ಚಿತ್ತಾಪುರ: ಗ್ರಾಮೀಣ ಭಾಗದ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ, ಹೀಗಾಗಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕು ಎಂದು ಸಿಡಿಪಿಓ ಆರತಿ ತುಪ್ಪದ ಹೇಳಿದರು.
ಪಟ್ಟಣದ ತಾ.ಪಂ ಸಭಾಂಗಣದಲ್ಲಿ ತಾಲೂಕಾ ಆಡಳಿತ ಮತ್ತು ಶಿಶು ಅಭಿವೃದ್ಧಿ ಅಭಿವೃದ್ಧಿ ಯೋಜನೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಪೋಷಣ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ಅಂಗನವಾಡಿ ಕೇಂದ್ರದಲ್ಲಿ ದಿನಾಲೂ ಒಂದೊಂದು ಕಾರ್ಯಕ್ರಮ ಮಾಡುತ್ತೆವೆ, ಅಂಗನವಾಡಿ ಸ್ವಚ್ಛತೆ ಬಗ್ಗೆ, ಮಗುವಿನ ಆರೈಕೆ ಬಗ್ಗೆ ಮಗುವಿನ ತೂಕ ಹಾಕುವದು ಎಂದರು.

ತಾಯಂದಿರ ಸಭೆ, ಪೌಷ್ಟಿಕ ಶಿಬಿರ ದಿನಾಲೂ ಒಂದೊಂದು ವಿಷಯ ಕೊಟ್ಟು ಬಿಟ್ಟು ಅಂಗನವಾಡಿ ಕಾರ್ಯಕರ್ತೆಯರಿಗೆ ಕಾರ್ಯಕ್ರಮ ಮಾಡಲು ಹೇಳುತ್ತೆವೆ. ಅಗಸ್ಟ್ 31 ರಂದು ತಾಯಿಯ ಹೆಸರಿನಲ್ಲಿ ಒಂದು ಗಿಡ, ಅಭಿಯಾನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿತ್ತೆವೆ ಎಂದರು.

ಆರೋಗ್ಯ ಇಲಾಖೆಯ ಎಲ್’ಎಚ್’ವಿ ಸುನಂದಾ ಮಾತನಾಡಿ, ಜ್ವರ, ಕೆಮ್ಮು, ಹಸಿವಾಗುವದಿಲ್ಲ, ಕಫದಲ್ಲಿ ರಕ್ತ ಮಿಕ್ಸ್ ಆಗುತ್ತೆ, ದೇಹದ ತೂಕ ಕಡಿಮೆಯಾಗುತ್ತದೆ ಇವು ಟಿಬಿ ರೋಗದ ಲಕ್ಷಣಗಳು, ಟಿಬಿ ಆಗಿರುವವರಿಗೆ ಒಂದು ಲಕ್ಷ ರೂಪಾಯಿಗಳು ಚಿಕಿತ್ಸೆಗೆ ಸರ್ಕಾರದಿಂದ ನೀಡಲಾಗುತ್ತದೆ ಮತ್ತು ತಿಂಗಳಿಗೆ 500 ರೂ ಆರು ತಿಂಗಳು ಆರೋಗ್ಯ ಇಲಾಖೆ ನೀಡಲಾಗುತ್ತದೆ ಎಂದರು.
ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಅಕ್ರಂ ಅಹ್ಮದ ಪಾಶಾ, ತಾಲೂಕಾ ಆರೋಗ್ಯ ಅಧಿಕಾರಿ ಡಾ. ಸೈಯದ್ ಖಾದ್ರಿ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಕಿರಣ ಜಾಧವ, ಕೆನರಾ ಬ್ಯಾಂಕ್ ಸಲಹೆಗಾರತಿ ರೇಖಾ ತಳವಾರ, ಕಂದಾಯ ಇಲಾಖೆಯ ಅಧಿಕಾರಿ ಶರಣಪ್ಪ, ಆರೋಗ್ಯ ಸಂಯೋಜಕ ಶಿವರಾಜ ಸೇರಿದಂತೆ ಗಣ್ಯ ವ್ಯಕ್ತಿಗಳು, ವಿವಿಧ ಗ್ರಾಮಗಳ ಪ್ರಮುಖರು ಇದ್ದರು.