ಜನಪದದಿಂದ ಬದುಕಿಗೆ ಬಲ, ಬೆಲೆ, ಸತ್ವ ಮತ್ತು ಮಹತ್ವ ಬರಲು ಸಾಧ್ಯ

ನಗರದ

ಕಲಬುರಗಿ: ನಮ್ಮತನ, ಹೃದಯ ಶ್ರೀಮಂತಿಕೆ, ಮಾನವೀಯ ಮೌಲ್ಯಗಳು, ಸಾಮಾಜಿಕ ಕಾಳಜಿ, ಕೌಟುಂಬಿಕ ಸಾಮರಸ್ಯ ಸೇರಿದಂತೆ ಬದುಕಿನ ಶ್ರೀಮಂತಿಕೆ ಕಟ್ಟಿಕೊಡುವ, ನಮ್ಮ ದೇಶದ ಮೂಲ ಸಂಸ್ಕೃತಿ, ಪರಂಪರೆಯಾದ ಜನಪದದ ಅಳವಡಿಕೆಯಿಂದ ಬದುಕಿಗೆ ಬಲ, ಬೆಲೆ, ಸತ್ವ ಮತ್ತು ಮಹತ್ವ ಬರಲು ಸಾಧ್ಯ ಎಂದು ಹಿರಿಯ ಸಾಹಿತಿ, ಜಾನಪದ ವಿದ್ವಾಂಸ ಡಾ.ಸ್ವಾಮಿರಾವ ಕುಲಕರ್ಣಿ ಅಭಿಮತಪಟ್ಟರು.

ನಗರದ ಹೊಸ ಜೇವರ್ಗಿ ರಸ್ತೆಯಲ್ಲಿನ ಗೆಟ್ಸ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜ್’ನಲ್ಲಿ ಕನ್ನಡ ಜಾನಪದ ಪರಿಷತ್’ನ ಜಿಲ್ಲಾ ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ‘ವಿಶ್ವ ಬುಡಕಟ್ಟು ದಿನಾಚರಣೆ: ಕಲಾವಿದರಿಗೆ ಸತ್ಕಾರ, ಕಲಾ ಪ್ರದರ್ಶನ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜನಪದ ಸಂಸ್ಕೃತಿ ಗುರು-ಹಿರಿಯರು, ತಂದೆ-ತಾಯಿಗೆ ಗೌರವ ನೀಡುವುದು ಕಲಿಸುತ್ತದೆ. ಸರಳವಾಗಿ ಬದುಕುವ ಕಲೆ ಜನಪದದಲ್ಲಿದೆ. ಇದರಿಂದ ಮನಸ್ಸಿಗೆ ನೆಮ್ಮದಿ, ಸಂತೋಷ, ಶಾಂತಿ ದೊರೆಯುತ್ತದೆ. ಜನಪದ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ ಉಳಿಸಿ, ಬೆಳೆಸಿಕೊಂಡು ಹೋಗುವ ಪೂರಕವಾದ ವಾತಾವರಣ ಅಗತ್ಯವಾಗಿದೆ. ನಮ್ಮ ಜಿಲ್ಲೆಯಲ್ಲಿರುವ ಜನಪದ ಕಲಾವಿದರ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿ, ಅದನ್ನು ಕೋಶದ ರೂಪದಲ್ಲಿ ಹೊರತರುವ ಕೆಲಸವಾಗಬೇಕಾಗಿದ್ದು, ಅದಕ್ಕೆ ಪ್ರೋತ್ಸಾಹ, ಸಹಕಾರ ನೀಡಲಾಗುವುದು ಎಂದರು.

ರಾಜ್ಯ ಬುಡ್ಗ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಮಾರುತಿ ರಾಮತೀರ್ಥ ಮಾತನಾಡಿ, ನಮ್ಮ ದೇಶದ ಮೂಲ ಸಂಸ್ಕೃತಿಯಾದ ಜಾನಪದವನ್ನು ಉಳಿಸಿ, ಬೆಳೆಸುವಲ್ಲಿ ಬುಡಕಟ್ಟು ಕಲಾವಿದರ ಕೊಡುಗೆ ಅಪಾರವಾಗಿದೆ. ಅವರು ತಮ್ಮ ಕಲಾ ಪ್ರದರ್ಶನದ ಮೂಲಕ ಜನ ಜಾಗೃತಿ ಮಾಡುತ್ತಾ ಬಂದಿದ್ದಾರೆ. ಅವರಿಗೆ ಪ್ರೋತ್ಸಾಹ ನೀಡಬೇಕು ಎಂದರು.

ಪರಿಷತ್ ಜಿಲ್ಲಾಧ್ಯಕ್ಷ ಎಂ.ಬಿ ನಿಂಗಪ್ಪ, ಪ್ರಧಾನ ಕಾರ್ಯದರ್ಶಿ ಎಚ್.ಬಿ ಪಾಟೀಲ ಮಾತನಾಡಿದರು.

ಗುವಿವಿ ಮಾಜಿ ಸಿಂಡಿಕೇಟ್ ಸದಸ್ಯ ಡಾ.ಸುನೀಲಕುಮಾರ ಎಚ್.ವಂಟಿ, ಬಸವೇಶ್ವರ ಕಾನ್ವೆಂಟ್ ಶಾಲೆಯ ಕಾರ್ಯದರ್ಶಿ ಸೋಮಶೇಖರ ಬಿ.ಮುಲಗೆ, ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಬಿ ಕಂಟೆಗೋಳ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಗೆಟ್ಸ್ ಸಂಸ್ಥೆಯ ಸದಸ್ಯ ಶಿವಶರಣಪ್ಪ ಮಾಗೊಂಡ್, ಕಾಲೇಜಿನ ಉಪನ್ಯಾಸಕರಾದ ಶಿವಲಿಂಗಪ್ಪ ತಳವಾರ, ನೀಲಮ್ಮ ಹಿರೇಮಠ, ವಿದ್ಯಾರ್ಥಿ ಪ್ರತಿನಿಧಿ ಮಲ್ಲಿಕಾರ್ಜುನ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.


ಕಲಾವಿದರಿಗೆ ಸತ್ಕಾರ: ಕಲಾವಿದರಾದ ಮಾರುತಿ ರಾಮತೀರ್ಥ, ಲವಕುಶ ಠೇಕೂರ್, ರಾಜು ಹೆಬ್ಬಾಳ, ಅರುಣಾಬಾಯಿ ಡಿ.ಗೊಂದಳಿ, ಶಾಂತಾಬಾಯಿ ಹಂಗರಗಿ, ಸಂಜಯ ಮಧುಕರ್, ಚಂದ್ರಕಾAತ ಸೂರನ್ ಮತ್ತು ಶಿವಶರಣ ಎಸ್.ಬಡದಾಳ ಅವರಿಗೆ ಸತ್ಕರಿಸಿ, ಗೌರವಿಸಲಾಯಿತು. ನಂತರ ಇದೇ ಕಲಾವಿದರಿಂದ ಕಲಾ ಪ್ರದರ್ಶನ ಜರುಗಿತು

Leave a Reply

Your email address will not be published. Required fields are marked *