ನಾಡಿನ ಇತಿಹಾಸದ ಪುಟ ತರೆಯುವ ತಡಕಲ್ ಜೈನ ಬಸದಿ: ಮುಡುಬಿ ಗುಂಡೇರಾವ

ಸುದ್ದಿ ಸಂಗ್ರಹ ಕಲಬುರಗಿತಡಕಲ್ ಗ್ರಾಮದ ಜೈನ ಬಸದಿಯು ನಾಡಿನ ಇತಿಹಾಸದ ಪುಟ ತೆರೆಯುತ್ತವೆ. ನಮ್ಮ ನೆಲವೆ ನಮಗೆ ಪ್ರೇರಣೆ. ಜೈನರ ಕಾವ್ಯ, ಶರಣರ ವಚನ, ದಾಸರ ವಾಣಿ ಮೊಳಗಿದ ಪುಣ್ಯ ಭೂಮಿ ಆಳಂದ ಸಾಸಿರ ನಾಡಿನ ಕೊಡುಗೆ ಅಪಾರ ಎಂದು ಸಂಶೋಧಕ ಮುಡುಬಿ ಗುಂಡೇರಾವ ಅಭಿಮತ ವ್ಯಕ್ತಪಡಿಸಿದರು. ಜಿಲ್ಲೆಯ ತಡಕಲ್ ಗ್ರಾಮದ ಜೈನ ಶಾಂತಿನಾಥ ಬಸದಿಯಲ್ಲಿ ಸಮಾಜ ಸೇವಾ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಪರಿಚಯಾತ್ಮಕ -49 ಸರಣಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ […]

Continue Reading

ಕಲಬುರಗಿ: 10 ಸಾವಿರ ರೂ ಲಂಚ ಪಡೆಯುತ್ತಿದ್ದ ಎಫ್‌ಡಿಎ ಲೋಕಾಯುಕ್ತ ಬಲೆಗೆ

ಸುದ್ದಿ ಸಂಗ್ರಹ ಕಲಬುರಗಿಜಿಲ್ಲೆಯ ಕಮಲಾಪುರ ತಹಸೀಲ್ದಾರ್ ಕಚೇರಿಯಲ್ಲಿ 10 ಸಾವಿರ ರೂ ಲಂಚ ಪಡೆಯುತ್ತಿದ್ದ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಶಶಿಕುಮಾರ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಜಮೀನು ದಾಖಲೆ ಪತ್ರ ನೀಡಲು ಶಶಿಕುಮಾರ್, ಕಿಶನ್ ರಾಠೋಡ ಅವರಿಗೆ 20 ಸಾವಿರಕ್ಕೂ ಹೆಚ್ಚು ಹಣದ ಬೇಡಿಕೆ ಇಟ್ಟಿದ್ದರು. ಈ ಕುರಿತು ಲೋಕಾಯುಕ್ತ ಪೊಲೀಸರಿಗೆ ಕಿಶನ್ ರಾಠೋಡ ದೂರು ನೀಡಿದ್ದರು. ಲಂಚ ಪಡೆಯುವಾಗ ದಾಳಿ ಮಾಡಿದ ಲೋಕಾಯುಕ್ತರು, ಹಣ ಪಡೆಯುತ್ತಿದ್ದ ಆರೋಪಿ ಶಶಿಕಾಂತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. […]

Continue Reading

ಸಮಾಜ ಸುಧಾರಕ, ಶಿಕ್ಷಣ ತಜ್ಞ ಮಹಾದೇವ ಗೋವಿಂದ ರಾನಡೆ ಅವರ 185ನೇ ಜನ್ಮ ದಿನಾಚರಣೆ

ಸುದ್ದಿ ಸಂಗ್ರಹ ಕಲಬುರಗಿಮಹಾದೇವ ಗೋವಿಂದ ರಾನಡೆಯವರು ಲೇಖಕ, ವಿದ್ವಾಂಸ, ಸಮಾಜ ಸುಧಾರಕ ಮತ್ತು ಶಿಕ್ಷಣ ತಜ್ಞ ಮಹಾರಾಷ್ಟ್ರದ ಸಾಕ್ರಟೀಸ್’ ಎಂಬ ಬಿರುದಾಂಕಿತ ಹೊಂದಿದ ಅವರು ಬಾಂಬೆ ಹೈಕೋರ್ಟ್ನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸ್ಥಾಪಕ ಸದಸ್ಯರಾಗಿದ್ದರು ಮತ್ತು ಪ್ರಕಾಶ್ ಪತ್ರಿಕೆ ಸಂಪಾದಿಸಿದರು. ‘ಪೂನಾ ಸರ್ವಜನಿಕ ಸಭಾ’ ಮತ್ತು ‘ಪ್ರಾರ್ಥನಾ ಸಮಾಜ’ದಂತಹ ಸಂಸ್ಥೆಗಳನ್ನು ಸ್ಥಾಪಿಸಲು ಸಹಾಯ ಮಾಡಿದರು. ಬಾಲ್ಯವಿವಾಹ ವಿರೋಧ, ವಿಧವೆಯರ ಪುನರ್ವಿವಾಹದಂತಹ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ್ ಹೇಳಿದರು. ನಗರದ […]

Continue Reading

ಪುರಂದರ ದಾಸರ ಕೀರ್ತನೆಗಳ ಪಾತ್ರ ಮಹತ್ವದ್ದು: ಎಚ್.ಬಿ ಪಾಟೀಲ್

ಸುದ್ದಿ ಸಂಗ್ರಹ ಕಲಬುರಗಿ ಕರ್ನಾಟಕದ ದಾಸ ಪರಂಪರೆಯ ಪ್ರಮುಖ ಸಂತರು, ಕವಿಗಳು, ‘ಕರ್ನಾಟಕ ಸಂಗೀತದ ಪಿತಾಮಹ’ ಎಂದು ಖ್ಯಾತರಾದ ಪುರಂದರ ದಾಸರು ವೇದ, ಉಪನಿಷತ್ತುಗಳ ಸಾರಾಂಶ ಕನ್ನಡದಲ್ಲಿ ಕೀರ್ತನೆಗಳನ್ನು ಸರಳ, ಸುಲಭವಾಗಿ ಜನರಿಗೆ ತಲುಪಿಸಿದರು. ಅವರ ಕೀರ್ತನೆಗಳು ಭಕ್ತಿ, ಸಾಮಾಜಿಕ ಮತ್ತು ತತ್ವಶಾಸ್ತ್ರಿಯ ಅಂಶಗಳು ಹೊಂದಿದ್ದು, ಸಾಂಸ್ಕೃತಿಕ, ಆಧ್ಯಾತ್ಮಿಕ ಪರಂಪರೆಯಲ್ಲಿ ಪುರಂದರ ದಾಸರ ಕೀರ್ತನೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ್ ಅಭಿಮತಪಟ್ಟರು. ನಗರದ ಶಹಾಬಜಾರ ಮಹಾದೇವ ನಗರದಲ್ಲಿನ ಶಿವಾ ವಿದ್ಯಾ ಮಂದಿರ ಮತ್ತು ಸ್ವಾತಿ […]

Continue Reading

ಮಾದರಿ ಆಡಳಿತಗಾರ ಶ್ರೀಕೃಷ್ಣ ದೇವರಾಯ: ಎಚ್.ಬಿ ಪಾಟೀಲ್

ಸುದ್ದಿ ಸಂಗ್ರಹ ಕಲಬುರಗಿ ಎಲ್ಲಾ ಪ್ರಜೆಗಳಿಗೆ ಸಮಾನವಾಗಿ ಕಂಡು ಅಭಿವೃದ್ಧಿ ಬಯಸುತ್ತಿದ್ದ ಶ್ರೀಕೃಷ್ಣದೇವರಾಯ ಮಾದರಿ, ಶಕ್ತಿಶಾಲಿ ಮತ್ತು ಪ್ರಸಿದ್ಧ ಅರಸ. ವಿಜಯನಗರ ಸಾಮ್ರಾಜ್ಯ ಜಗತ್ತಿನಲ್ಲಿ ಪ್ರಸಿದ್ಧವಾಗಲು ಅವರ ಜನಪರ ಕಾರ್ಯಗಳೆ ಆಧಾರವಾಗಿವೆ. ರಸ್ತೆ ಬದಿಯಲ್ಲಿ ವಜ್ರ, ವೈಡುರ್ಯ, ಚಿನ್ನ, ಬೆಲೆ ಬಾಳುವ ವಸ್ತುಗಳು ಮಾರಾಟ ಮಾಡುತ್ತಿದ್ದ ಶ್ರೀಮಂತ ಸಾಮ್ರಾಜ್ಯದ ರೂವಾರಿಯಾಗಿದ್ದಾರೆ  ಎಂದು ಉಪನ್ಯಾಸಕ ಎಚ್.ಬಿ ಪಾಟೀಲ್ ಹೇಳಿದರು. ನಗರದ ಶಹಾಬಜಾರ ಮಹಾದೇವ ನಗರದ ಸ್ವಾತಿ ಪ್ರೌಢ ಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ “ಶ್ರೀಕೃಷ್ಣ […]

Continue Reading

ಉಡುಪಿ ಶ್ರೀಕೃಷ್ಣ ಮಠಕ್ಕೆ ಮಲೆಯಾಳಂ ನಟ, ಕೇಂದ್ರ ಸಚಿವ ಸುರೇಶ್‌ ಗೋಪಿ ಭೇಟಿ

ಸುದ್ದಿ ಸಂಗ್ರಹ ಉಡುಪಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಮಲೆಯಾಳಂ ನಟ ಮತ್ತು ಕೇಂದ್ರ ಸಚಿವ ಸುರೇಶ್‌ ಗೋಪಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಟ ಮತ್ತು ಸಚಿವರನ್ನು ಕೃಷ್ಣಮಠಕ್ಕೆ ದಿವಾನರು ಆದರದಿಂದ ಬರಮಾಡಿಕೊಂಡರು. ಕುಟುಂಬ ಮತ್ತು ಸ್ನೇಹಿತರ ಜೊತೆಗೆ ಮಠಕ್ಕೆ ಭೇಟಿ ನೀಡಿದ್ದ ಸುರೇಶ್‌ ಗೋಪಿ ಅವರು ಶ್ರೀಕೃಷ್ಣನ ದರ್ಶನ ಪಡೆದರು. ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯನ್ನು ನಟ ಭೇಟಿಯಾದರು. ತೀರ್ಥರ ಪರ್ಯಾಯ ಸಮಾಪ್ತಿ ವೇಳೆ ಭೇಟಿ ಮಾಡಲಾಯಿತು. ಕೇಂದ್ರ ಸಚಿವರಿಗೆ ಮಠದ ವತಿಯಿಂದ […]

Continue Reading

ನಾಲವಾರ: ಜ.19ರಂದು ಕೋರಿಸಿದ್ದೇಶ್ವರ ರಥೋತ್ಸವ, ಸಿದ್ಧತೋಟೇಂದ್ರ ಪ್ರಶಸ್ತಿ ಪ್ರದಾನ‌

ಸುದ್ದಿ ಸಂಗ್ರಹ ಚಿತ್ತಾಪುರಕಲ್ಯಾಣ ಕರ್ನಾಟಕದ ಅತಿ ದೊಡ್ಡ ಜಾತ್ರೆಗಳಲ್ಲೊಂದಾದ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರದ ಕೋರಿಸಿದ್ಧೇಶ್ವರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವದ ಪ್ರಯುಕ್ತ ನಾಲವಾರ ಕ್ಷೇತ್ರ ನವವಧುವಿನಂತೆ ಸಿಂಗಾರಗೊಂಡಿದೆ. ಜಾತ್ರಾ ಮಹೋತ್ಸವದ ನಿಮಿತ್ಯ ವಾರದಿಂದಲೆ ಶ್ರೀಮಠದಲ್ಲಿ ಧಾರ್ಮಿಕ ಪುರಾಣ ಪ್ರವಚನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ದಿನನಿತ್ಯ ನಡೆಯುತ್ತಿವೆ.‌‌ ಪೀಠಾಧಿಪತಿ ಪೂಜ್ಯ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಜಾತ್ರಾ ಮಹೋತ್ಸವವು ಜ.18, 19 ಮತ್ತು 20 ರಂದು ಅದ್ಧೂರಿಯಾಗಿ ನಡೆಯಲಿದೆ. ಮಧ್ಯರಾತ್ರಿ ‘ತನಾರತಿ’ಜ.18 ರಂದು ರಾತ್ರಿ 8 ಗಂಟೆಗೆ […]

Continue Reading

ರಾಸಾಯನಿಕ ಬಳಸಿ ನಕಲಿ ಹಾಲು ತಯಾರಿಕೆ: ಐವರು ಅರೆಸ್ಟ್‌

ಸುದ್ದಿ ಸಂಗ್ರಹ ಕೋಲಾರ ರಾಸಾಯನಿಕ ವಸ್ತು ಬಳಸಿ ನಕಲಿ ಹಾಲು ತಯಾರು ಮಾಡುತ್ತಿದ್ದ ಅಡ್ಡೆ ಮೇಲೆ ಕೆಜಿಎಫ್ ಪೊಲೀಸರು ದಾಳಿ ಮಾಡಿ ಐವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಆಂಧ್ರ್ರ ಮೂಲದ ದಿಲೀಪ್, ಬಾಲರಾಜ್, ವೆಂಕಟೇಶಪ್ಪ, ಬಾಲಾಜಿ ಮತ್ತು ಮನೋಹರ್ ಎಂದು ಗುರುತಿಸಲಾಗಿದೆ. ಆರೋಪಿಗಳು ಕೆಜಿಎಫ್ ತಾಲೂಕಿನ ಬಳ್ಳಗೆರೆ ಗ್ರಾಮದ ಬಳಿ ಅಕ್ರಮ ಕಲಬೆರಕೆ ಹಾಲು ತಯಾರಿಸುತ್ತಿದ್ದರು. ಬಂಧಿತರಿಂದ ಸುಮಾರು 22 ಲಕ್ಷ ರೂ. ಮೌಲ್ಯದ ಉಪಕರಣ ಮತ್ತು ಕಲಬೆರೆಗೆ ಬಳಸುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಪಾಮಾಯಲ್, ಮಿಲ್ಕ್ ಪೌಡರ್, […]

Continue Reading

ಕಾಳಗಿ: ಕಾಲೇಜಿನಲ್ಲಿ ಕಿಡಿಗೇಡಿಗಳ ದಾಂಧಲೆ

ಸುದ್ದಿ ಸಂಗ್ರಹ ಕಾಳಗಿ ಇಲ್ಲಿನ ದೇವರಾಜ ಮಾಲಿಪಾಟೀಲ ಉಡಗಿ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ರಾತ್ರಿ ಕಿಡಿಗೇಡಿಗಳು ದಾಂಧಲೆ ನಡೆಸಿ ಉಪಕರಣಗಳನ್ನು ಒಡೆದು ಹಾಕಿರುವ ಘಟನೆ ಬುಧವಾರ ಕಂಡುಬಂದಿದೆ. ಎಂದಿನಂತೆ ಸಿಬ್ಬಂದಿ ಬೆಳಿಗ್ಗೆ ಕಾಲೇಜಿಗೆ ಬಂದಾಗ ‘ಯಾರೋ ಕಿಡಿಗೇಡಿಗಳು ಕಾಲೇಜಿನ ಕಚೇರಿ ಬಾಗಿಲು ಮುರಿದು, ಕಂಪ್ಯೂಟರ್, ಟೇಬಲ್ ಮೇಲಿನ ಗಾಜು ಒಡೆದು, ಪ್ರಿಂಟರ್ ಮತ್ತು ವಿದ್ಯುತ್ ಸ್ವಿಚ್ ಗಳನ್ನು ಹಾಳುಮಾಡಿದ್ದು ಕಂಡುಬಂದಿದೆ. ಶೌಚಾಲಯದ ಕೊಠಡಿ ಸಹ ಹಾಳು ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪಿಎಸ್‌ಐ ತಿಮ್ಮಯ್ಯ ಬಿ.ಕೆ,ಕಾನ್‌ಸ್ಟೇಬಲ್‌ ಮೌನೇಶ, […]

Continue Reading

ವಾಡಿ: ನೂತನ ವರ್ಷದ ದಿನದರ್ಶಿಕೆ ಬಿಡುಗಡೆ

ಸುದ್ದಿ ಸಂಗ್ರಹ ವಾಡಿ ಸಮೀಪದ ಸುಕ್ಷೇತ್ರ ಎಲ್ಲಾಂಬಿಕಾ ದೇವಿ ದೇವಸ್ಥಾನದಲ್ಲಿ ಹಲಕರ್ಟಿಯ ಸಿದ್ದೇಶ್ವರ ಹಿರೇಮಠದ ರಾಜಶೇಖರ ಶಿವಾಚಾರ್ಯರು ದೇವಿಗೆ ವಿಶೇಷ ಪೂಜೆ ಸಲ್ಲಿಸಿ ನೂತನ ವರ್ಷದ ದಿನದರ್ಶಿಕೆ ಬಿಡುಗಡೆ ಗೊಳಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಮಲ್ಲಣಗೌಡ ಪಾಟೀಲ, ದಂಡಯ್ಯ ಸ್ವಾಮಿ, ಬಸವರಾಜ ಸಜ್ಜನ, ಶರಣಗೌಡ ಚಾಮನೂರ, ವೀರಣ್ಣ ಯಾರಿ, ದೇವೇಂದ್ರ ಬಡಿಗೇರ ಮತ್ತು ಮೌನೇಶ ಪಂಚಾಳ ಇದ್ದರು.

Continue Reading