ಬಗೆದಷ್ಟು ಬಯಲಾಗ್ತಿದೆ ಜಿಮ್ ಟ್ರೈನರ್ ಬಂಡವಾಳ: 8 ರಿಂದ 10 ಬಾರಿ ಗರ್ಭಪಾತದ ಮಾತ್ರೆ ನೀಡಿದ್ದ ಸಮೀರ್

ಸುದ್ದಿ ಸಂಗ್ರಹ ಹುಬ್ಬಳ್ಳಿಲವ್ ಜಿಹಾದ್ ಪ್ರಕರಣದಲ್ಲಿ ಜಿಮ್ ಟ್ರೈನರ್ ಬಂಡವಾಳ ಬಗೆದಷ್ಟು ಬಯಲಾಗುತ್ತಿದೆ. ಇದೀಗ ಸಂತ್ರಸ್ತೆಗೆ ಸಮೀರ್ 8 ರಿಂದ 10 ಬಾರಿ ಗರ್ಭಪಾತದ ಮಾತ್ರೆ ನೀಡಿದ್ದ ಎಂದು ತಿಳಿದುಬಂದಿದೆ. ಪೊಲೀಸರು ಸಮೀರ್ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಮತ್ತಷ್ಟು ಬಯಲಾಗಿದೆ. ಮೊಬೈಲ್‌ನಲ್ಲಿ ಕೆಲ ರೋಚಕ ವಿಡಿಯೋಗಳು, ಯುವತಿಯರೊಂದಿಗಿನ ವಾಟ್ಸಪ್ ಚಾಟ್‌ಗಳು ಪತ್ತೆಯಾಗಿದೆ. ಮೊಬೈಲ್‌ನಲ್ಲಿ ಸಂತಸ್ತೆ ಗರ್ಭಪಾತದ ಮಾತ್ರೆ ತೆಗೆದುಕೊಳ್ಳುತ್ತಿರುವ ವಿಡಿಯೋ ಕೂಡ ಸಿಕ್ಕಿವೆ. ಸಮೀರ್ ಪ್ರತಿ ಸಾರಿ ಲೈಂಗಿಕ ದೌರ್ಜನ್ಯ ಎಸಗಿದ ಬಳಿಕ ಗರ್ಭಪಾತ […]

Continue Reading

ಬಿಸಿಲು: ಕೋರ್ಟ್ ಸಮಯ ಬದಲು

ಸುದ್ದಿ ಸಂಗ್ರಹ ಕಲಬುರಗಿಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲು ದಿನೆ ದಿನೆ ಹೆಚ್ಚುತ್ತಿದ್ದು, ಕಲಬುರಗಿ ಹೈಕೋರ್ಟ್‌ ಪೀಠ ಸೇರಿದಂತೆ ಈ ಭಾಗದ ಎಲ್ಲ ನ್ಯಾಯಾಲಯಗಳ ಕಚೇರಿ ಅವಧಿ ಮತ್ತು ಕಲಾಪದ ಅವಧಿಯ ಸಮಯ ಬದಲಿಸಿ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಬೇಸಿಗೆ ಹಿನ್ನೆಲೆಯಲ್ಲಿ ಏಪ್ರಿಲ್ 1ರಿಂದ ಅನ್ವಯಿಸುವಂತೆ ಎರಡು ತಿಂಗಳ ಅವಧಿಗೆ ಸರ್ಕಾರಿ ಕಚೇರಿಗಳ ಸಮಯ ಬದಲಾಯಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು. ಇದರ ಬೆನ್ನಲ್ಲೆ ಹೈಕೋರ್ಟ್‌ನ ಈ ಅದೇಶ ಹೊರಬಿದ್ದಿದೆ. ಕಲಬುರಗಿ ಹೈಕೋರ್ಟ್‌ ಪೀಠ ಹಾಗೂ ಜಿಲ್ಲೆಗಳ ಎಲ್ಲ ನ್ಯಾಯಾಲಯಗಳ […]

Continue Reading

ಶಹಾಬಾದ್: ಶ್ರದ್ಧೆ ಭಕ್ತಿಯಿಂದ ಹನುಮ ಜಯಂತಿ ಆಚರಣೆ

ಸುದ್ದಿ ಸಂಗ್ರಹ ಶಹಾಬಾದ್ನಗರದ ವಿವಿಧ ಆಂಜನೇಯ ದೇವಸ್ಥಾನಗಳಲ್ಲಿ ಶ್ರದ್ಧಾ ಭಕ್ತಿಯಿಂದ ಹನುಮ ಜಯಂತಿ ಆಚರಿಸಲಾಯಿತು. ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೆ ಹನುಮಾನ್ ದೇವರ ಮೂರ್ತಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ವಿವಿಧ ಪೂಜೆ ಭಕ್ತರಿಂದ ನಡೆಯಿತು. ಆಂಜನೇಯನ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ಕುಟುಂಬ ಸಮೇತರಾಗಿ ದೇವಾಲಯಗಳಿಗೆ ಬಂದು ಸ್ವಾಮಿಯ ದರ್ಶನ ಪಡೆದರು. ಹಲವು ದೇವಸ್ಥಾನಗಳಲ್ಲಿ ಭಕ್ತರಿಗೆ ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಸ್ಥಾನದ ಅರ್ಚಕರಾದ ರವೀಂದ್ರ ಜೋಶಿ, ಯುವಕರಾದ ವೀರಭದ್ರಯ್ಯ ಸ್ವಾಮಿ, ವೆಂಕಟೇಶ ಕೆ, ಮಹೇಶ, ವಿಶ್ವರಾಧ್ಯ ಗೌಡ, […]

Continue Reading

ಟೆಂಗಳಿ: ಏ.6ರಿಂದ ಶ್ರೀ ಭೀಮೇಶ್ವರ ಜಾತ್ರಾ ಮಹೋತ್ಸವ

ಸುದ್ದಿ ಸಂಗ್ರಹ ಟೆಂಗಳಿ ಏಪ್ರಿಲ್ 6ರಿಂದ 8ರವರೆಗೆ ಕಾಳಗಿ ತಾಲೂಕಿನ ಟೆಂಗಳಿ ಗ್ರಾಮದ ಆರಾಧ್ಯ ದೈವ ಶ್ರೀ ಭೀಮೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುವ ಧಾರ್ಮಿಕ ತ್ರಿವೇಣಿ ಸಂಗಮ ಅಂದರೆ ರಾಚಣ ವೀರಭದ್ರೇಶ್ವರ ಅಗ್ಗಿ, ಶರಣಬಸವೇಶ್ವರ ರಥೋತ್ಸವ, ಭೀಮೇಶ್ವರ 116ನೇ ಜಾತ್ರೆಯ ಧಾರ್ಮಿಕ ತ್ರಿವೇಣಿ ಸಂಗಮದ ಸಂಭ್ರಮ ನೋಡಿ ಶ್ರೀ ಭೀಮೇಶ್ವರ ದೇವರ ದರ್ಶನ ಪಡೆದು ಪಾವನರಾಗುವಂತೆ ಶ್ರೀ ಭೀಮೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ವೀರೇಂದ್ರ ವಾಲಿ, ಪ್ರಧಾನ ಕಾರ್ಯದರ್ಶಿ ವೀರಭದ್ರಯ್ಯ ಸಾಲಿಮಠ ಮತ್ತು ಆಡಳಿತ ಮಂಡಳಿಯ ಸದಸ್ಯ […]

Continue Reading

SSLC ಪರೀಕ್ಷೆ ಭಾರಿ ಬದಲಾವಣೆ: ತೃತೀಯ ಭಾಷೆ ಗ್ರೇಡ್‌ಗೆ ಸೀಮಿತ, ಈ ವರ್ಷದಿಂದಲೇ ಜಾರಿ

ಸುದ್ದಿ ಸಂಗ್ರಹ ಬೆಂಗಳೂರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಮಹತ್ವದ ಬದಲಾವಣೆ ತಂದಿದೆ. ತೃತೀಯ ಭಾಷೆ ಗ್ರೇಡ್‌ಗೆ ಸೀಮಿತಗೊಳಿಸಿದ್ದು, ಈ ವರ್ಷದಿಂದಲೆ ಜಾರಿಯಾಗಲಿದೆ. ಈ ಮೂಲಕ ಒಟ್ಟು 625 ಅಂಕಗಳಿಗೆ ಬದಲಾಗಿ 525 ಅಂಕಕ್ಕೆ ಫಲಿತಾಂಶ ನೀಡಲಾಗುತ್ತದೆ. ಈ ಬಗ್ಗೆ ಸ್ವತಃ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ಹಂಚಿಕೊಂಡರು. ಒಟ್ಟು ಅಂಕಗಳಲ್ಲಿ ಭಾರಿ ಕಡಿತವಾಗಲಿದ್ದು, ತೃತೀಯ ಭಾಷೆಯ ಅಂಕಗಳು ಫಲಿತಾಂಶಕ್ಕೆ ಪರಿಗಣಿಸದಿರಲು ತೀರ್ಮಾನಿಸಲಾಗಿದೆ. ಇದುವರೆಗೆ 625 ಅಂಕಗಳಿಗೆ ನಡೆಯುತ್ತಿದ್ದ ಪರೀಕ್ಷೆಯನ್ನು ಈಗ 525 ಅಂಕಗಳಿಗೆ […]

Continue Reading

ಹನುಮ ಜಯಂತಿ: ಅಂಜನಾದ್ರಿಗೆ ಆಗಮಿಸಿ ಮಾಲೆ ವಿಸರ್ಜಿಸಿದ ಭಕ್ತರು

ಸುದ್ದಿ ಸಂಗ್ರಹ ಕೊಪ್ಪಳ ಹನುಮ ಜಯಂತಿ ಹಿನ್ನೆಲೆ ಇಂದು ಅಂಜನಾದ್ರಿಗೆ ಹನುಮ ಮಾಲಾಧಾರಿಗಳು ಆಗಮಿಸಿ ಮಾಲೆಯನ್ನು ವಿಸರ್ಜನೆ ಮಾಡಿದರು. ರಾಮಾಯಣ ಕಾಲದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಕೊಪ್ಪಳದ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಹನುಮ ಜಯಂತಿ ಅಂಗವಾಗಿ ಹನುಮಮಾಲೆಯನ್ನು ಧಾರಣೆ ಮಾಡಿರುವ ನೂರಾರು ಮಾಲಾಧಾರಿಗಳು ಆಗಮಿಸಿ ಮಾಲೆಯನ್ನು ವಿಸರ್ಜನೆ ಮಾಡಿದರು. ಹನುಮ ಜಯಂತಿಯ ಅಂಗವಾಗಿ 11 ದಿನಗಳ ಮುಂಚಿತವಾಗಿಯೇ ಹನುಮಮಾಲೆ ಧಾರಣೆ ಮಾಡಿರುತ್ತಾರೆ. ಮಾಲಾಧಾರಿಗಳು ಕಠಿಣ ವ್ರತ ಕೈಗೊಂಡು ಹನುಮನ ಆರಾಧನೆ ಮಾಡುತ್ತಾರೆ. ಹನುಮ ಜಯಂತಿಯಂದು ಮಾಲಾಧಾರಿಗಳು […]

Continue Reading

ಬೇಸಿಗೆಯಲ್ಲಿ ಆರೋಗ್ಯದ ಮುಂಜಾಗ್ರತೆ ವಹಿಸಿ: ಡಾ.ಅನುಪಮಾ ಕೇಶ್ವಾರ

ಸುದ್ದಿ ಸಂಗ್ರಹ ಕಲಬುರಗಿ ಈಗಾಗಲೆ ಬಿಸಿಲಿನ ತಾಪ ಹೆಚ್ಚಾಗಿದೆ, ಬೇಸಿಗೆ ದಿನಗಳಲ್ಲಿ ವಾತಾವರಣ ಸಾಕಷ್ಟು ಬದಲಾವಣೆಯಾಗಿ, ಉಷ್ಣಾಂಶದಲ್ಲಿ ಏರಿಕೆಯಾಗುವುದರಿಂದ ಮಾನವನ ದೇಹದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಆದ್ದರಿಂದ ಆರೋಗ್ಯದಲ್ಲಿ ಏರು-ಪೇರುಗಳಾಗುವದರಿಂದ ಪ್ರತಿಯೊಬ್ಬರು ಮುನ್ನೆಚ್ಚರಿಕೆ ವಹಿಸಿಕೊಂಡು, ದೇಹದ ರಕ್ಷಣೆ ಮಾಡಿಕೊಳ್ಳಬೇಕೆಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಸಲಹೆ ನೀಡಿದರು. ನಗರದ ಶೇಖರೋಜಾದ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಏರ್ಪಡಿಸಿದ್ದ ‘ಬೇಸಿಗೆ ಕಾಲದ ಆರೋಗ್ಯದ ಮುಂಜಾಗ್ರತೆ ಕಾರ್ಯಕ್ರಮ’ದಲ್ಲಿ ಮಾತನಾಡಿದ ಅವರು, […]

Continue Reading

ಒಣಹಾಕಿದ್ದ ಬಟ್ಟೆ ತರಲು ಹೋದಾಗ ಬಕೆಟ್‌ ಬಿದ್ದು ಮಗು ಸಾವು: ಶಾಕ್‌ಗೆ ಒಳಗಾಗಿ ತಾಯಿ ಆತ್ಮಹತ್ಯೆ

ಸುದ್ದಿ ಸಂಗ್ರಹ ಬೆಂಗಳೂರು ಒಣಹಾಕಿದ್ದ ಬಟ್ಟೆ ತರಲು ಹೋಗಿದ್ದ ವೇಳೆ ನೀರಿನ ಬಕೆಟ್‌ನಲ್ಲಿ ಮುಳುಗಿ ಮಗು ಸಾವನ್ನಪ್ಪಿದ್ದನ್ನು ನೋಡಿ ಶಾಕ್‌ಗೆ ಒಳಗಾಗಿ ತಾಯಿಯೂ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಚಂದ್ರಾಲೇಔಟ್ ಠಾಣೆಯ ಭೈರವೇಶ್ವರ ನಗರದಲ್ಲಿ ನಡೆದಿದೆ. ಅಗಸ್ತ್ಯ ಮೃತ ಮಗು. ಪ್ರತಿಭಾ (29) ಆತ್ಮಹತ್ಯೆ ಮಾಡಿಕೊಂಡ ತಾಯಿ. ಮನೆಯಲ್ಲಿ ತಾಯಿ, ಮಗು ಇಬ್ಬರೆ ಇದ್ದಾಗ ಘಟನೆ ನಡೆದಿದೆ. ಪ್ರತಿಭಾ ಮತ್ತು ಮಹಂತೇಶ್ ವೃತ್ತಿಯಲ್ಲಿ ಸಾಫ್ಟ್‌ವೇರ್ ಉದ್ಯೋಗಿಗಳಾಗಿದ್ದರು. ಪ್ರತಿಭಾ ವರ್ಕ್ ಫ್ರಂ ಹೋಂ ಮಾಡುತ್ತಿದ್ದರು. ಗಂಡ ಮಹಂತೇಶ್ ಕೆಲಸದ […]

Continue Reading

ಈ ಸುದ್ದಿ ಓದಿ ಮನೆಯಲ್ಲೆ ಕುಳಿತು 15 ನಿಮಿಷದ ಒಳಗಡೆ ನಿಮ್ಮ ವಿವರವನ್ನು ಭರ್ತಿ ಮಾಡಿ

ಸುದ್ದಿ ಸಂಗ್ರಹ ಬೆಂಗಳೂರು ಇಂದಿನಿಂದ ಭಾರತದಲ್ಲಿ ರಾಷ್ಟ್ರೀಯ ಜನಗಣತಿ (Census 2027) ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದೆ. ಇದು ದೇಶದ ಮೊದಲ ಡಿಜಿಟಲ್ ಜನಗಣತಿಯಾಗಿದ್ದು ಜನರೇ ತಮ್ಮ ವಿವರಗಳನ್ನು ತಾವೇ ಸುಲಭವಾಗಿ ದಾಖಲಿಸಬಹುದು. ಕರ್ನಾಟಕ ಸೇರಿದಂತೆ ಗೋವಾ, ಮಿಜೋರಾಂ, ಒಡಿಶಾ, ಸಿಕ್ಕಿಂ, ದೆಹಲಿ, ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪದ ಜನರು ಏ.15ರವರೆಗೆ ಡಿಜಿಟಲ್‌ ಮೂಲಕ ತಮ್ಮ ಮನೆಯ ವಿವರಗಳನ್ನು ಸುಲಭವಾಗಿ ಎಂಟ್ರಿ ಮಾಡಬಹುದು. ಡಿಜಿಟಲ್‌ನಲ್ಲಿ ಹೇಗೆ ? ಹಂತ -1 ಮೊದಲು www.ce.census.gov.in ವೆಬ್‌ಸೈಟ್‌ಗೆ ಹೋಗಬೇಕು. ಇಲ್ಲಿ ಕುಟುಂಬದ […]

Continue Reading

ವಾಡಿಯಲ್ಲಿ ಶಿವೈಕ್ಯ ಶಿವಕುಮಾರ ಶ್ರೀಗಳ ಜಯಂತಿ ಆಚರಣೆ

ಸುದ್ದಿ ಸಂಗ್ರಹ ವಾಡಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮಿಗಳ 119ನೇ ಜಯಂತಿ ಆಚರಿಸಲಾಯಿತು. ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ತುಮಕೂರಿನ ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮಿಜಿಯವರು ನಡೆದಾಡುವ ದೇವರು ಎಂದೆ ಪ್ರಸಿದ್ಧರಾದ ಶ್ರೇಷ್ಠ ಆಧ್ಯಾತ್ಮಿಕ ಶರಣರಾಗಿದ್ದರು ಎಂದರು. ಶಿಕ್ಷಣ ತಜ್ಞ ಮತ್ತು ದಾಸೋಹಿಗಳಾದ ಸ್ವಾಮಿಗಳು 111 ವರ್ಷಗಳ ಕಾಲ ಬದುಕಿ, ತ್ರಿವಿಧ ದಾಸೋಹಗಳಾದ ಅನ್ನ, ಅಕ್ಷರ, ಜ್ಞಾನದ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದರು. ಸರಳ ಜೀವನ ಮತ್ತು […]

Continue Reading