ವಾಡಿ: ಬಿಜೆಪಿ ಕಛೇರಿಯಲ್ಲಿ ಸಮರ್ಪಣಾ ದಿನಾಚರಣೆ

ಪಟ್ಟಣದ

ಸುದ್ದಿ ಸಂಗ್ರಹ ವಾಡಿ
ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಜನಸಂಘದ ಸಿದ್ದಾಂತವಾದಿ ಪಂಡಿತ ದೀನ್‍ದಯಾಳ್ ಉಪಾಧ್ಯಾಯರ
ಪುಣ್ಯತಿಥಿ ನಿಮಿತ್ಯ ಸಮರ್ಪಣಾ ದಿನ ಆಚರಿಸಲಾಯಿತು.

ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಪಂಡಿತ್ ದೀನ್‍ದಯಾಳ್ ಉಪಾಧ್ಯಾಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಭಾರತೀಯ ಜನಸಂಘದ ಪ್ರಮುಖ ಸಿದ್ಧಾಂತಿ, ತತ್ವಜ್ಞಾನಿ ಮತ್ತು ರಾಷ್ಟ್ರೀಯ ನಾಯಕರಾಗಿದ್ದ ಪಂಡಿತ್ ಜೀ, ಸಮಗ್ರ ಮಾನವತಾವಾದ ಮತ್ತು ಅಂತ್ಯೋದಯ ಪರಿಕಲ್ಪನೆಗಳ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯ ಏಳ್ಗೆಗೆ ಶ್ರಮಿಸಿದ ಮಹಾನ್ ರಾಷ್ಟ್ರಪ್ರೇಮಿ ಎಂದರು.

ದೇಶದ ಏಕತೆಗಾಗಿ, ಸಂಘಟನೆಯ ಸೇವೆಯಲ್ಲಿದ್ದ ಅವರು 11ಫೆಬ್ರವರಿ 1968 ರಂದು ಮೊಘಲಸರಾಯ್ ರೈಲ್ವೆ ನಿಲ್ದಾಣದ ಬಳಿ ನಿಗೂಢವಾಗಿ ಸಾವನ್ನಪ್ಪಿದರು. ಅವರ ಜ್ಞಾನ, ಸರಳತೆ ಮತ್ತು ದೇಶಪ್ರೇಮದ ಆದರ್ಶಗಳು ಸ್ಮರಿಸುತ್ತಾ, ಅವರ ಪುಣ್ಯತಿಥಿಯನ್ನು ನಾವು ಪ್ರತಿವರ್ಷ ಸಮರ್ಪಣಾ ದಿನವಾಗಿ ಆಚರಿಸುತ್ತಿದ್ದೆವೆ. ಈಗಿನ ನಮ್ಮ ಬಿಜೆಪಿ ಪಕ್ಷವು ವಿಶ್ವದಲ್ಲೆ ಬೃಹದಾಕಾರವಾಗಿ ಬೆಳೆಯಲಿಕ್ಕೆ ಪಂಡಿತ್ ಜೀ ಅವರ ಸೈದ್ಧಾಂತಿಕ ಮಾರ್ಗದರ್ಶನ ಮತ್ತು ನೈತಿಕ ಸ್ಪೂರ್ತಿಯ ಮೂಲಕಾರಣ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಅರ್ಜುನ ಕಾಳೆಕರ, ಅಶೋಕ ಪವಾರ, ಮನಿಷ್ ವಾಲಿಯ, ಹೀರಾ ನಾಯಕ, ಚಿಕ್ಕಯ್ಯ ಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *