ಸುದ್ದಿ ಸಂಗ್ರಹ ಶಹಾಬಾದ
ನೇತಾಜಿಯವರ ವಿಚಾರ, ಆದರ್ಶ ಮೌಲ್ಯಗಳು ಎತ್ತಿ ಹಿಡಿಯುವುದು ಅವಶ್ಯಕ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಡಾ.ರಮೇಶ ಲಂಡನಕರ್ ಹೇಳಿದರು.
ನಗರದ ಸಿದ್ದರಾಮೇಶ್ವರ ಶಾಲಾ ಮೈದಾನದಲ್ಲಿ ಎಐಡಿಎಸ್‌ಓ ಎಐಡಿವೈಓ ಮತ್ತು ಎಐಎಂಎಸ್‌ಎಸ್ ಸಂಘಟನೆಯ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ನೇತಾಜಿ ಸುಭಾಷ ಚಂದ್ರ ಬೋಸ್’ರ 129ನೇ ಜನ್ಮದಿನದ ನಿಮಿತ್ಯ ನಡೆದ 13ನೇ ಸಾಂಸ್ಕೃತಿಕ ಜನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ಭಾರತ ದೇಶ ಸ್ವಾತಂತ್ರಗೊಳಿಸುವುದಷ್ಟೆ ಅಲ್ಲ, ಸಮಗ್ರ ಸಮಾನತೆಯ ಸ್ವಾತಂತ್ರ್ಯ ಮತ್ತು ಶೋಷಣೆ ಇಲ್ಲದ ಸಮಾಜ ನಿರ್ಮಿಸಬೇಕು. ಅಂತಹ ಭವ್ಯ ಭಾರತದ ವ್ಯವಸ್ಥೆಗಾಗಿ ನೇತಾಜಿ ಸುಭಾಷ್ ಚಂದ್ರ ಬೋಸ್ ಕನಸು ಹೊತ್ತು ತಮ್ಮ ಜೀವನದುದ್ದಕ್ಕೂ ರಾಜಿ ಮಾಡಿಕೊಳ್ಳದೆ ಹೋರಾಟ ಮಾಡಿದ ಮಹಾಪುರುಷ ಎಂದರು.
ಸಿನಿಮಾ ನಟರು, ಕ್ರೀಡಾ ತಾರೆಯರು ನಮಗೆ ಸ್ಪೂರ್ತಿಯಲ್ಲಾ, ನಮಗೆ ನಿಜವಾದ ಸ್ಫೂರ್ತಿ ಎಂದರೆ ನೇತಾಜಿ, ಭಗತ ಸಿಂಗ, ಅಜಾಧ ಮತ್ತು ನಮ್ಮ ತಂದೆ ತಾಯಿಂದಿರು ಆಗಬೇಕು ಎಂದರು.
ಎಐಕೆಕೆಎಂಎಸ್ ರೈತ ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷ ಟಿ.ಎಸ್ ಸುನಿತಕುಮಾರ ಮಾತನಾಡಿ, ಅನ್ಯಾಯದ ವಿರುದ್ಧ ಧ್ವನಿ ಎತ್ತಿದರೆ ಸಾಲದು ದೇಶದ ಬದಲಾವಣೆಗೆ ಸಿದ್ದರಾಗಬೇಕು ಎಂದರು.
ಎಐಎಂಎಸ್ಎಸ್ ಜಿಲ್ಲಾಧ್ಯಕ್ಷೆ ಗುಂಡಮ್ಮ ಮಡಿವಾಳ ಪ್ರಸ್ತಾವಿಕವಾಗಿ ಮಾತನಾಡಿದರು.
ವೇದಿಕೆ ಮೇಲೆ ಸ್ಪೂರ್ತಿ ಗುರುಜಾಲಕರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮರಿಯಪ್ಪ ಹಳ್ಳಿ, ದೇವೇಂದ್ರ ಅಂಗಡಿ, ಪೀರ್ ಪಾಶಾ, ಆರ್.ಕೆ ವೀರಭದ್ರಪ್ಪ, ರಾಮಣ್ಣ ಇಬ್ರಾಹಿಂಪೂರ, ರಾಘವೇಂದ್ರ ಎಂ.ಜಿ, ಗಣಪತರಾವ ಕೆ ಮಾನೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಜಗನ್ನಾಥ ಎಸ್.ಎಚ್ ನಿರೂಪಿಸಿ, ವಂದಿಸಿದರು.
ಸಿದ್ದಣ್ಣ ಬಿಜ್ಜರಗಿ ಬಿಜಾಪುರ ಅವರಿಂದ ಡೊಳ್ಳಿನ ಪದ ಮತ್ತು ಕುಣಿತ ಜನರನ್ನು ಮನರಂಜಿಸಿತು ಹಾಗೂ ಜನಪದ, ನೃತ್ಯ ಕೋಲಾಟ ಸಂಗೀತ ಕಾರ್ಯಕ್ರಮಗಳು ಜರುಗಿದವು.