ಸುದ್ದಿ ಸಂಗ್ರಹ ಬೆಳಗಾವಿ
ಸೈಬರ್ ವಂಚಕರು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರ ಹೆಸರಿನಲ್ಲಿ ವಂಚನೆಗಿಳಿದಿದ್ದಾರೆ. ಪಾಲಿಕೆ ಆಯುಕ್ತ ಕಾರ್ತಿಕ್ ಅವರ ಡಿಪಿ ಹಾಕಿಕೊಂಡು ಉಪ ಆಯುಕ್ತ ಉದಯಕುಮಾರ್ ತಳವಾರಗೆ ಹಣಕ್ಕಾಗಿ ವಾಟ್ಸಪ್‌ನಲ್ಲಿ ಮೆಸೇಜ್ ಕಳುಹಿಸಿದ್ದಾರೆ.
ಮೆಸೇಜ್‌ನಲ್ಲಿ ತುರ್ತಾಗಿ 50 ಸಾವಿರ ರೂ. ಅಕೌಂಟ್‍ಗೆ ಹಾಕಿ. ನಾನು ಮೀಟಿಂಗ್‍ನಲ್ಲಿರುವೆ, ಹಣ ಹಾಕಿ ಸ್ಕ್ರೀನ್ ಶಾಟ್ ಕಳಿಸಿ ಎಂದು ವಂಚಕರು ಮೆಸೆಜ್ ಕಳುಹಿಸಿದ್ದಾರೆ. ಮೆಸೇಜ್ ನೋಡಿ ಕಕ್ಕಾಬಿಕ್ಕಿಯಾದ ಉಪ ಆಯುಕ್ತ ಉದಯಕುಮಾರ್ ತಳವಾರ, ಹಣ ಕೇಳಿದ ನಂಬರ್‌ಗೆ ವಾಟ್ಸಪ್ ಕಾಲ್ ಮಾಡಿದ್ದಾರೆ. ಈ ವೇಳೆ ಕರೆ ಸ್ವೀಕರಿಸದೆ ಮೀಟಿಂಗ್‍ನಲ್ಲಿದ್ದೆನೆ ಎಂದು ವಂಚಕ ಮೆಸೆಜ್ ಕಳುಹಿಸಿದ್ದಾನೆ.
ಅನುಮಾನಗೊಂಡ ಉಪ ಆಯುಕ್ತರು ಪಾಲಿಕೆ ಆಯುಕ್ತ ಕಾರ್ತಿಕ್ ಅವರಿಗೆ ಕರೆ ಮಾಡಿದ್ದಾರೆ. ಈ ವೇಳೆ ವಂಚಕರ ಸಂಚು ಗೊತ್ತಾಗಿದೆ. ತಮ್ಮದೆ ಡಿಪಿ ಇಟ್ಟುಕೊಂಡು ಹಣ ಕೇಳ್ತಿರುವ ಮೆಸೇಜ್ ನೋಡಿ ಪಾಲಿಕೆ ಆಯುಕ್ತರೆ ಶಾಕ್ ಆಗಿದ್ದಾರೆ.
ಈ ಸಂಬಂಧ ಬೆಳಗಾವಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಉಪ ಆಯುಕ್ತರು ದೂರು ದಾಖಲಿಸಿದ್ದಾರೆ.