ಚಿತ್ತಾಪುರ: ಲಂಬಾಣಿ ಸಮಾಜದ ಬಾಲಕಿಯ ಮೇಲೆ ಅತ್ಯಾಚಾರ, ಮಾರಣಾಂತಿಕ ಹಲ್ಲೆ ನಡೆಸಿದ ವಸೀಮ್ ಶೇಖ್ ಮೌಲಾ ಇತನನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಿ ನ್ಯಾಯ ಒದಗಿಸಬೇಕು ಎಂದು ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದ ತಾಲೂಕು ಯುವ ಅಧ್ಯಕ್ಷ ಜಗದೀಶ ಚವ್ಹಾಣ ಆಗ್ರಹಿಸಿದ್ದಾರೆ.
ಪಟ್ಟಣದ ತಹಸೀಲ್ ಕಚೇರಿಯಲ್ಲಿ ಸೋಮವಾರ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ಆರೋಪಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದರಿ ಅಪರಾದಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕು. ಸಂತ್ರಸ್ತೆಯ ಕುಟುಂಬದವರಿಗೆ 50 ಲಕ್ಷ ರೂ ಪರಿಹಾರ ನೀಡಬೇಕು, ಮುಂದಿನ ದಿನಗಳಲ್ಲಿ ನಮ್ಮ ಸಮಾಜದವರ ಮೇಲೆ ಈ ರೀತಿ ಘಟನೆ ಜರುಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳಿಗೆ ಬರೆದಿರುವ ಮನವಿ ಪತ್ರ ತಹಸೀಲ್ದಾರ್ ಅವರಿಗೆ ಸಲ್ಲಿಸಿದ್ದರು.
ಜಾತಿ ಜಾತಿಗಳ ನಡುವೆ ಹಾಗೂ ಎಲ್ಲ ಸಮುದಾಯಗಳ
ಮಧ್ಯೆ ಜಗಳ ಹಚ್ಚುವ ಕೆಲಸ ಮಣಿಕಂಠ ರಾಠೋಡ
ಮಾಡುತ್ತಿರುವುದು ಸರಿಯಲ್ಲ. ಸಮಾಜದ ಬಗ್ಗೆ
ಮಾತನಾಡುವ ಮೊದಲು ನೀವು ತಂದೆ ತಾಯಿಗೆ ಒಳ್ಳೆ
ಮಗನಾಗು, ನಂತರ ಸಮಾಜದ ಕೆಲಸ ಮಾಡು ಅವಾಗ ನೀವು ರಾಜಕೀಯವಾಗಿ ಬೆಳೆಯಲು ಸಾಧ್ಯ. ಏಕವಚನದಲ್ಲಿ ಮಾತನಾಡುವುದು, ಇಲ್ಲಸಲ್ಲದ ಆರೋಪ ಮಾಡುವುದು, ಜಾತಿ ಜಾತಿಗಳ ನಡುವೆ ಜಗಳ ಹಚ್ಚುವ ಕೆಲಸ, ಸಮಾಜದಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡಬೇಡಿ ಎಂದು ಕಿವಿಮಾತು ಹೇಳಿದರು.
ಲಂಬಾಣಿ ಸಮಾಜದ ಹಿರಿಯ ಮುಖಂಡ ಚಂದು ಜಾಧವ
ಮಾತನಾಡಿ, ಸದರಿ ಬಾಲಕಿಯ ಅತ್ಯಾಚಾರ ವಿಷಯ
ಇಟ್ಟುಕೊಂಡು ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಮುಸ್ಲಿಂ ಸಮುದಾಯವನ್ನು 15 ನಿಮಿಷ ಸಮಯ
ಕೊಟ್ಟರೆ ಇಡಿ ಕಲಬುರಗಿ ಪಟ್ಟಣದಲ್ಲಿರುವ ಮುಸ್ಲಿಂ
ಸಮುದಾಯವರನ್ನು ಸಂಪೂರ್ಣವಾಗಿ ಖಲಾಸ್
ಮಾಡುತ್ತೆವೆಂದು ಹೇಳಿಕೆ ನೀಡಿ ಸಮಾಜದಲ್ಲಿ ಶಾಂತಿ ಕದಡುವ ಹೇಳಿಕೆ ನೀಡಿರುತ್ತಾರೆ. ಜಾತಿ ಜಾತಿಗಳ ನಡುವೆ ಜಗಳ ಹಚ್ಚುವ ಕೆಲಸ ಮಾಡಿರುತ್ತಾರೆ ಇದನ್ನು ನಮ್ಮ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದರು.
ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ತಾಲೂಕು ಘಟಕದ ಅಧ್ಯಕ್ಷ ಭೀಮಸಿಂಗ್ ಚವ್ಹಾಣ, ಮುಖಂಡರಾದ ಕುಮಾರ ಚವ್ಹಾಣ ಯಾಗಾಪೂರ, ದೇವಿದಾಸ ಚವ್ಹಾಣ, ರವಿ ರಾಠೋಡ, ವಿಜಯಕುಮಾರ ಚವ್ಹಾಣ ಯಾಗಾಪೂರ, ರಾಕೇಶ ಪವಾರ, ಪ್ರವೀಣ ಪವಾರ, ವಿಠಲ್
ರಾಠೋಡ, ಗೋಪಿ ರಾಠೋಡ ಇದ್ದರು.