ಸುದ್ದಿ ಸಂಗ್ರಹ ಶಹಾಬಾದ
ಪರಿಸರ ಸಂಕ್ಷಣೆ ಮತ್ತು ನೈಸರ್ಗಿಕ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಾಮೂಹಿಕ ಜವಾಬ್ದಾರಿ ಪ್ರದರ್ಶಿಸಬೇಕು ಎಂದು ಸಂತ ಥಾಮಸ್ ಶಾಲೆಯ ಫಾದರ ಜೇರಾಲ್ಡ ಸಾಗರ ಹೇಳಿದರು.
ನಗರದ ಸಂತ ಥಾಮಸ್ ಶಾಲೆಯಲ್ಲಿ ಶನಿವಾರ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದಿನ ದಿನಗಳಲ್ಲಿದ್ದ ಪರಿಸರ ಕಾಳಜಿ ಇಂದಿನ ಯುವಕರಲ್ಲಿ ಉಳಿದಿಲ್ಲ. ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗುತ್ತಿದ್ದು ಯುವಕರು ಪರಿಸರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿದೆ ಎಂದರು.
ಕೆನರಾ ಬ್ಯಾಂಕಿನ ಅಧಿಕಾರಿ ಪ್ರತೀಕ ವಾಗ್ಮಾರೆ ಮಾತನಾಡಿ, ಇಂದಿನ ದಿನಗಳಲ್ಲಿ ಗಿಡಗಳು ನೆಟ್ಟರೆ ಮುಗಿಯುವುದಿಲ್ಲ. ಪ್ರತಿದಿನ ಅವುಗಳನ್ನು ಮಕ್ಕಳಂತೆ ನೋಡಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಗಿಡಗಳ ಬಗ್ಗೆ ಜಾಗೃತಿ ವಹಿಸಿ ಪೋಷಣೆ ಮಾಡಿದರೆ ಮಾತ್ರ ಪರಿಸರ ದಿನಾಚರಣೆ ಸಾರ್ಥಕ ಎಂದರು.
ಹಿಂದಿನ ಕಾಲದಲ್ಲಿ ತಾತ ಮುತ್ತಾತಂದಿರು ತುಂಬಾ ಶ್ರಮ ವಹಿಸಿ ತಮ್ಮ ಜಮೀನುಗಳಲ್ಲಿ ಗಿಡಿಗಳನ್ನು ನೆಟ್ಟು ಪೋಷಣೆ ಮಾಡಲಾಗುತ್ತಿತ್ತು. ಆದ್ದರಿಂದ ಉತ್ತಮ ಪರಿಸರ ವಾತಾವಣೆ ಇದ್ದರಿಂದ ಯಾವುದೆ ರೋಗ ರುಜಿನಗಳಿಗೆ ಒಳಗಾಗದೆ ಉತ್ತಮ ಆರೋಗ್ಯವಂತರಾಗಿ ನೂರಾರು ವರ್ಷಗಳ ಕಾಲ ಬದುಕುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ದಿನೇ ದಿನೇ ಪರಿಸರ ನಶಿಸಿ ಹೋಗುತ್ತಿದೆ. ಜೊತೆಗೆ ಅನೈರ್ಮಲ್ಯ ಹೆಚ್ಚಾಗುತ್ತಿದೆ.
- ಸಿಸ್ಟರ್ ಕಾಣಿಕ್ಯ ಮೇರಿ ಮುಖ್ಯಗುರು.
ಇಂದಿನ ದಿನಗಳಲ್ಲಿ ಪರಿಸರದ ಕಾಳಜಿ ಮಾಡುವಲ್ಲಿ ಯುವಕರು ಬೇಜವಾಬ್ದಾರಿ ತೋರುತ್ತಿದ್ದು, ನಮ್ಮ ಪರಿಸರ ಉತ್ತಮವಾಗಿ ಕಾಪಾಡಲು ನಮ್ಮ ಜವಾಬ್ದಾರಿ ಬಹಳಷ್ಟಿದೆ, ಪ್ರತಿಯೊಬ್ಬರು ಜವಾಬ್ದಾರಿಯಿಂದ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಉತ್ತಮವಾಗಿ ಬೆಳೆಸಿ, ಸಂರಕ್ಷಣೆ ಮಾಡುವುದು ತುಂಬಾ ಮುಖ್ಯವಾಗಿದೆ.
- ಪಾದರ ಜೆರಾಲ್ಡ್ ಸಾಗರ
ಶಾಲಾ ಶಿಸ್ತು ಸಮಿತಿಯ ಪದಾಧಿಕಾರಿಗಳ ನೇಮಕ ಮಾಡಿ ಗೌರವಿಸಲಾಯಿತು. ವಿದ್ಯಾರ್ಥಿಗಳ ನಾಯಕತ್ವ ಸಮಿತಿ ರಚಿಸಿ ಪದಗ್ರಹಣ ಮಾಡಲಾಯಿತು.
ಮುಖ್ಯಗುರು ಸಿಸ್ಟರ ಕಾಣಿಕ್ಯ ಮೇರಿ, ಪತ್ರಕರ್ತ ವಾಸು ಚವ್ಹಾಣ್ ವೇದಿಕೆಯಲ್ಲಿದ್ದರು.
ಇಮಾನವೆಲ್ ಸ್ವಾಗತಿಸಿದರು, ಪ್ರೀಯಾ ಓಝಾ ಅತಿಥಿ ಪರಿಚಯಿಸಿದರು, ಪಲ್ಕ್ ಮಂತ್ರಿ, ಅದಿತಿ ರಾಠಿ, ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸಿಸ್ಟರ್ ಲಲಿತಾ, ಸಿಸ್ಟರ್ ಮರಿಯಾ, ಶಿಕ್ಷಕಿಯರು, ಪಾಲಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದರು.
.