ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು: ಡಾ.ಬಸವರಾಜ ಹಿರೇಮಠ

ನಗರದ

ಸುದ್ದಿ ಸಂಗ್ರಹ ಶಹಾಬಾದ್
ಮೂಡನಂಬಿಕೆ ತೊಲಗಿಸಬೇಕಾದರೆ ವೈಜ್ಞಾನಿಕ ಮನೋಭಾವನೆ ಅಗತ್ಯ, ವಿದ್ಯಾರ್ಥಿಗಳು ಜೀವನದಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಎಸ್’ಎಸ್ ಮರಗೋಳ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಬಸವರಾಜ ಹಿರೇಮಠ ಹೇಳಿದರು.

ನಗರದ ಎಸ್’ಎಸ್ ಮರಗೋಳ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮವನ್ನು ಡಾ ಸಿ.ವಿ ರಾಮನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ವೈಜ್ಞಾನಿಕವಾಗಿ ಭಾರತ ದೇಶ ಬೆಳೆದು ನಿಂತಿರುವುದು ತುಂಬಾ ಹೆಮ್ಮೆಪಡುವ ವಿಷಯ ಯುದ್ಧಕ್ಕೆ ಸಜ್ಜಾಗುವ ಪ್ರಕ್ರಿಯೆ, ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಭಾರತ ದೇಶ ಬೆಳೆದು ನಿಂತಿದೆ ಎಂದರು.

ಈ ಸಂದರ್ಭದಲ್ಲಿ ಡಾ.ಜಿ.ಆರ್ ಸ್ಥಾವರಮಠ, ಡಾ.ಲಕ್ಷ್ಮಣರಾವ್ ರಾಠೋಡ್, ಡಾ.ಹಣಮಂತಪ್ಪ್ ಸೇಡಂಕರ್, ಡಾ.ನಾಗರಾಜ್ ದೇವತ್ಕಲ್, ವಿಶಾಲ ರಾಠೋಡ, ಸವಿತಾ ಪಾಟೀಲ್ ಮತ್ತು ಪದವಿ ಮಹಾವಿದ್ಯಾಲಯದ ಉಪನ್ಯಾಸಕರ ಬಳಗ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಾಯಿರಾಮ್ ನಿರೂಪಿಸಿದರು, ಸುನೀತಾ ಮಠ ವಂದಿಸಿದರು.

Leave a Reply

Your email address will not be published. Required fields are marked *