ಸರಕಾರಿ ನೌಕರರ ಕ್ರೀಡಾಕೂಟ: ಭಾಗವಹಿಸಲು ಅರ್ಜಿ ಆಹ್ವಾನ

ನಗರದ

ಸುದ್ದಿ ಸಂಗ್ರಹ ಕಲಬುರಗಿ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಮತ್ತು ಕರ್ನಾಟಕ ರಾಜ್ಯ ಜಿಲ್ಲಾ ಸರಕಾರಿ ನೌಕರರ ಸಂಘದ ಸಹಯೋಗದಲ್ಲಿ 2025-26ನೇ ಸಾಲಿನ ಕಲಬುರಗಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ‌.‌ ಜಿಲ್ಲೆಯ ಸರ್ಕಾರಿ ನೌಕರರು https://form.svhrt.com/695a005f31fccd4a1b1989c ಈ ಲಿಂಕ್ ಮೂಲಕ ಜ.12ರ ಒಳಗಾಗಿ ಅರ್ಜಿ ಸಲ್ಲಿಸಲು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೊಂಡಗಿ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪೊಲೀಸ್, ಸಿಆರ್‌ಪಿಎಫ್ ಸೇರಿದಂತೆ ಸಮವಸ್ತ್ರಧಾರಿತ ಸಿಬ್ಬಂದಿ ಭಾಗವಹಿಸಲು ಅವಕಾಶವಿರುವುದಿಲ್ಲ ಮತ್ತು ಕ್ರೀಡಾ ಮೀಸಲಾತಿಯಡಿ ಆಯ್ಕೆಯಾದ ನೌಕರರು ಸ್ಪರ್ಧೆಗಳಲ್ಲಿ ಭಾಗವಹಿಸಲು ಅರ್ಹತೆ ಹೊಂದಿರುವುದಿಲ್ಲ. ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ಇಲಾಖೆಗಳ ಬ್ಯಾಡ್ಜ್ ನಂಬರ್ ಸಿಬ್ಬಂದಿಗಳು ಹಾಗೂ ಲಿಪಿಕ್‌ ಸಿಬ್ಬಂದಿಗಳು ಮತ್ತು ದೈಹಿಕ ಶಿಕ್ಷಕರನ್ನು ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಲು ಅನುಮತಿಸಲಾಗಿದೆ ಎಂದರು.‌

ಹೆಚ್ಚಿನ ಮಾಹಿತಿಗಾಗಿ ಕ್ರೀಡಾ ಇಲಾಖೆಯ ಸಂಜಯ ಬಾನರ್ ದೂರವಾಣಿ ಸಂಖ್ಯೆ- 9844029235 ಮತ್ತು ಸಂಘದ ಜಿಲ್ಲಾ ಕಾರ್ಯದರ್ಶಿ ಮಹೇಶ ಹೂಗಾರ ದೂರವಾಣಿ ಸಂಖ್ಯೆ‌ – 9008040201ರ ಮೂಲಕ ಸಂಪರ್ಕಿಸಬಹುದು ಎಂದರು.

Leave a Reply

Your email address will not be published. Required fields are marked *