ವಾಡಿ: ಬಿಜೆಪಿ ಕಚೇರಿಯಲ್ಲಿ ಬಲಿದಾನ ದಿನಾಚರಣೆ

ಪಟ್ಟಣದ

ಸುದ್ದಿ ಸಂಗ್ರಹ ಚಿತ್ತಾಪುರ
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಸುಖದೇವ್‌ ಥಾಪರ್, ಭಗತ್‌ ಸಿಂಗ್‌, ಶಿವರಾಮ್ ರಾಜಗುರು ಅವರ ಪುಣ್ಯತಿಥಿ ಪ್ರಯುಕ್ತ ಬಲಿದಾನ ದಿನಾ ಆಚರಿಸಲಾಯಿತು.

ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಸ್ವಾಭಿಮಾನದಿಂದ ಸಾವಿನ ಕುಣಿಕೆ ಏರಿದ
ಕೆಚ್ಚೆದೆಯ ವೀರರಾದ ಭಗತ್‌‌ ಸಿಂಗ್‌‌, ರಾಜಗುರು ಮತ್ತು ಸುಖದೇವ ಅವರು ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದರು ಎಂದರು.

ಇವರು ಹೇಗಾದರೂ ಸರಿ ಬ್ರಿಟಿಷರನ್ನು ದೇಶದಿಂದ ಓಡಿಸಬೇಕೆಂದು ಕ್ರಾಂತಿಕಾರಿ ಹೋರಾಟ ಮಾಡುತ್ತಿದ್ದರು. 1929ರಲ್ಲಿ ಸೆಂಟ್ರಲ್ ಲೆಜಿಸ್ಲೇಟಿವ್ ಅಸೆಂಬ್ಲಿಯ ಮೇಲೆ ಬಾಂಬ್ ದಾಳಿ ಮಾಡಿದರು. ಈ ಕಾರಣಕ್ಕೆ ಇವರನ್ನು ಬಂಧಿಸಿ ಮರಣದಂಡನೆ ಶಿಕ್ಷೆ ನೀಡಲಾಯಿತು.1931 ಭಾರತೀಯರ ಪಾಲಿಗೆ ಕರಾಳ ದಿನ, ಈ ದಿನ ನಮ್ಮ ದೇಶ ಮೂವರು ಮಹಾನ್‌ ದೇಶಭಕ್ತರನ್ನು ಕಳೆದುಕೊಂಡಿತು. ಇವರನ್ನು ಗಲ್ಲಿಗೇರಿಸಿದಾಗ ಸುಖದೇವ್‌ ಥಾಪರ್, ಭಗತ್‌ ಸಿಂಗ್ ಅವರಿಗೆ 23 ವರ್ಷ, ರಾಜಗುರು ಅವರಿಗೆ ಕೇವಲ 22 ವರ್ಷ, ಅಷ್ಟು ಚಿಕ್ಕ ವಯಸ್ಸಿನಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಉಸಿರು ಚೆಲ್ಲಿದರು. ಇಂತಹ ಮಹಾನ್ ಆದರ್ಶವಂತರ ತಾಯ್ನಾಡಿನಲ್ಲಿರು ನಾವು ಅವರ ಆಶಯದಂತೆ ಭವ್ಯ ಭಾರತದ ‌ಹಿರಿಮೆ ಸಾರೊಣ ಎಂದರು.

ಈ ಸಂಧರ್ಭದಲ್ಲಿ ಯುವ ಮುಖಂಡ ವಿಠಲ ನಾಯಕ, ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಮುಖಂಡರಾದ ಶರಣಗೌಡ ಚಾಮನೂರ, ಹರಿ ಗಲಾಂಡೆ, ಕಿಶನ ಜಾಧವ, ಚಂದ್ರಶೇಖರ ಬೆಣ್ಣೂರ, ಯಂಕಮ್ಮ ಗೌಡಗಾಂವ, ನಿರ್ಮಲಾ ಇಂಡಿ, ಉಮಾಭಾಯಿ ಗೌಳಿ, ದೇವಕ್ಕಿ ಪುಜಾರಿ, ಬಸವರಾಜ ಇಂಗಳಗಿ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *