ನೂತನ ಸಚಿವರಿಗೆ ಖಾತೆ ಹಂಚಿಕೆ ಫೈನಲ್‌ ಆಗಿದೆ: ಸಿಎಂ ಡಿಕೆಶಿ

ಸುದ್ದಿ ಸಂಗ್ರಹ ಬೆಂಗಳೂರುನೂತನ ಸಚಿವರಿಗೆ ಖಾತೆ ಹಂಚಿಕೆ ಆಗಿದ್ದು, ಪಟ್ಟಿಯನ್ನು ಹೈಕಮಾಂಡ್‌ಗೆ ಕಳಿಸಿದ್ದೆವೆ. ಶೀಘ್ರವೇ ಪಟ್ಟಿ ಬಿಡುಗಡೆ ಆಗಲಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ತಿಳಿಸಿದರು. ಇಂದು ಸಂಜೆ ವಿಧಾನಸೌಧಕ್ಕೆ ತೆರಳಿದ್ದ ಸಿಎಂ ಹಲವು ಗಣ್ಯಾತಿಗಣ್ಯರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು. ವಿಧಾನಸೌಧದಲ್ಲಿರೊ ಭುವನೇಶ್ವರಿ ತಾಯಿ, ದಿ. ದೇವರಾಜ ಅರಸ್, ಕೆ.ಸಿ ರೆಡ್ಡಿಯವರ, ಎಸ್‌. ನಿಜಲಿಂಗಪ್ಪ, ಡಾ. ಬಾಬು ಜಗಜೀವನ್ ರಾಂ, ಕೆಂಗಲ್ ಹನುಮಂತಯ್ಯ, ಲಾಲ್ ಬಹುದ್ದೂರ್ ಶಾಸ್ತ್ರಿ ಮತ್ತು ಸುಭಾಶ್ಚಂದ್ರಭೋಸ್ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ, ವಂದಿಸಿದರು. […]

Continue Reading

ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ ಸುಳಿವು: ಸಿಎಂ ಡಿಕೆಶಿ ಫುಲ್‌ ಆಕ್ಟೀವ್‌

ಸುದ್ದಿ ಸಂಗ್ರಹ ಬೆಂಗಳೂರುಸಿಎಂ ಡಿಕೆ ಶಿವಕುಮಾರ್ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಪೊಲೀಸ್ ಇಲಾಖೆ ಸೇರಿ ಎಲ್ಲಾ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆ ಮಾಡಿ ಖಡಕ್ ಸಂದೇಶ ರವಾನೆ ಮಾಡಿದ್ದಾರೆ. ಅಧಿಕಾರಿಗಳಿಗೆ ಫ್ರೀ ಹ್ಯಾಂಡ್ ಕೊಡ್ತಿವಿ, ನನ್ನ ಕಚೇರಿ, ಶಾಸಕರು, ಮಂತ್ರಿಗಳು ಯಾರದೆ ಒತ್ತಡಕ್ಕೆ ಮಣಿಯದೆ ಕಾನೂನು ಅಡಿಯಲ್ಲಿ ಕೆಲಸ ಮಾಡಿ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿ. ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಬೇಕು. ನಮ್ಮ ಸರ್ಕಾರ ಜಾತಿ, ಧರ್ಮ, ಪ್ರೆಷರ್‌ಗೆ ಬಗ್ಗಲ್ಲ. ಪಾರದರ್ಶಕತೆ ನಮ್ಮ ಸರ್ಕಾರದ ಧ್ಯೇಯವಾಕ್ಯ. […]

Continue Reading

ಶಹಾಬಾದ್: ಕಾರಿನೊಳಗೆ ಉಸಿರುಗಟ್ಟಿ 3 ವರ್ಷದ ಮಗು ಸಾವು

ಸುದ್ದಿ ಸಂಗ್ರಹ ಶಹಾಬಾದ್ಕಾರಿನಲ್ಲಿ ಉಸಿರುಗಟ್ಟಿ ಮೂರು ವರ್ಷದ ಮಗು ಸಾವನಪ್ಪಿರುವ ಘಟನೆ ಶಹಾಬಾದ್ ತಾಲೂಕಿನ ತೊನಸನಹಳ್ಳಿ (ಎಸ್) ಗ್ರಾಮದಲ್ಲಿ ನಡೆದಿದೆ. ಕೊಟ್ಟುರೇಶ್ವರ ಎಂಬವರ ಮೂರು ವರ್ಷದ ಮಗು ಬಸವಪ್ರಭು ಮೃತ ದುರ್ದೈವಿ. ಮಗುವನ್ನು ಕರೆದುಕೊಂಡು ಶಾಲೆಗೆ ಕಾರಿನಲ್ಲಿ ಹೋಗಿದ್ದ ಪೋಷಕರು ಶಾಲೆ ಬಳಿ ಕಾರು ಪಾರ್ಕ್ ಮಾಡಿ ಲಾಕ್ ಮಾಡದೆ ಹೊಗಿದ್ದರು. ಈ ವೇಳೆ ಮಗು ಆಟವಾಡುತ್ತಾ ಕಾರಿನೊಳಗೆ ಹೋಗಿದೆ. ಆಗ ಕಾರಿನ ಎಲ್ಲಾ ಡೋರ್‌ಗಳು ಲಾಕ್ ಆಗಿವೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮಗು ಎಲ್ಲಿ ಹೋಯಿತು ಎಂದು […]

Continue Reading

ಅಧಿಕಾರ ಬೇಕಾದವರು ಡಿಕೆಶಿ ಹಿಂದೆ ಹೋಗಿ, ಸಂಘಟನೆ ಮಾಡೋರು ನನ್ನ ಜೊತೆ ಬನ್ನಿ: ಬಿ.ಕೆ ಹರಿಪ್ರಸಾದ್

ಸುದ್ದಿ ಸಂಗ್ರಹ ಬೆಂಗಳೂರುರಾಜ್ಯದಲ್ಲಿ ಅಧಿಕಾರ ಹಾಗೂ ಸಚಿವ ಸ್ಥಾನ ಬೇಕು ಎನ್ನುವವರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆ ಹೋಗಿ. ಪಕ್ಷ, ಹೋರಾಟ, ವರಿಷ್ಠರಾದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರ ಕೈಬಲಪಡಿಸಬೇಕು ಎನ್ನುವವರು ನನ್ನ ಜೊತೆ ಬನ್ನಿ. ಇದರಲ್ಲಿ ಯಾವುದೆ ಬಣವಿಲ್ಲ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ನೂತನ ಅಧ್ಯಕ್ಷರಾಗಿ ನೇಮಕವಾದ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ […]

Continue Reading

ನಟಿ ಶುಭಾ ಪೂಂಜಾ ವೈವಾಹಿಕ ಜೀವನದಲ್ಲಿ ಬಿರುಗಾಳಿ: ವಿಚ್ಛೇದನಕ್ಕೆ ಮೊರೆ ಹೋದ ದಂಪತಿ

ಸುದ್ದಿ ಸಂಗ್ರಹ ಬೆಂಗಳೂರುಕನ್ನಡ ಚಿತ್ರರಂಗದ ಖ್ಯಾತ ನಟಿ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಶುಭಾ ಪೂಂಜಾ ಅವರ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, ದಾಂಪತ್ಯ ಜೀವನಕ್ಕೆ ಮುಕ್ತಾಯ ಹಾಡಲು ದಂಪತಿ ನಿರ್ಧರಿಸಿದ್ದಾರೆ. ಮದುವೆಯಾಗಿ ನಾಲ್ಕೇ ವರ್ಷಕ್ಕೆ ನಟಿ ಶುಭಾ ಪೂಂಜಾ ಹಾಗೂ ಅವರ ಪತಿ ಸುಮಂತ್ ಬಿಲ್ಲವ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಕೋರಿ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಕನ್ನಡಪರ ಹೋರಾಟಗಾರ ಹಾಗೂ ಉದ್ಯಮಿಯಾಗಿರುವ ಉಡುಪಿ ಮೂಲದ ಸುಮಂತ್ ಬಿಲ್ಲವ ಮತ್ತು ನಟಿ ಶುಭಾ ಪೂಂಜಾ […]

Continue Reading

ಕಾಲುದಾರಿ ತೆರವು, ಸಂಘಟಿತ ಹೋರಾಟಕ್ಕೆ ಜಯ: ವೀರಣ್ಣ ಯಾರಿ

ಸುದ್ದಿ ಸಂಗ್ರಹ ವಾಡಿರೈಲು ನಿಲ್ದಾಣ ಪ್ರಾರಂಭದಿಂದ ಇದ್ದ ಕಾಲುದಾರಿ ಏಕಾಏಕಿ ರೈಲ್ವೆ ಸಿಬ್ಬಂದಿ ತಡೆಯೊಡ್ಡಿದರು, ಇದಕ್ಕೆ ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದ ಪರಿಣಾಮ ತಕ್ಷಣ ತಡೆಯೊಡ್ಡಿದ್ದು ತೆರವುಗೊಳಿಸಿದ ಸಿಬ್ಬಂದಿ ಸಂಚಾರಕ್ಕೆ ಅನುವು ಮಾಡಿದರು. ಇದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮತ್ತು ಸಂಘಟಿತ ಹೋರಾಟಗಾರರ ಜಯವಾಗಿದೆ ಎಂದು ವೀರಣ್ಣ ಯಾರಿ ಹರ್ಷ ವ್ಯಕ್ತಪಡಿಸಿದರು. ತಡೆ ಮಾಡಿರುವ ಬಗ್ಗೆ ರೈಲು ನಿಲ್ದಾಣದ ಪ್ರಭಂದಕರಿಗೆ, ಮುಂಬಯಿ ಹಾಗೂ ಸೊಲ್ಲಾಪುರ ಕೇಂದ್ರ ವಿಭಾಗಕ್ಕೆ ಮತ್ತು ಕೇಂದ್ರ ರೈಲ್ವೆ ಸಚಿವ ವಿ ಸೋಮಣ್ಣ […]

Continue Reading

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಡಿಕೆ ಶಿವಕುಮಾರ್‌

ಸುದ್ದಿ ಸಂಗ್ರಹ ಬೆಂಗಳೂರುತಳಮಟ್ಟದ ಹೋರಾಟದಿಂದ ಪಕ್ಷವನ್ನು ಕಟ್ಟಿ ಬೆಳೆಸಿದ ಕನಕಪುರ ಬಂಡೆ ಡಿ.ಕೆ ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಇಂದು ಸಂಜೆ ಲೋಕಭವನದ ಗಾಜಿನ ಮನೆಯಲ್ಲಿ ನಡೆದ ಪ್ರಮಾಣವಚನ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಡಿಕೆ ಶಿವಕುಮಾರ್‌ ಅವರಿಗೆ ಪ್ರಮಾಣವಚನ ಬೋಧಿಸಿದರು. ಸಂವಿಧಾನ ಪುಸ್ತಕ ಹಿಡಿದ ಡಿಕೆ ಶಿವಕುಮಾರ್‌ ಅವರು ವೀರ ಗಂಗಾಧರ ಅಜ್ಜನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕರಿಸುವ ಮೊದಲು ವೇದಿಕೆಯಲ್ಲಿ ಡಿಕೆ […]

Continue Reading

ಡಿಕೆಶಿ ಜೊತೆ 13 ಮಂದಿ ಪ್ರಮಾಣವಚನ: ಯಾರಿಗೆ ಯಾವ ಖಾತೆ ?

ಸುದ್ದಿ ಸಂಗ್ರಹ ಬೆಂಗಳೂರುರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಅವರು ಇಂದು ಗದ್ದುಗೆಗೇರುತ್ತಿದ್ದು, ಅವರ ಜೊತೆಗೆ ಒಟ್ಟು 13 ಮಂದಿ ಶಾಸಕರು ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. ಸಂಪುಟ ರಚನೆಯ ಆರಂಭದಿಂದಲೂ ತೀವ್ರ ಕುತೂಹಲ ಮೂಡಿಸಿದ್ದ ಉಪ ಮುಖ್ಯಮಂತ್ರಿಯ ಹುದ್ದೆಯ ಸಸ್ಪೆನ್ಸ್‌ಗೆ ಕೊನೆಗೂ ತೆರೆ ಬಿದ್ದಿದೆ. ಆ ಮೂಲಕ ಹೈಕಮಾಂಡ್ ಹಿರಿಯ ನಾಯಕನ ಅನುಭವಕ್ಕೆ ದೊಡ್ಡ ಮನ್ನಣೆ ನೀಡಿದೆ ಈ ಬಾರಿಯ ಸಂಪುಟ ರಚನೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಅತ್ಯಂತ ನಾಜೂಕಾದ ನಡೆ ಇಟ್ಟಿದೆ. ಇಂದು ಪ್ರಮಾಣವಚನ ಸ್ವೀಕರಿಸಲಿರುವ ಒಟ್ಟು […]

Continue Reading

ದೇವೇಗೌಡರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿಕೆ ಶಿವಕುಮಾರ್‌

ಸುದ್ದಿ ಸಂಗ್ರಹ ಬೆಂಗಳೂರುಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಭೇಟಿಯ ಬೆನ್ನಲ್ಲೆ, ಇಂದು ಸಂಜೆ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನಿಸಿದ್ದಾರೆ. ಬೆಂಗಳೂರಿನ ಪದ್ಮನಾಭನಗರದಲ್ಲಿರುವ ದೊಡ್ಡಗೌಡರ ಅಧಿಕೃತ ನಿವಾಸಕ್ಕೆ ಖುದ್ದಾಗಿ ಆಗಮಿಸಿದ ಡಿ.ಕೆ ಶಿವಕುಮಾರ್, ಹಿರಿಯ ಮುತ್ಸದ್ದಿ ನಾಯಕನಿಗೆ ಗೌರವ ಸಲ್ಲಿಸಿದರು. ಹೆಚ್.ಡಿ ದೇವೇಗೌಡರನ್ನು ಭೇಟಿಯಾದ ಡಿ.ಕೆ ಶಿವಕುಮಾರ್, ಅವರ ಕಾಲಿಗೆ ಬಿದ್ದು ನಮಸ್ಕಾರ ಮಾಡಿ […]

Continue Reading

ಬಿಎಸ್‌ವೈ ನಿವಾಸಕ್ಕೆ ಭೇಟಿ: ಕಾರ್ಯಕ್ರಮಕ್ಕೆ ಬರುವಂತೆ ಡಿಕೆಶಿ ಆಹ್ವಾನ

ಸುದ್ದಿ ಸಂಗ್ರಹ ಬೆಂಗಳೂರುಇನ್ನೇನು ಕೆಲವೇ ಗಂಟೆಗಳಲ್ಲಿ ಮುಖ್ಯಮಂತ್ರಿಯಾಗಿ ಗದ್ದುಗೆಗೇರಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು, ಪ್ರಮಾಣವಚನ ಸ್ವೀಕಾರಕ್ಕೂ ಮುನ್ನವೇ ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದರು. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪನವರ ಅಧಿಕೃತ ನಿವಾಸ ‘ಧವಳಗಿರಿ’ಗೆ ಆಗಮಿಸಿದ ಡಿ.ಕೆ ಶಿವಕುಮಾರ್ ಪ್ರೀತಿಯಿಂದ ಪ್ರಮಾಣವಚನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದರು. ಇದೆ ವೇಳೆ ರಾಜ್ಯದಲ್ಲಿ ಹೊಸ ಸರ್ಕಾರವನ್ನು ಯಶಸ್ವಿಯಾಗಿ ನಡೆಸಲು ಮತ್ತು ರಾಜ್ಯದ ಅಭಿವೃದ್ಧಿಗೆ ವಿರೋಧ ಪಕ್ಷದ […]

Continue Reading