಶೀಲತೆಗೆ ಅಪಾರ ಅವಕಾಶ ಒದಗಿಸುತ್ತದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಮರಿಯಪ್ಪಾ ಹಳ್ಳಿ ಹೇಳಿದರು.
ನಗರದ ಕೂಡಲಸಂಗಮ ಶಿಕ್ಷಣ ಸಂಸ್ಥೆಯ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ 5ನೇ ದಿನದ ವಿಶೇಷ ಶಿಬಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದಿನ ಎ.ಐ ಯುಗದಲ್ಲಿ ಮಾಧ್ಯಮಗಳ ಮೂಲಕ ನೈಜ-ವೃತ್ತಿಪರ ಕೋರ್ಸ್’ಗಳ ಮಾಹಿತಿ ಮತ್ತು ಪ್ರಾಯೋಗಿಕ ಜ್ಞಾನ ಪಡೆಯಬಹುದು ಎಂದರು.
ಬಿಜೆಪಿಯ ಯುವ ಮುಖಂಡ ಅಣವೀರ್ ಇಂಗನಶೇಟ್ಟಿ ಮಾತನಾಡಿ, ಕೇವಲ ಮೊಬೈಲ್ ಗಳನ್ನು ಬಳಸಿ ಸಮಯ ವ್ಯರ್ಥ ಮಾಡುವುದರ ಬದಲು ಅದರ ಸದುಪಯೋಗ ಪಡೆದು ವಿದ್ಯಾರ್ಥಿಗಳು ನಿಮ್ಮ ಜೀವನ ರೂಪಿಸಿಕೊಳ್ಳಬೇಕು ಎಂದರು.
ಪತ್ರಕರ್ತ ಶಿವಕುಮಾರ ಕುಸಾಳೆ, ಕಾಂಗ್ರೆಸ್ ಯುವ ಅಧ್ಯಕ್ಷ ಕಿರಣ ಚವ್ಹಾಣ, ಯೋಜನಾಧಿಕಾರಿ ಗುರುಲಿಂಗಪ್ಪಾ, ಪ್ರಮುಖರಾದ ಮಲ್ಲಿಕಾರ್ಜುನ ಮಸ್ಕಿ, ರಾಜಶೇಖರ ದಂಡಾವತಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು .
ಈ ಸಂದರ್ಭದಲ್ಲಿ ಚಂದ್ರಕಲಾ ಕುಂಬಾರ, ಸುನಿತಾ ಬಿರಾದಾರ, ಶಾಯಿಸ್ತಾ ಬೇಗಂ, ವಿಜಯಕುಮಾರ್ ಹಾಬನೂರ್ ಸೇರಿದಂತೆ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.