ವಿದೇಶದಲ್ಲೆ ಕುಳಿತು ಮಂಗಳೂರು ಯುವತಿಯರಿಗೆ ಗಾಳ: ಗಂಡನ ಪ್ರಣಯದಾಟ ಬಿಚ್ಚಿಟ್ಟ ಪತ್ನಿ

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಮಂಗಳೂರು
ಮ್ಯಾಟ್ರಿಮೋನಿಯಲ್ಲಿ ಪರಿಚಯ ಮಾಡಿಕೊಂಡು ಮದ್ವೆಯಾಗಿ ನಂಬಿಸಿ ಹಣ ವಂಚಿಸಿದ್ದ ಪ್ರಕರಣ ಮಾಸುವ ಮುನ್ನವೆ ಮತ್ತೊಬ್ಬ ʻಮಂಗಳೂರು ಮನ್ಮಥʼನ ಪ್ರಕರಣ ಬೆಳಕಿಗೆ ಬಂದಿದೆ. ಈತ ವಿದೇಶದಲ್ಲೆ ಕುಳಿತು ಮಂಗಳೂರು ಯುವತಿಯರಿಗೆ ಗಾಳ ಹಾಕುತ್ತಿದ್ದ ಎನ್ನುವುದು ಗೊತ್ತಾಗಿದೆ.

ಗಂಡನ ಪ್ರೀತಿ, ಪ್ರೇಮ, ಪ್ರಣಯದಾಟವನ್ನು ಸ್ವತಃ ಪತ್ನಿಯೆ ಬಟಾಬಯಲು ಮಾಡಿದ್ದು, ಬಜೆಪೆ ನಿವಾಸಿ ಮನೀಶ್ ವಿರುದ್ಧ ಪತ್ನಿ ಪ್ರೀತಿ ಮಂಗಳೂರು ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಪ್ರೀತಿಯನ್ನು ಪ್ರೀತಿಸಿ ಮದ್ವೆಯಾಗಿದ್ದು ಹೇಗೆ ?
ಸಂತ್ರಸ್ತೆ ಪ್ರೀತಿ ಎಂಬಾಕೆಗೆ ಫೇಸ್ಬುಕ್’ನಲ್ಲಿ ಪರಿಚಯವಾಗಿದ್ದ ಆರೋಪಿ ಪತಿ ಮನೀಶ್, ಬ್ಲ್ಯಾಕ್ಮೇಲ್ ಮಾಡಿ ಆಕೆಯನ್ನು ಮದುವೆ ಆಗಿದ್ದನಂತೆ. ಮದುವೆಗೆ ಮೂರು ದಿನ ಬಾಕಿಯಿರುವಾಗಲೆ ಹಣ ಇಲ್ಲ ಅಂತ ಆತ್ಮಹತ್ಯೆ ನಾಟಕವಾಡಿದ್ದಾನೆ. ಇದನ್ನು ನಂಬಿ ಮದ್ವೆಗೆ ಎಲ್ಲ ಖರ್ಚನ್ನು ತಾವೆ ನೋಡಿಕೊಂಡು ಪ್ರೀತಿ ಪೋಷಕರು ವಿವಾಹ ಕಾರ್ಯ ನಡೆಸಿಕೊಟ್ಟಿದ್ದರು. ಅಲ್ಲದೆ 2 ಲಕ್ಷ ಹಣ ಕೊಟ್ಟು ವಿದೇಶದಲ್ಲಿ ಮನೀಶ್ಗೆ ಕೆಲಸ ಕೊಡಿಸಲು ಪ್ರೀತಿ ಸಹಾಯ ಮಾಡಿದ್ದರು. ಆದ್ರೆ ದುಬೈಗೆ ಹೋದ ಈತ ಬಹರೇನ್ನಲ್ಲಿರೋ ಮಹಿಳೆ ಜೊತೆ ಲವ್ವಿ ಡವ್ವಿ ಶುರುಮಾಡಿದ್ದಾನೆ.

ವಿಚಾರ ತಿಳಿದ ಪ್ರೀತಿ, ಮನೀಶ್‌ನ ಪುರಾಣ ಕೆದಕಲು ಶುರು ಮಾಡಿದ್ದಾರೆ. ಈ ವೇಳೆ ಮನೀಶ್​​ನ ನಿಜರೂಪ ಬಯಲಾಗಿದೆ. ಮದ್ವೆಗೂ ಮುನ್ನ ಅನೇಕ ಯುವತಿಯರ ಜೊತೆಗೆ ಚಕ್ಕಂದ ಆಡಿರೋದು ಗೊತ್ತಾಗಿದೆ.

ಹೌದು. ಪ್ರೀತಿ ಜೊತೆ ಮದುವೆಗೂ ಮುನ್ನ ಹಲವು ಯುವತಿಯರ ಜೊತೆ ಲವ್ ಅಫೇರ್​​ ಹೊಂದಿದ್ದ ಮನೀಶ್​​, ಅವರ ಬಳಿ ಕೂಡ ಹಣ ಪಡೆದು ಮೋಸ ಮಾಡಿದ್ದ. ಈ ವಿಚಾರವನ್ನು ಆ ಯುವತಿಯರೆ ಪ್ರೀತಿಗೆ ತಿಳಿಸಿದ್ದಾರೆ. ಹಣ ವಾಪಾಸ್ ಕೇಳಿದ್ರೆ ಎಲ್ಲ ಯುವತಿಯರ ಬಳಿ ಒಂದೆ ನಾಟಕ ಆಡಿದ್ದ ಆರೋಪಿ, ತನಗೆ ಬ್ರೈನ್​ ಟ್ಯೂಮರ್ ಇದೆ, ಹಾರ್ಟ್‌ನಲ್ಲಿ ತೂತಿದೆ ಎಂದು ಹೇಳಿ ಹಣ ಕೊಡದೆ ಲವ್ ಬ್ರೇಕ್ ಅಪ್ ಮಾಡಿಕೊಳ್ತಿದ್ದ ಎಂದು ದೂರಿನಲ್ಲಿ ಪ್ರೀತಿ ತಿಳಿಸಿದ್ದಾರೆ.

ಟಿಕ್ ಟಾಕ್ ಮಾಡಿ ಯುವತಿಯರಿಗೆ ಗಾಳ ಹಾಕುವ ಮನೀಶ್ ನಡೆತೆಯಿಂದ ಬೇಸತ್ತ ಪತ್ನಿ ಪ್ರೀತಿ, ಇಂತಹ ಗಂಡ ಬೇಡ. ಈತನ ನಂಬಿ ಮತ್ತೆ ಯಾರು ಮೋಸ ಹೋಗಬಾರದು ಎಂದು ಅಲವತ್ತುಕೊಂಡಿದ್ದಾರೆ.

Leave a Reply

Your email address will not be published. Required fields are marked *