ಸೆ.22 ರಿಂದ ಜಿಎಸ್‌ಟಿಯಲ್ಲಿ 2‌ ಸ್ಲ್ಯಾಬ್ ಜಾರಿ, ಯಾವ ವಸ್ತುಗಳ ಬೆಲೆ ಇಳಿಕೆ ? ಯಾವುದು ಏರಿಕೆ ?

ನವದೆಹಲಿ: ಜಿಎಸ್‌ಟಿ ಕೌನ್ಸಿಲ್‌ ಸಿಹಿಸುದ್ದಿ ನೀಡಿದೆ, 8 ವರ್ಷದ ಬಳಿಕ ಜಿಎಸ್‌ಟಿ ಸ್ಲ್ಯಾಬ್‌ ಪರಿಷ್ಕರಣೆಗೆ ಒಪ್ಪಿಗೆ ನೀಡಿದೆ. ಇನ್ನುಮುಂದೆ ದೇಶದಲ್ಲಿ ಎರಡು ಜಿಎಸ್‌ಟಿ ಸ್ಲ್ಯಾಬ್‌ ಇರಲಿದೆ ಸೆ.22 ರಿಂದ ನೂತನ ದರಗಳು ಅನ್ವಯವಾಗಲಿದೆ. ನಾಲ್ಕು ಸ್ಲ್ಯಾಬ್ ಬದಲಿಗೆ 5%, 18% ಸ್ಲ್ಯಾಬ್’ಗೆ ಸರ್ವಾನುಮತದಿಂದ ಒಪ್ಪಿಗೆ ಸಿಕ್ಕಿದೆ. ಎರಡರ ಜೊತೆಗೆ ಐಷರಾಮಿ ವಸ್ತುಗಳಿಗೆ 40% ಜಿಎಸ್‌ಟಿಯ ಸ್ಲ್ಯಾಬ್ ಅನ್ವಯವಾಗಲಿದೆ. ದೆಹಲಿಯಲ್ಲಿ ಎರಡು ದಿನಗಳ ಕಾಲ ಜಿಎಸ್‌ಟಿ ಕೌನ್ಸಿಲ್‌ ಸಭೆ ನಡೆಯುತ್ತಿದ್ದು ಮೊದಲ ದಿನದ ಸಭೆಯ ಬಳಿಕ ಬುಧವಾರ ರಾತ್ರಿ […]

Continue Reading

11 ಐಎಎಸ್‌ ಅಧಿಕಾರಿಗಳನ್ನು ಪ್ರಭಾರ ಹುದ್ದೆಗೆ ವರ್ಗಾವಣೆ: ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ರಾಜ್ಯ ಸರ್ಕಾರವು 11 ಐಎಎಸ್‌ ಅಧಿಕಾರಿಗಳಿಗೆ ಹಾಲಿ ಇರುವ ಹುದ್ದೆಗಳ ಜೊತೆಗೆ ಹೆಚ್ಚುವರಿಯಾಗಿ ಪ್ರಭಾರ ಜವಾಬ್ದಾರಿ ನೀಡಿ ಆದೇಶ ಹೊರಡಿಸಿದೆ. ಮೋಹನರಾಜ್‌ ಕೆ.ಪಿ – ವ್ಯವಸ್ಥಾಪಕ ನಿರ್ದೇಶಕರು, ಕೃಷ್ಣಾ ಜಲ ಭಾಗ್ಯ ನಿಗಮ ಇವರಿಗೆ ಆಯುಕ್ತರು, ಕೃಷ್ಠಾ ಮೆಲ್ದಂಡೆ ಯೋಜನೆಯ ಭೂ ಸ್ವಾಧೀನ, ಪುನರ್ವಸತಿ ಮತ್ತು ಪುನರ್‌ ನಿರ್ಮಾಣ. ಶಿವನಗೌಡ ಪಾಟೀಲ – ಆಯುಕ್ತರು, ಕೃಷಿ ಇಲಾಖೆ ಇವರಿಗೆ ತೋಟಗಾರಿಕೆ ಮತ್ತು ರಾಷ್ಟ್ರೀಯ ತೋಟಗಾರಿಕಾ ಮಿಷನ್‌ನ ನಿರ್ದೇಶಕ. ಡಾ.ಗೋಪಾಲ ಕೃಷ್ಣ ಎಚ್‌.ಎನ್‌ – ಆಯುಕ್ತರು, ಕಾರ್ಮಿಕ […]

Continue Reading

ಶ್ವಾನಕ್ಕೆ ಮಾಡಿಸಿದ ಆಧಾರ್ ಕಾರ್ಡ್ ಹಿಂದಿದೆ ಮನಕಲುಕುವ ಕತೆ: ತಪ್ಪಿತಸ್ಥರ ವಿರುದ್ಧ ತನಿಖೆಗೆ ಆದೇಶಿಸಿದ ಡಿಸಿ

ಭೋಪಾಲ್: ನಾಯಿಗೆ ಆಧಾರ್‌ಕಾರ್ಡ್‌ ಮಾಡಿಸಿದ ಸ್ಟೋರಿಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಆದರೆ ಇದರ ಸತ್ಯಾಸತ್ಯತೆ ಹುಡುಕಲು ಹೊರಟ ಅಂಗ್ಲ ಮಾಧ್ಯಮವೊಂದು ಇದರ ಹಿಂದಿನ ರಿಯಲ್ ಕತೆ ಏನು ಎಂಬುದನ್ನು ಬಹಿರಂಗಪಡಿಸಿದೆ. ಕೆಲ ದಿನಗಳ ಹಿಂದೆ ಶ್ವಾನಕ್ಕೆ ಆಧಾರ್‌ ಕಾರ್ಡ್ ಮಾಡಿಸಲಾಗಿದೆ ಎಂಬ ವಿಚಾರದ ಜೊತೆ ನಾಯಿಯ ಫೋಟೋ ಇರುವ ಆಧಾರ್‌ಕಾರ್ಡ್‌ನ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಈ ಸೋಶಿಯಲ್ ಮೀಡಿಯಾ ಪೋಸ್ಟ್ ನೋಡಿದ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದರು. ಆದರೆ ಈ ಆಧಾರ್‌ […]

Continue Reading

ಅತಿವೃಷ್ಟಿಯಿಂದ ಬೆಳೆಹಾನಿಯಾದ ಗ್ರಾಮಗಳಿಗೆ ಜಿಲ್ಲಾಧಿಕಾರಿ ಭೇಟಿ

ಕಲಬುರಗಿ: ಸತತವಾಗಿ ಸುರಿದ ಮಳೆಯಿಂದ ಬೆಳೆ ಹಾನಿಯಾಗಿರುವ ಶಹಾಬಾದ ಮತ್ತು ಚಿತ್ತಾಪುರ ತಾಲೂಕಿನ ನಾನಾ ಗ್ರಾಮಗಳ ಜಮೀನುಗಳಿಗೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್‌ ಭೇಟಿ ನೀಡಿ ಪರಿಶೀಲಿಸಿದರು. ಚಿತ್ತಾಪುರ ತಾಲೂಕಿನ ವಾಡಿ ಮತ್ತು ಹಲಕಟ್ಟಿ ಗ್ರಾಮದ ಜಮೀನುಗಳಿಗೆ ಭೇಟಿ ನೀಡಿ ಅತಿವೃಷ್ಟಿಯಿಂದ ತೊಗರಿ, ಹೆಸರು, ಹತ್ತಿ ಬೆಳೆ ಹಾನಿಯಾಗಿರುವದು ಪರಿಶೀಲಿಸಿದರು. ಶಹಾಬಾದ ತಾಲೂಕಿನ ರಾವೂರ ಮತ್ತು ಮಾಲಗತ್ತಿ ಗ್ರಾಮದ ಜಮೀನುಗಳಿಗೆ ಭೇಟಿ ನೀಡಿ ತೊಗರಿ, ಹೆಸರು, ಉದ್ದು ಬೆಳೆ ಹಾನಿಯಾಗಿರುವದು ಪರಿಶೀಲಿಸಿದರು. ಚಿತ್ತಾಪುರ ಮತ್ತು ಶಹಾಬಾದ ತಾಲೂಕಿನಲ್ಲಿ ಅತಿವೃಷ್ಟಿಯಿಂದ […]

Continue Reading

12.5 ಕೋಟಿ ರೂ.ಗೆ ಮನೆ ಮಾರಾಟ ಮಾಡಿ ಐಷಾರಾಮಿ ಕಾರು ಖರೀದಿಸಿದ ನಟಿ ಹೇಮಾ ಮಾಲಿನಿ

ಮುಂಬೈ: ಬಾಲಿವುಡ್ ಡ್ರೀಮ್ ಗರ್ಲ್ ಎಂದು ಗುರುತಿಸಿಕೊಂಡಿರುವ ನಟಿ, ಸಂಸದೆ ಹೇಮಾ ಮಾಲಿನಿ ಹೊಸ ಕಾರು ಖರೀದಿಸಿದ್ದಾರೆ. ಇದರಲ್ಲೇನು ವಿಶೇಷ ಅಂತಿರಾ ? ಇಲ್ಲೆ ಇರೋದು ನೋಡಿ. ಇತ್ತೀಚೆಗಷ್ಟೇ ಹೇಮಾ ಮಾಲಿನಿ ಮುಂಬೈನಲ್ಲಿರುವ ಎರಡು ಮನೆಯನ್ನು ಮಾರಾಟ ಮಾಡಿದ್ದರು. 12.5 ಕೋಟಿ ರೂ.ಗೆ ಮನೆ ಮಾರಾಟ ಮಾಡಿದ ಬೆನ್ನಲ್ಲೆ ಹೇಮಾ ಮಾಲಿನಿ ಐಷಾರಾಮಿ ಕಾರು ಖರೀದಿಸಿದ್ದಾರೆ. ಹೊಸ ಕಾರು ಖರೀದಿಸಿದ ಹೇಮಾ ಮಾಲಿನಿ ಸ್ವತಃ ಪೂಜೆ ಮಾಡಿ ಡ್ರೀಮ್ ಕಾರನ್ನು ಡ್ರೀಮ್ ಗರ್ಲ್ಟ್ ಡ್ರೈವ್ ಮಾಡಿದ್ದಾರೆ. ಈ […]

Continue Reading

ಮಾನವನ ದೇಹಕ್ಕೆ ಎಳೆನೀರು ಸಂಜೀವಿನಿಯಂತೆ

ಕಲಬುರಗಿ: ಮಾನವನ ದೇಹದ ಬೆಳವಣಿಗೆಗೆ ಗಾಳಿ, ನೀರು, ಆಹಾರ ಅತ್ಯವಶ್ಯಕ. ದೇಹಕ್ಕೆ ಬರುವ ರೋಗಗಳಲ್ಲಿ ಆಹಾರ ಸಂಬಂಧಿತ ಕಾಯಿಲೆಗಳು ಪ್ರಮುಖ. ವ್ಯಕ್ತಿ ಯಾವುದೆ ಕಾಯಿಲೆಗೆ ತುತ್ತಾದಾಗ ಆಹಾರ, ನೀರು ಸೇವನೆ ಅಸಾಧ್ಯವಾದಾಗ ಎಳೆನೀರು ಸೇವಿಸಿದರೆ ನೈಸರ್ಗಿಕ ಗ್ಲೂಕೋಸ್ ದೊರೆಯುತ್ತದೆ. ಇದು ಸಂಜೀವಿನಿಯಂತೆ ಕಾರ್ಯನಿರ್ವಹಿಸುತ್ತದೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು. ನಗರದ ಶಹಾಬಜಾರ ಮಹಾದೇವ ನಗರದ ಸ್ವಾತಿ ಪ್ರೌಢಶಾಲೆಯ ಆವರಣದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಮಂಗಳವಾರ ಜರುಗಿದ ‘ವಿಶ್ವ ತೆಂಗು ದಿನಾಚರಣೆ’ಯಲ್ಲಿ ತೆಂಗಿನ ಗಿಡ […]

Continue Reading

YouTube ನಿಂದ ಹಣ ಗಳಿಸುವುದು ಹೇಗೆ ? 2 ದಿನಗಳ ಸರ್ಕಾರಿ ತರಬೇತಿ

ಯೂಟ್ಯೂಬ್ ಕೇವಲ ವಿಡಿಯೋ ವೇದಿಕಯಲ್ಲ. ಅದು ಗಳಿಕೆಗೆ ಅತ್ಯುತ್ತಮ ಮೂಲವಾಗಿ ಬದಲಾಗಿದೆ. ಆದ್ದರಿಂದಲೇ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತಮ್ಮದೆಯಾದ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಲು ಬಯಸುತ್ತಾರೆ. ಆದರೆ ಸಮಸ್ಯೆಯೆಂದರೆ ಹೆಚ್ಚಿನ ಜನರಿಗೆ ಎಲ್ಲಿಂದ ಪ್ರಾರಂಭಿಸಬೇಕು ಮತ್ತು ಯಾವ ವಿಷಯಗಳಿಂದ ಜನರನ್ನು ಹೆಚ್ಚು ಆಕರ್ಷಿಸಬೇಕು ಎಂಬುದು ತಿಳಿದಿಲ್ಲ. ನೀವೂ ಕೂಡ ಇದೆ ರೀತಿ ಸಮಸ್ಯೆಯಲ್ಲಿದ್ದರೆ ಈ ಸುದ್ದಿ ನಿಮಗಾಗಿ. ಈಗ ನೀವು ಮನೆಯಲ್ಲಿ ಕುಳಿತು ಎರಡು ದಿನಗಳಲ್ಲಿ YouTube ಚಾನೆಲ್ ರಚಿಸುವ ಮತ್ತು ಅದರಿಂದ ಹಣ ಗಳಿಸುವ ತಂತ್ರವನ್ನು […]

Continue Reading

ಭೂಮಿ ಪೂಜೆ, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ

ಸುದ್ದಿ ಸಂಗ್ರಹ ಶಹಾಬಾದ ರಾಯಚೋಟಿ ವೀರಭದ್ರೇಶ್ವರ ಆಶ್ರಮ ಹಾಗೂ ಭದ್ರಕಾಳಿ ದೇವಸ್ಥಾನದ ನೂತನ ಕಟ್ಟಡದ ಭೂಮಿ ಪೂಜೆಯನ್ನು ಸಮಾಜ ಸೇವಕಿ ಜಯಶ್ರೀ ಮತ್ತಿಮೂಡ ನೆರವೇರಿಸಿದರು ಮತ್ತು 501 ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು ಎಂದು ಶ್ರೀ ಮಠದ ಪೂಜ್ಯ ಶಂಕ್ರಯ್ಯ ಸ್ವಾಮಿ ಹೇಳಿದರು.  ನಗರದಲ್ಲಿ ಸೋಮುವಾರ ರಾಯಚೋಟಿ ವೀರಭದ್ರೇಶ್ವರ ಆಶ್ರಮದ ನೂತನ ಕಟ್ಟಡದ ಶಂಕು ಸ್ಥಾಪನೆ ಮತ್ತು ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀಮಠಕ್ಕೆ ಭಕ್ತರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ […]

Continue Reading

ಅತಿಯಾದ ಮಳೆಯಿಂದ ಬಳವಡಗಿ ಗ್ರಾಮ ಜಲಾವೃತ: ಅಗ್ನಿಶಾಮಕ ಸಿಬ್ಬಂದಿಯಿಂದ 20 ಜನರ ರಕ್ಷಣೆ

ಸುದ್ದಿ ಸಂಗ್ರಹ ಚಿತ್ತಾಪುರ ತಾಲೂಕಿನ ಬಳವಡಗಿ ಗ್ರಾಮದಲ್ಲಿ ಅತಿ ಹೆಚ್ಚು ಮಳೆಯಾದ ಪರಿಣಾಮ ಗ್ರಾಮದ ಕೆಲಭಾಗ ಜಲಾವೃತಗೊಂಡಿತ್ತು, ಕೂಡಲೇ ಕಲಬುರಗಿ ಅಗ್ನಿಶಾಮಕ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ 20 ಜನರ ರಕ್ಷಣೆ ಮಾಡಿದರು. ಕಲಬುರಗಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಲ್ಲಿಕಾರ್ಜುನ ನೇತೃತ್ವದಲ್ಲಿ ಎಸ್‌ಎಸ್‌ಓ ಆಂಜನೇಯ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳಾದ ಸತೀಶ ಎಲ್.ಎಫ್, ನೈಮೋದಿನ್, ಗಬ್ಬರ್ ಸಿಂಗ್, ಶಂಕರ ಲಿಂಗ, ಮಲ್ಲಪ್ಪ, ಅಮಿತ, ಬಸವರಾಜ, ಶಂಭುಲಿಂಗಪ್ಪ ಮತ್ತು ರಾಮಾಜಿ ರಕ್ಷಣಾ ಕಾರ್ಯದಲ್ಲಿ ತೊಡಗಿ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದರು. […]

Continue Reading

ಸದೃಢ ಆರೋಗ್ಯಕ್ಕಾಗಿ ಸಮತೋಲಿತ ಆಹಾರದ ಸೇವನೆ ಅಗತ್ಯ: ಡಾ.ಅನುಪಮಾ

ಕಲಬುರಗಿ: ಸದೃಢ ಆರೋಗ್ಯಕ್ಕಾಗಿ ಎಲ್ಲರು ಸಮತೋಲಿತ ಆಹಾರ ಸೇವಿಸುವುದು ಅಗತ್ಯವಾಗಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಕೇಶ್ವಾರ ಹೇಳಿದರು. ನಗರದ ಶೇಖರೋಜಾದ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ಸಹಯೋಗದೊಂದಿಗೆ ಸೋಮವಾರ ಏರ್ಪಡಿಸಿದ್ದ ‘ರಾಷ್ಟ್ರೀಯ ಪೋಷಕಾಂಶ ಸಪ್ತಾಹ ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದ ಅವರು, ಯಾವುದೆ ರಾಷ್ಟ್ರದ ಅಭಿವೃದ್ದಿಯಲ್ಲಿ ಆರೋಗ್ಯ ಭರಿತ, ಸದೃಢ ಮಾನವ ಸಂಪನ್ಮೂಲ ತುಂಬಾ ಅವಶ್ಯಕ. ಮಗುವಿದ್ದಾಗಲೇ ಅದಕ್ಕೆ ಎಲ್ಲಾ ಪೋಷಕಾಂಶಗಳುಳ್ಳ ಸಮತೋಲಿತ ಆಹಾರ ನೀಡಬೇಕು. ಇದರಿಂದ ಆ […]

Continue Reading