ಗದಗ: ಶಿವರಾತ್ರಿಯಂದೆ ಶಿವಲಿಂಗ, ನಂದಿ ವಿಗ್ರಹ ಭಗ್ನಗೊಳಿಸಿದ ದುಷ್ಕರ್ಮಿಗಳು

ಜಿಲ್ಲೆ

ಸುದ್ದಿ ಸಂಗ್ರಹ ಗದಗ
ನಾಡಿನೆಲ್ಲಡೆ ಮಹಾ ಶಿವರಾತ್ರಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ ಶಿವನ ಆರಾಧನೆ ದಿನವೆ ದುಷ್ಕರ್ಮಿಗಳು ಶಿವಲಿಂಗ ಹಾಗೂ ನಂದಿ ವಿಗ್ರಹ ಭಗ್ನಗೊಳಿಸಿದ ಘಟನೆ ಮುಂಡರಗಿ ತಾಲೂಕಿನ ಶಿಂಗಟಾಲೂರ ಬಳಿ ನಡೆದಿದೆ.

ಗ್ರಾಮದ ಹೊರವಲಯದ ಶ್ರೀ ರಾಮಲಿಂಗೇಶ್ವರ, ನಂದಿ ಮೂರ್ತಿಯನ್ನು ಭಗ್ನಗೊಳಿಸಿದ್ದಾರೆ. ದೇವಸ್ಥಾನಕ್ಕೆ ನುಗ್ಗಿದ ದುಷ್ಕರ್ಮಿಗಳು ಈ ದುಷ್ಕೃತ್ಯ ಮೆರೆದಿದ್ದಾರೆ. ಮಹಾ ಶಿವರಾತ್ರಿ ಹಿನ್ನೆಲೆ ಗ್ರಾಮಸ್ಥರು ಶನಿವಾರ ದೇವಸ್ಥಾನಕ್ಕೆ ಸುಣ್ಣ, ಬಣ್ಣ ಹಚ್ಚಿ ಬಂದಿದ್ದರು. ಬೆಳಿಗ್ಗೆ ಪೂಜೆಗೆ ತೆರಳಿದಾಗ ಮೂರ್ತಿ ಭಗ್ನವಾಗಿರುವ ವಿಷಯ ಬೆಳಕಿಗೆ ಬಂದಿದೆ.

ರಾಮಲಿಂಗೇಶ್ವರ ಲಿಂಗದ ಪಾಣಿಬಟ್ಟಲು, ಎದುರಿನ ನಂದಿ ವಿಗ್ರಹದ ಮುಖ ಹಾಗೂ ದೇವಸ್ಥಾನದ ಹಿಂಭಾಗದಲ್ಲಿನ ಹೊನ್ನತ್ತೆಮ್ಮ ದೇವಿಯನ್ನೂ ವಿರೂಪ ಗೋಳಿಸಿದ್ದಾರೆ. ಕಿಡಿಗೇಡಿಗಳ ಕೃತ್ಯಕ್ಕೆ ಸ್ಥಳಿಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಿಡಿಗೇಡಿಗಳನ್ನು ಬಂಧಿಸಿ, ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *