ಇರಾನ್‌ ಯುದ್ಧ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಪ್ಲಾಸ್ಟಿಕ್ ಉದ್ಯಮಕ್ಕೆ ಬಂದ್ ಭೀತಿ

ಜಿಲ್ಲೆ

ಸುದ್ದಿ ಸಂಗ್ರಹ ಮಂಗಳೂರು
ಮಧ್ಯಪ್ರಾಚ್ಯ ರಾಷ್ಟ್ರಗಳ ಯುದ್ಧ ಹಿನ್ನೆಲೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದು, ಇದೀಗ ಕರಾವಳಿಯ ಪ್ಲಾಸ್ಟಿಕ್ ಉದ್ಯಮದ ಮೇಲೆ‌ ಭಾರಿ ಹೊಡೆತ ಬಿದ್ದಿದೆ.

ಕರಾವಳಿಯ ಪ್ಲಾಸ್ಟಿಕ್ ಪ್ಯಾಕ್ಟರಿಗಳು ಬಂದ್ ಆಗುವ ಭೀತಿ ಎದುರಾಗಿದೆ. ಪೆಟ್ರೋಲಿಯಂ ಬೈ ಪ್ರಾಡೆಕ್ಟ್‌ನ‌ ಕಚ್ಚಾ ವಸ್ತುವಿನಿಂದ ತಯಾರಿಸಲಾಗುವ ಪ್ಲಾಸ್ಟಿಕ್ ಉತ್ಪನ್ನಗಳ ಸುಮಾರು 50 ಕ್ಕೂ ಹೆಚ್ಚು ಫ್ಯಾಕ್ಟರಿಗಳು ಮಂಗಳೂರು ಹಾಗೂ ಉಡುಪಿಯಲ್ಲಿವೆ. ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಉತ್ಪಾದನಾ ವೆಚ್ಚ ಭರಿಸಲು ಫ್ಯಾಕ್ಟರಿಗಳು ಪರದಾಡುತ್ತಿದೆ‌.

ಕಚ್ಚಾ ತೈಲದ ಬೆಲೆ‌ ಪ್ರತಿ ಬ್ಯಾರೆಲ್‌ಗೆ 100 ಡಾಲರ್ (9,322 ರೂ.) ದಾಟಿದ್ದು, ಸುಮಾರು‌ 70% ಏರಿಕೆಯಾಗಿದೆ. ಇದೀಗ ಕಚ್ಚಾ ವಸ್ತುಗಳು ಸಮಸ್ಯೆಯಿಂದಾಗಿ ಫ್ಯಾಕ್ಟರಿಗಳಿಗೆ ಸಮಸ್ಯೆಯಾಗಿದ್ದು, ಯುದ್ದ ಮುಂದುವರೆದು ಕಚ್ಚಾ ತೈಲದ ಬೆಲೆ ಇನ್ನಷ್ಟು‌ ಏರಿಕೆಯಾದ್ರೆ ಪ್ಲಾಸ್ಟಿಕ್ ಫ್ಯಾಕ್ಟರಿಗಳು ಬಂದ್ ಆಗುವ ಆತಂಕ‌ ಎದುರಾಗಿದೆ.

Leave a Reply

Your email address will not be published. Required fields are marked *