ಕಲಬುರಗಿ: ಲಾಠಿ ಚಾರ್ಜ್ ಖಂಡಿಸಿ ಬೀದಿಗಿಳಿದ ವಿದ್ಯಾರ್ಥಿಗಳು

ಸುದ್ದಿ ಸಂಗ್ರಹ ಕಲಬುರಗಿನೀಟ್ ಅಕ್ರಮಕ್ಕೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ನಡೆಸಿದ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ನೂರಾರು ವಿದ್ಯಾರ್ಥಿಗಳು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ‍ಪ್ರಜಾಸತ್ತಾತ್ಮಕ ಚಿಂತನ ವೇದಿಕೆ ನೇತೃತ್ವದಲ್ಲಿ ವಿವಿಧ ವಿದ್ಯಾರ್ಥಿ ಸಂಘಟನೆಗಳು, ರೈತ, ದಲಿತ, ಮಹಿಳಾ ಸಂಘಟನೆಗಳು ಜಂಟಿಯಾಗಿ ಆಯೋಜಿಸಿದ್ದ ಈ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿ ಸಂಘಟನೆಗಳೊಂದಿಗೆ ಹೋರಾಟಗಾರರು, […]

Continue Reading

ರಸ್ತೆಯಲ್ಲಿ ಸಿಕ್ಕ 11,500 ರೂ. ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ವಿದ್ಯಾರ್ಥಿ

ಸುದ್ದಿ ಸಂಗ್ರಹ ಕಾಳಗಿ ರಸ್ತೆಯಲ್ಲಿ ಸಿಕ್ಕ 11,500 ರೂ ಹೊಸ ಹೆಬ್ಬಾಳದ ಮೆಕಾನಿಕ್ ರವರ ನೆರವಿನೊಂದಿಗೆ ಹಣ ಕಳೆದುಕೊಂಡವರಿಗೆ ಹಿಂದಿರುಗಿಸುವ ಮೂಲಕ ವಿದ್ಯಾರ್ಥಿಯೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ. ತಾಲೂಕಿನ ಹೊಸ ಹೆಬ್ಬಾಳ ಗ್ರಾಮದ ಸರಕಾರಿ ಪ್ರೌಢ ಶಾಲೆಯ 9ನೇ ತರಗತಿಯ ನಬಿಸಾಬ್ ತಂದೆ ಗೈಬನ್ ಸಾಬ್ ಪ್ರಾಮಾಣಿಕತೆ ಮೆರೆದ ವಿದ್ಯಾರ್ಥಿಯಾಗಿದ್ದಾನೆ.  ಗ್ರಾಮದ ಮಾಜಿ ಅಧ್ಯಕ್ಷ ನಾಗರಾಜ್ ದಿವಟಗಿ ನೇತೃತ್ವದಲ್ಲಿ ಹಣ ಕಳೆದುಕೊಂಡವರನ್ನು ಪತ್ತೆ ಹಚ್ಚಿ ಅವರ ಹಣ ಅವರಿಗೆ ಮರಳಿಸಲಾಯಾತು.  ವಿದ್ಯಾರ್ಥಿಯ ಸಾಮಾಜಿಕ ಜವಾಬ್ದಾರಿಯನ್ನು ಮೆಚ್ಚಿದ ಹಣ ಪಡೆದ ಮಹಿಳೆ, […]

Continue Reading

ದೇಶದಲ್ಲಿ ಮುಂಗಾರು ಮಳೆ ಜೋರು: ಅಲ್ಲಲ್ಲಿ ಅವಾಂತರ ಸೃಷ್ಟಿ, ಜನಜೀವನ ಅಸ್ತವ್ಯಸ್ತ

ಸುದ್ದಿ ಸಂಗ್ರಹ ನವದೆಹಲಿದೇಶದ ಹಲವು ಭಾಗಗಳಲ್ಲಿ ಮುಂಗಾರು ಮಳೆ ಜೋರಾಗಿದ್ದು, ಅಲ್ಲಲ್ಲಿ ಅವಾಂತರ ಸೃಷ್ಟಿಯಾಗಿವೆ. ಮಹಾರಾಷ್ಟ್ರದ ನಾಸಿಕ್, ಪಾಲ್‌ಗಡಗಳಲ್ಲಿ ಭಾರಿ ಮಳೆಯಾಗ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ದಕ್ಷಿಣ ಗುಜರಾತ್‌ನ ವಲ್ಸಾದ್ ಜಿಲ್ಲೆಯ ಉಮರ್ ಗಾಂವ್ ತಾಲೂಕಿನಲ್ಲಿ ಕಳೆದ 24 ಗಂಟೆಗಳಲ್ಲಿ 43 ಮಿ.ಮೀ ಮಳೆಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಅಸ್ಸಾಂನಲ್ಲಿ ಭೀಕರ ಪ್ರವಾಹದಿಂದ 11 ಜಿಲ್ಲೆಗಳು ಹಾನಿಗೊಳಗಾಗಿದೆ. 6.53 ಲಕ್ಷ ಜನರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 10 ಜನರು ಸಾವನ್ನಪ್ಪಿದ್ದು, ಆ ಮೂಲಕ ಸಾವಿನ ಸಂಖ್ಯೆ […]

Continue Reading

ಕಲಬುರಗಿಯಲ್ಲಿ ಜುಲೈ 24 ರಂದು ನೇರ ಸಂದರ್ಶನ ಆಯೋಜನೆ

ಸುದ್ದಿ ಸಂಗ್ರಹ ಕಲಬುರಗಿಜುಲೈ 24ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30ರವರೆಗೆ ಸರಕಾರಿ ಐಟಿಐ ಕಾಲೇಜು ಹಿಂದೆ ಇರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೇರ ಸಂದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ವಿದ್ಯಾಭ್ಯಾಸದ ಎಲ್ಲಾ ಅಂಕಪಟ್ಟಿಗಳ ಝೆರಾಕ್ಸ್, ರೆಸ್ಯೂಮ್, ಭಾವಚಿತ್ರಗಳು ಮತ್ತು ಆಧಾರ್‌ ಕಾರ್ಡ್‌ನೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಅಥವಾ ಕಚೇರಿ ದೂರವಾಣಿ ಸಂಖ್ಯೆ 08472–274846, ಮೊಬೈಲ್ ಸಂಖ್ಯೆ 9036069143 […]

Continue Reading

ವೈಫಲ್ಯ ಸರಿ, ಆದರೆ ವಂಚನೆ ಸರಿಯಲ್ಲ: ಸಚಿನ್‌ ತೆಂಡೂಲ್ಕರ್‌ ಪೋಸ್ಟ್‌

ಸುದ್ದಿ ಸಂಗ್ರಹ ಮುಂಬೈವೈಫಲ್ಯ ಸರಿ ಆದರೆ ವಂಚನೆ ಸರಿಯಲ್ಲ. ಪ್ರಯತ್ನಕ್ಕಿಂತ ರಿಸಲ್ಟ್‌ಗಳಿಗೆ ಆದ್ಯತೆ ನೀಡುವ ಸಮಾಜವು ಅರ್ಹತೆಗಿಂತ ಶಾರ್ಟ್‌ಕಟ್‌ಗಳನ್ನು ಹುಡುಕುತ್ತದೆ ಎಂದು ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಅಭಿಪ್ರಾಯಪಟ್ಟಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಸಚಿನ್‌, ನನ್ನ ತಂದೆ ಪ್ರಾಧ್ಯಾಪಕರಾಗಿದ್ದರು. ಅವರು ಅನೇಕ ಯುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದರು. ಅವರು ಆರಂಭದಲ್ಲಿಯೆ ಕಲಿಸಿದ ಒಂದು ಪಾಠವೆಂದರೆ, ವೈಫಲ್ಯ ಸರಿ, ಮೋಸ ಸರಿಯಲ್ಲ. ಎಂದಿಗೂ ಶಾರ್ಟ್‌ಕಟ್‌ಗಳನ್ನು ತೆಗೆದುಕೊಳ್ಳಬೇಡಿ ಎಂದು ಹೇಳಿದ್ದಾರೆ. ಸಮಾಜದಲ್ಲಿ ವಯಸ್ಕರಾದ ನಾವು ಸಂಸ್ಕೃತಿಯನ್ನು ರೂಪಿಸುವ ಜವಾಬ್ದಾರಿ ಹೊಂದಿದ್ದೆವೆ. ಪ್ರಯತ್ನಕ್ಕಿಂತ […]

Continue Reading

ಇಂಟರ್‌ನೆಟ್ ಇಲ್ಲದಿದ್ದರೂ UPI ಮೂಲಕ ಹಣ ಪಾವತಿ ಮಾಡಬಹುದು: Tap and Pay ಹೇಗೆ ಸಾಧ್ಯ ?

ಇಂಟರ್‌ನೆಟ್ ಸಂಪರ್ಕವಿಲ್ಲದಿದ್ದರೂ ಯುಪಿಐ ಮೂಲಕ ಹಣ ಪಾವತಿಸುವ ದಿನಗಳು ಶೀಘ್ರದಲ್ಲೆ ಬರಲಿವೆ. ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ, ಭೂಗತ ಮೆಟ್ರೋ ನಿಲ್ದಾಣದಲ್ಲಿದ್ದಾಗ ಅಥವಾ ನೆಟ್‌ವರ್ಕ್ ಸಮಸ್ಯೆ ಇರುವ ಪ್ರದೇಶದಲ್ಲಿದ್ದರೂ ಮೊಬೈಲ್ ‘ಟ್ಯಾಪ್’ ಮಾಡುವ ಮೂಲಕ ಹಣ ಪಾವತಿಸಲು ಸಾಧ್ಯವಾಗುವ ಹೊಸ ವ್ಯವಸ್ಥೆಯನ್ನು ಭಾರತ ಅಭಿವೃದ್ಧಿಪಡಿಸುತ್ತಿದೆ. ವರದಿಗಳ ಪ್ರಕಾರ, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಇಂಟರ್‌ನೆಟ್ ಇಲ್ಲದೆಯೇ ಕಾರ್ಯನಿರ್ವಹಿಸುವ Offline Tap and Pay UPI ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ. ಈ ಹೊಸ ತಂತ್ರಜ್ಞಾನ ಜಾರಿಯಾದರೆ ಭಾರತದ ಡಿಜಿಟಲ್ ಪಾವತಿ […]

Continue Reading

ಕಲಬುರಗಿ: ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಆಹ್ವಾನ

ಸುದ್ದಿ ಸಂಗ್ರಹ ಕಲಬುರಗಿಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರುವ ವೃತ್ತಿನಿರತ ಕುಶಲಕರ್ಮಿಗಳಿಂದ ಉಚಿತ ಉಪಕರಣಗಳು ಹಾಗೂ ಹೊಲಿಗೆ ಯಂತ್ರಗಳನ್ನು ಪಡೆಯಲು ಜಿಲ್ಲಾ ಪಂಚಾಯಿತಿ ಗ್ರಾಮೀಣ ಕೈಗಾರಿಕಾ ವಿಭಾಗದಿಂದ ಅರ್ಜಿ ಆಹ್ವಾನಿಸಲಾಗಿದೆ. 2026-27ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿ ಧೋಬಿ ಹಾಗೂ ಕ್ಷೌರಿಕ ವೃತ್ತಿಯ ಉಚಿತ ಉಪಕರಣಗಳನ್ನು ಸಾಮಾನ್ಯ ಸೇರಿದಂತೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ನೀಡಲಾಗುವುದು. ಹಾಗೆಯೇ ಪೋರ್ಟೆಬಲ್‌ ಫ್ರೀ ಹ್ಯಾಂಡ್ ವಿದ್ಯುತ್‍ ಚಾಲಿತ ಹೊಲಿಗೆ ಯಂತ್ರಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಮಾತ್ರ ವಿತರಿಸಲಾಗುವುದು. ಅರ್ಜಿ […]

Continue Reading

ಕಲಬುರಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ಅರ್ಜಿ ಆಹ್ವಾನ

ಸುದ್ದಿ ಸಂಗ್ರಹ ಕಲಬುರಗಿಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ/ ಕಾಲೇಜುಗಳಲ್ಲಿ ಪ್ರಸಕ್ತ ಸಾಲಿಗೆ ಅತಿಥಿ ಉಪನ್ಯಾಸಕರು/ಅತಿಥಿ ಶಿಕ್ಷಕರ ಹುದ್ದೆಗಳಿಗೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ. ಚಿಂಚೋಳಿ ತಾಲೂಕಿನ ಅಣವಾರ ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಷಯದ ಅತಿಥಿ ಉಪನ್ಯಾಸಕ, ಅಫಜಲಪುರ ತಾಲೂಕಿನ ಬಡದಾಳ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಕಾಲೇಜಿನಲ್ಲಿ ರಸಾಯನಶಾಸ್ತ್ರ ಅತಿಥಿ ಉಪನ್ಯಾಸಕ […]

Continue Reading

ನಿರಂತರ 24 ಗಂಟೆ ಕನ್ನಡ ಬೋಧನೆ ಮಾಡಿದ ಶಿಕ್ಷಕ ಸಂಗಮೇಶ ರೋಣದ್

ಸುದ್ದಿ ಸಂಗ್ರಹ ಕಲಬುರಗಿಕನ್ನಡ ಭಾಷೆಯ ಅಭಿವೃದ್ದಿ ಮತ್ತು ಸ್ಪರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳಿಗೆ ಗುಣಮಟ್ಟದ ಮಾರ್ಗದರ್ಶನ ನೀಡುವ ಉದ್ದೇಶದಿಂದ ಕಲಬುರಗಿ ನಗರದ ಶೃಂಗೇರಿ ಅಕಾಡೆಮಿಯಲ್ಲಿ ಶಿಕ್ಷಕ ಸಂಗಮೇಶ ರೋಣದ್ ನಿರಂತರ 24 ಗಂಟೆಗಳ ಕಾಲ ಕನ್ನಡ ವ್ಯಾಕರಣ ಮತ್ತು ಕನ್ನಡ ಸಾಹಿತ್ಯ ಬೋಧನೆ ಕಾರ್ಯ ಯಶಸ್ವಿಯಾಗಿ ನಡೆಸಿದ್ದಾರೆ. ಜುಲೈ 15ರಂದು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾದ ವಿಶೇಷ ತರಗತಿಯು ಜುಲೈ 16ರ ಬೆಳಗ್ಗೆ 8 ಗಂಟೆಯವರೆಗೆ ಯಾವುದೆ ವಿರಾಮವಿಲ್ಲದೆ ನಡೆಯಿತು. ಈ ಅವಧಿಯಲ್ಲಿ ಕಡ್ಡಾಯ ಕನ್ನಡ ಪತ್ರಿಕೆಗೆ ಸಂಬಂಧಿಸಿದ […]

Continue Reading

ಚಿತ್ತಾಪುರ: ಹಳೆಯ ಕೈಗಾರಿಕಾ ವಸಾಹತು ಅಭಿವೃದ್ಧಿಗೆ ಸಿಟಿಎಸ್‌ಎಸ್‌ಐಎ ಮನವಿ

ಸುದ್ದಿ ‌ ಸಂಗ್ರಹ ಚಿತ್ತಾಪುರ ತಾಲೂಕು ಸಣ್ಣ ಕೈಗಾರಿಕೆಗಳ ಸಂಘದ ವತಿಯಿಂದ ಕೆಎಸ್‌ಎಸ್‌ಐಡಿಸಿ’ಯ ಸಹಾಯಕ ಮಹಾಪ್ರಬಂಧಕ ಮಲ್ಲಿಕಾರ್ಜುನ ಜಾಕಾ ಅವರಿಗೆ, ಚಿತ್ತಾಪುರ ಪೇಟೆಯ ಸರ್ವೆ ನಂ. 112/2 ಮತ್ತು 113ರ ಹಳೆಯ ಕೈಗಾರಿಕಾ ವಸಾಹತು ಅಭಿವೃದ್ಧಿಪಡಿಸುವಂತೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರಮುಖ ಬೇಡಿಕೆಗಳು ಒಳ ರಸ್ತೆಗಳ ಅಭಿವೃದ್ಧಿ, ಭೂಗತ ಒಳಚರಂಡಿ, ಮಳೆ ನೀರು ಹರಿಸುವ ಚರಂಡಿ ವ್ಯವಸ್ಥೆ, ನೀರಿನ ಸರಬರಾಜು ಪೈಪ್‌ ಲೈನ್,ಕಾಂಪೌಂಡ್ ಗೋಡೆ ನಿರ್ಮಾಣ ಮತ್ತು ಬೀದಿ ದೀಪ ಅಳವಡಿಕೆ, ಬಾಕಿ ಇರುವ ಮಾರಾಟ ಪತ್ರಗಳ […]

Continue Reading