ಸಂತ ಸೇವಾಲಾಲ್ ಶ್ರೇಷ್ಠ ದಾರ್ಶನಿಕರು

ನಗರದ

ಸುದ್ದಿ ಸಂಗ್ರಹ ಶಹಾಬಾದ್
ಹಸಿದವರಿಗೆ ಊಟ ಕೊಡು, ಬಾಯಾರಿದವರಿಗೆ ನೀರು ಕೊಡು. ಇದೆ ಧರ್ಮ, ಇದೆ ಸತ್ಯದ ಮಾರ್ಗ ಎಂಬ ಸಂದೇಶ ಸಾರಿದ ಸಂತ ಸೇವಾಲಾಲ್ ಮಹಾರಾಜರು ಜಗತ್ತಿಗೆ ಸಾರಿದ ದಾರ್ಶನಿಕರಲ್ಲಿ ಒಬ್ಬರು ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಹೇಳಿದರು.

ನಗರದ ರೈಲ್ವೆ ನಿಲ್ದಾಣದ ಸೇವಾಲಾಲ್ ಮಹಾರಾಜ ಆಟೋ ಸಂಘದ ವತಿಯಿಂದ ನಡೆದ ಸಂತ ಸೇವಾಲಾಲ್ ಮಹಾರಾಜರ 287ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ವಿವಿಧ ರೀತಿಯ ಧರ್ಮ, ಸಂಸ್ಕೃತಿ, ಜಾತಿ, ಭಾಷೆಗಳಿವೆ. ಆದರೂ ನಾವೆಲ್ಲ ಒಂದೆ ಎಂಬ ಭಾವನೆಯಿಂದ ಬದುಕುತ್ತಿದ್ದೆವೆ. ವಿವಿಧತೆಯಲ್ಲಿ ಏಕತೆ ಸಾರುವ ಇಂಥ ಸಂದೇಶ ಸಾರಿದವರಿಲ್ಲಿ ಸೇವಾಲಾಲ್ ಮಹಾರಾಜರು ಒಬ್ಬರು. ಪ್ರಾಚೀನ ಭಾರತದ ಇತಿಹಾಸ ನೋಡಿದರೆ ಹಲವು ಸಂಸ್ಕೃತಿ, ಭಾಷೆ, ಸಂಪ್ರದಾಯ, ಆಚರಣೆಗಳು ಇದುವರೆಗೆ ಚಾಚೂತಪ್ಪದೆ ಪಾಲಿಸಲಾಗುತ್ತಿದೆ ಎಂದರು.

ಮುಖಂಡರಾದ ಕಿಶನ ನಾಯಕ ಮಾತನಾಡಿ, ಸೇವಾಲಾಲ್
ಮಹಾರಾಜರ ಜೀವನ ಸಂದೇಶ ಮನುಕುಲದ ಏಳ್ಗೆಗೆ ಪೂರಕ, ಎಲ್ಲರೂ ಅವರ ವಿಚಾರ ಮೈಗೂಡಿಸಿಕೊಳ್ಳಬೇಕು ಎಂದರು.

ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕನಕಪ್ಪ ದಂಡಗುಲಕರ್, ಸುರಜ್ ರಾಠೋಡ ಮಾತನಾಡಿದರು.

ತಹಸೀಲ್ದಾರ್ ನೀಲಪ್ರಭಾ ಬಬಲಾದ, ಗ್ರೇಡ್-2 ತಹಸೀಲ್ದಾರ್ ಗುರುರಾಜ ಸಂಗಾವಿ, ಕಾಡಾ ಅಧ್ಯಕ್ಷ ಡಾ.ಎಮ್’ಎ ರಶೀದ, ರೈಲ್ವೆ ಸಿಪಿಐ ಪೂರಸಕುಮಾರ, ಎಎಎಸ್‌ಐ ಗಜಾನನ ಕಾಕರವಾಲ್, ಉದ್ಯಮಿ ಅಣವೀರ ಇಂಗಿನಶೆಟ್ಟಿ, ಬಿಜೆಪಿ ಅಧ್ಯಕ್ಷ ನಿಂಗಣ್ಣ ಹುಳಗೋಳಕರ್, ಕಾಶಣ್ಣ ಚನ್ನೂರ, ದೇವಿಂದ್ರಪ್ಪ ಯಲಗೂಡಕರ್ ಮತ್ತು
ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ವಾಸುದೇವ ಚವ್ಹಾಣ್ ವೇದಿಕೆಯಲ್ಲಿದ್ದರು.

ಸೇವಾಲಾಲ್ ಯುವ ಸಂಘದ ಅಧ್ಯಕ್ಷ ಕಿರಣ್ ಚವ್ಹಾಣ್, ಆಟೋ ಸಂಘದ ಅಧ್ಯಕ್ಷ ನರಸಿಂಗ ರಾಠೋಡ್, ಪ್ರಮುಖರಾದ ಗೋಪಾಲ್ ಪವಾರ್, ಆನಂದ್ ಚವ್ಹಾಣ್, ಚಂದರ್ ನಾಯಕ, ಮೋಹನ್ ರಾಠೋಡ, ಮದನಲಾಲ್, ಸತೀಶ ಚವ್ಹಾಣ್, ಚನ್ನವೀರ ನಾಯಕ್, ಕುಮಾರ್ ರಾಠೋಡ, ಯೋಗೇಶ್‌ ಚವ್ಹಾಣ್, ರಾಜು ಚವ್ಹಾಣ್, ಶಂಕರ ಹಬೀಬ್, ಸಂಜಯ್ ರಾಠೋಡ, ಅಭಿಜೀತ್ ರಾಠೋಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *