ಕಾಳಗಿ: ತಾಲೂಕಿನ ಹೆಬ್ಬಾಳ ಗ್ರಾಮದ ಸರಕಾರಿ ಪ್ರೌಢಶಾಲೆಗೆ ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ ಅವರು ಭೇಟಿ ನೀಡಿದರು.
ಶಾಲೆಗೆ ಭೇಟಿ ನೀಡಿ ಶಾಲೆಯ ಕಾರ್ಯವೈಖರಿ ಪ್ರಶಂಸೆ ಮಾಡಿದರು. ಅಕ್ಷರದಾಸೋಹ ಕಾರ್ಯಕ್ರಮ ವೀಕ್ಷಿಸುವ ಮೂಲಕ ವಿಧ್ಯಾರ್ಥಿಗಳಿಗೆ ಚಿಕ್ಕಿ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಶಿವರಾಜ ಚೆಂಗಟಿ, ವಕೀಲರಾದ ಬಬ್ಬರ್ ಉಪಸ್ಥಿತರಿದ್ದರು.