ಚಿತ್ತಾಪುರ ವೀರಶೈವ ಲಿಂಗಾಯತ ಮಹಾಸಭಾ ಪದಾಧಿಕಾರಿಗಳ ಆಯ್ಕೆ

ಸುದ್ದಿ ಸಂಗ್ರಹ

ಚಿತ್ತಾಪುರ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಎಂದು ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ ಹೇಳಿದರು.

ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ತಾಲೂಕಾ ಕಾರ್ಯಕಾರಿ ಸಮಿತಿ ಸಭೆ ಕರೆದು ತಾಲೂಕು ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಪದಾಧಿಕಾರಿಗಳು
ತಾಲೂಕು ಘಟಕ: ಶಾಂತಣ್ಣ ಚಾಳೀಕಾರ ಅಳ್ಳೋಳ್ಳಿ, ಬಸವರಾಜ ಕಿರಣಗಿ, ವೆಂಕಟಮ್ಮ ಪಾಲಪ್ (ಉಪಾಧ್ಯಕ್ಷರು), ಆನಂದ ಪಾಟೀಲ ನರಿಬೋಳ (ಪ್ರಧಾನ ಕಾರ್ಯದರ್ಶಿ), ಈಶ್ವರ ಬಾಳಿ ರಾವೂರ, ಪ್ರಸಾದ ಅವಂಟಿ, ಬಸವರಾಜ ಪಾಟೀಲ ಭಾಗೋಡಿ (ಕಾರ್ಯದರ್ಶಿಗಳು), ಚಂದ್ರಶೇಖರ ಬಳ್ಳಾ (ಕೋಶಾಧ್ಯಕ್ಷರು).

ತಾಲೂಕು ಯುವ ಘಟಕ
ಬಸವಂತರಾವ ಮಾಲಿ ಪಾಟೀಲ್ ದಿಗ್ಗಾಂವ (ಗೌರವಾಧ್ಯಕ್ಷರು), ಅನೀಲಕುಮಾರ ವಡ್ಡಡಗಿ (ಅಧ್ಯಕ್ಷರು), ಮಲ್ಲು ಇಂದೂರ ಕಮರವಾಡಿ (ಪ್ರಧಾನ ಕಾರ್ಯದರ್ಶಿ), ನಿಂಬೆಣ್ಣಪ್ಪ ಪಾಟೀಲ ಇಟಗಿ (ಸಹ ಕಾರ್ಯದರ್ಶಿ), ಸಂತೋಷ ಹಾವೇರಿ (ಸಂಘಟನಾ ಕಾರ್ಯದರ್ಶಿ).

ನಗರ ಘಟಕ
ಕೋಟೇಶ್ವರ ರೇಷ್ಮಿ (ಗೌರವಾಧ್ಯಕ್ಷರು), ಚಂದ್ರಶೇಖರ ಉಟಗೂರ (ಅಧ್ಯಕ್ಷರು), ವೀರಭದ್ರಪ್ಪ ಪಾಟೀಲ ಹುಮನಾಬಾದ (ಪ್ರಧಾನ ಕಾರ್ಯದರ್ಶಿ), ಸಾಯಿನಾಥ್ ನಿಪ್ಪಾಣಿ (ಸಂಘಟನಾ ಕಾರ್ಯದರ್ಶಿ), ವಿಶ್ವರೆಡ್ಡಿ ಗಡೆಸೂರ (ಸಹ ಕಾರ್ಯದರ್ಶಿ) ಅವರನ್ನು ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಅಂಬರೀಷ್ ಸುಲೇಗಾಂವ್, ಬಸವರಾಜ ಸಂಕನೂರ, ಬಸವರಾಜ ಹೂಗಾರ, ಕೋಟೇಶ್ವರ ರೇಷ್ಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *