PSI ಆಗಿ 10 ವರ್ಷ ಪೂರೈಸಿದ್ದಕ್ಕೆ ರೌಡಿಶೀಟರ್ ಜೊತೆ ಕೇಕ್ ಕಟ್: ಫೋಟೋ ವೈರಲ್ ಆಗ್ತಿದ್ದಂತೆ ಸಸ್ಪೆಂಡ್

ಜಿಲ್ಲೆ

ಯಾದಗಿರಿ: ಪಿಎಸ್‌ಐ ಆಗಿ 10 ವರ್ಷ ಪೂರೈಸಿದ್ದಕ್ಕೆ ರೌಡಿಶೀಟರ್ ಜೊತೆಗೆ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದ ಅಧಿಕಾರಿಯನ್ನು ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಠಾಣೆಯ ಪಿಎಸ್‌ಐ ಆಗಿರುವ ರಾಜಶೇಖರ್ ರಾಠೋಡ್ ಅವರನ್ನು ಅಮಾನತು ಮಾಡಿದ್ದಾರೆ. ಪಿಎಸ್‌ಐ ಆಗಿ ಹತ್ತು ವರ್ಷ ಪೊರೈಸಿದ್ದಕ್ಕೆ ಅದೆ ಠಾಣೆಯಲ್ಲಿ ರೌಡಿಶೀಟರ್ ಆಗಿರುವ ನಾಗರಾಜ್ ಜೊತೆ ಕೇಕ್ ಕಟ್ ಮಾಡಿ ಸೆಲೆಬ್ರೇಷನ್ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗಿತ್ತು. ಸುದ್ದಿ ಪ್ರಸಾರವಾಗುತ್ತಿದ್ದಂತೆ ಯಾದಗಿರಿ ಎಸ್ಪಿ ಅಮಾನತು ಮಾಡಿದ್ದಾರೆ.

ಪೊಲೀಸ್ ಠಾಣೆಯ ಆವರಣದಲ್ಲಿಯೇ ರೌಡಿಶೀಟರ್ ನಾಗರಾಜ ಜೊತೆಗೆ ಶೆಟಲ್ ಕಾಕ್ ಆಡಿದ್ದರು. ಈ ಬಗ್ಗೆ ಇಲಾಖೆಯಿಂದ ತನಿಖೆ ನಡೆಸಲಾಗಿತ್ತು. ತನಿಖೆಯಲ್ಲಿ ಕರ್ತವ್ಯಲೋಪ ಹಾಗೂ ಶಿಸ್ತು ಉಲ್ಲಂಘನೆ ಬಯಲಾಗುತ್ತಿದ್ದಂತೆ ಎಸ್ಪಿ ಪೃಥ್ವಿಕ್ ಶಂಕರ್ ಅಮಾನತು ಮಾಡಿ ಆದೇಶಿಸಿದ್ದಾರೆ.

Leave a Reply

Your email address will not be published. Required fields are marked *