ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ ರೈಲ್ವೆ ವಿಭಾಗದ ಮುಖ್ಯ ವ್ಯವಸ್ಥಾಪಕರಿಗೆ ಬಿಜೆಪಿ ಮುಖಂಡರು ಮನವಿ

ಪಟ್ಟಣದ

ಸುದ್ದಿ ಸಂಗ್ರಹ ವಾಡಿ
ಪಟ್ಟಣದ ರೈಲ್ವೆ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗಳು ಮತ್ತು ಕುಂದು ಕೊರತೆಗಳನ್ನು ವೀಕ್ಷಿಸಿಲು ಆಗಮಿಸಿದ ಮುಂಬಯಿ ರೈಲ್ವೆ ವಿಭಾಗದ ಮುಖ್ಯ ವ್ಯವಸ್ಥಾಪಕ ಪ್ರತೀಕ್ ಗೋಸ್ವಾಮಿಗೆ ಬಿಜೆಪಿ ಮುಖಂಡರು ಮನವಿ ಸಲ್ಲಿಸಿದರು.

ಸ್ಥಳೀಯ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮತ್ತು ಮುಖಂಡ ರಾಜು ಮುಕ್ಕಣ್ಣ ಮಾತನಾಡಿ, ವಾಡಿ ಪಟ್ಟಣದ ರೈಲ್ವೆ ನಿಲ್ದಾಣದ ಅಭಿವೃದ್ಧಿ ಬಗ್ಗೆ ವಿವರಿಸುತ್ತಾ ವಾಡಿ ತನ್ನದೆಯಾದ ಇತಿಹಾಸ ಹೊಂದಿದೆ, ಪುರಾತನ ರೈಲ್ವೆ ನಿಲ್ದಾಣದಲ್ಲಿ ಇದು ಒಂದಾಗಿದೆ, ಭಾರತ ರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಇಲ್ಲಿಗೆ ಭೇಟಿ ಕೊಟ್ಟಿದ್ದರು ಎಂದರು.

ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅಮೃತ್‌ ಭಾರತ್‌ ಸ್ಟೇಷನ್‌ ಸ್ಕೀಮ್‌’ನಲ್ಲಿ ಈ ರೈಲ್ವೆ ನಿಲ್ದಾಣದ ಕಾಮಗಾರಿ ಕೈಗೆತ್ತಿಕೊಂಡಿದ್ದು ನಮಗೆ ತುಂಬಾ ಖುಷಿಯಾಗಿದೆ. ಆದರೆ ಈ ನಿಲ್ದಾಣ ಅನೇಕ ಸಮಸ್ಯೆಗಳ ತಾಣವಾಗಿದೆ, ಕಾಮಗಾರಿ ವಿಳಂಬದ ಜೊತೆಗೆ ಕಳಪೆಯಾಗುತ್ತಿರುವುದು ಬೇಸರ ಮೂಡಿಸಿದೆ, ಇದರ ಬಗ್ಗೆ ತಾವು ಹೆಚ್ಚಿನ ಗಮನ ಹರಿಸಬೇಕು. ಸಮಸ್ಯೆಗಳ ಪಟ್ಟಿ ನೀಡುತ್ತಿದ್ದು, ಅವುಗಳನ್ನು ಪರಿಹರಿಸಿಳಬೇಕು ಎಂದು ಮನವಿ ಮಾಡಿದರು.

1) ಪ್ಲೈಓವರ್ ಮತ್ತು ಬ್ರಿಡ್ಜ್‌ ಕಳಪೆ ಕಾಮಗಾರಿ ವಿರುದ್ಧ ಕ್ರಮಕೈಗೊಂಡು, ಗುಣಮಟ್ಟದೊಂದಿಗೆ ಆದಷ್ಟು ಬೇಗ ಪೂರ್ಣಗೊಳಿಸಿ.‌

2) ವಾಡಿ ಪಟ್ಟಣದ ಸುತ್ತಲು ರೈಲ್ವೆ ಗೇಟ್’ಗಳು ಆವರಿಸಿಕೊಂಡಿರುವುದರಿಂದ, ಜನರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದು, ಹೀಗಾಗಿ ಒಳ ಸೇತುವೆ ಅಥವಾ ಮೇಲ್ ಸೇತುವೆ ನಿರ್ಮಿಸಿ.

‌3) ಹನುಮಾನ ನಗರ, ವಿಜಯ ನಗರ, ಸೋಮ್ಲಾ ತಾಂಡಾ ಮತ್ತು ಇಂದಿರಾ ನಗರಕ್ಕೆ ಹೊಗಬೇಕಾದರೆ ರೈಲ್ವೆ ಹಳಿ ದಾಟಿಯೆ ಹೋಗಬೇಕು, ಸುಮಾರು 7-8 ಸಾವಿರ ಬಡ ಕುಟುಂಬ ವಾಸಿಸುವ ಬಡಾವಣೆಗಳಿವೆ. ಇಲ್ಲಿನ ಜನರಿಗೆ ಸುರಕ್ಷಿತವಾಗಿ ಒಳ ಸೇತುವೆ ನಿರ್ಮಾಣ ತುಂಬಾ ಅವಶ್ಯಕ.

4) ಕೊಲ್ಲಾಪುರ ರೈಲು ವಾಡಿಯಿಂದ ಪ್ರಾರಂಭಿಸಿ ತಲುಪುವಂತೆ ಮಾಡಿ, ಕಾಚಿಗುಡಾ ಪ್ಯಾಸೆಂಜರ್ ರೈಲು ಕಲಬುರಗಿಯಿಂದ ಪ್ರಾರಂಭಿಸಿ, ತಲುಪುವಂತೆ ಹಾಗೂ ವಂದೆ ಭಾರತ ರೈಲನ್ನು ವಾಡಿ ನಿಲ್ದಾಣದಲ್ಲಿ ನಿಲ್ಲಿಸು ಸೂಚಿಸಿ ಇದ್ದರಿಂದ ಬಹಳಷ್ಟು ಜನರಿಗೆ ತುಂಬಾ ಅನುಕೂಲವಾಗುತ್ತದೆ.

5) ರೈಲ್ವೆ ನಿಲ್ದಾಣದ ಕೊಳಚೆ ನೀರು ವಾರ್ಡ್ ಸಂಖ್ಯೆ 20ರಲ್ಲಿ ಹರಿದು ಹೊಗುತ್ತಿರುವುದರಿಂದ, ಮಳೆಗಾಲದಲ್ಲಿ ಜನರು ಸಂಕಷ್ಟಕ್ಕೆ ಸಿಲುಕುತ್ತಿದ್ದು, ಹೀಗಾಗಿ ಇದನ್ನು ಪರಿಹರಿಸಿ.

6) ನಿಲ್ದಾಣದಲ್ಲಿ ಶೌಚಾಲಯ ಮತ್ತು ವೇಟಿಂಗ್‌ ಹಾಲ್ ನಿರ್ವಾಣ ಇಲ್ಲದೆ ಇರುವುದರಿಂದ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

7) ನಿಲ್ದಾಣದಲ್ಲಿ ಪ್ರಥಮ ಚಿಕಿತ್ಸೆಗಾಗಿ ವೈದ್ಯರೊಂದಿಗೆ
ಔಷಧ ಅಂಗಡಿ, ಸ್ವದೇಶಿ ಮಳಿಗೆ ಪ್ರಾರಂಭಕ್ಕೆ ಒತ್ತು ನೀಡಿ.
ಗುಟುಕಾ, ಧೂಮಪಾನ ಮತ್ತು ಪ್ಲಾಸ್ಟಿಕ್ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು.

8) ಜನರ ಮತ್ತು ಜಾನುವಾರುಗಳ ಸುರಕ್ಷತೆಗೆ ನಿಲ್ದಾಣದ 3 ಕಿ‌.ಮಿ ಸುತ್ತಲೂ ಬೇಲಿ ಹಾಕಿಸುವುದು.

9) ನಿಲ್ದಾಣದಲ್ಲಿ ಎಕ್ಸಲೇಟರ್ ಅಳವಡಿಸಿ, ತುರ್ತು ಸಂಧರ್ಭದಲ್ಲಿ ಅಂಬುಲೇನ್ಸ್ ಸಂಚರಿಸುವಂತೆ ಮಾಡುವುದು.

10) ಹಳಿಗಳ ಮಧ್ಯ ಇರುವ ಸಾರ್ವಜನಿಕ ರುಧ್ರಭೂಮಿಗೆ ರಸ್ತೆ ಸಂಪರ್ಕ ಕಲ್ಪಸುವುದು.

11) ವಾಡಿಯಿಂದ ಬೀದರ್, ಬೀದರ್’ದಿಂದ ವಾಡಿವರೆಗೆ, ದೌಂಡ್ ದಿಂದ ವಾಡಿಯವರೆಗೆ, ವಾಡಿಯಿಂದ ದೌಂಡ್ ವರೆಗೆ ರೈಲನ್ನು ವಿಸ್ತರಿಸುವುದು.

12) ಅಮೃತ್ ಭಾರತ್ ಸ್ಟೇಷನ್ ಅಡಿಯಲ್ಲಿ ವಾಡಿ ನಿಲ್ದಾಣ ಅಭಿವೃದ್ಧಿ ಕೈಗೊಂಡಿದ್ದರು ಯಾವುದೆ ಸಮರ್ಪಕ ಕಾರ್ಯವಾಗಿಲ್ಲ, ಈಗ ಅದು ಸ್ಥಗಿತ ಗೊಂಡಿದೆ.

ವಾಡಿ ವಿಭಾಗದಿಂದ ತಿಂಗಳಿಗೆ ಕೋಟ್ಯಾಂತರ ಲಾಭ ಪಡೆಯುವ ಇಲಾಖೆ, ವಾಡಿ ನಿಲ್ದಾಣ ಅಭಿವೃದ್ಧಿ ಮಾಡದೆ, ಇಲ್ಲಿನ ಜನರಿಗೆ ಅನುಕೂಲ ಮಾಡದಿರುವುದು ದುರಾದೃಷ್ಟಕರ, ಈ ಬಗ್ಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಮತ್ತು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ ಸೋಮಣ್ಣ ಅವರಿಗೂ ಮೇಲ್ ಮಾಡಿದ್ದು, ಮೇಲ್ಕಾಣಿಸಿದ ಸಮಸ್ಯೆಗಳನ್ನು ತಾವು ಗಂಭೀರವಾಗಿ ಪರಿಗಣಿಸಿ ಆದಷ್ಟು ಬೇಗ ಪರಿಹರಸಿ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಶರಣಗೌಡ ಚಾಮನೂರ, ಯಮನಪ್ಪ ನವನಳ್ಳಿ, ಭೀಮಶಾ ಜಿರೋಳ್ಳಿ, ಶಿವಶಂಕರ ಕಾಶೆಟ್ಟಿ, ವೀರಣ್ಣ ಗೌಡ ಮೆಲಸೀಮಿ, ಚಂದ್ರಶೇಖರ ಹಾವೇರಿ, ಯಂಕಮ್ಮ ಗೌಡಗಾಂವ, ಉಮಾಭಾಯಿ ಗೌಳಿ, ಗೋಪಾಲ ರಾಠೋಡ, ಮನೋಹರ ಚವ್ಹಾಣ, ರವಿ ಚವ್ಹಾಣ, ರಾಮದಾಸ ಚವ್ಹಾಣ, ಶಂಕರ ಚವ್ಹಾಣ, ವಿನೋದ ರಾಠೋಡ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *