ನಾಡಿನ ಶೈಕ್ಷಣಿಕ ಕ್ಷೇತ್ರಕ್ಕೆ ಮಠ ಮಾನ್ಯಗಳ ಕೊಡುಗೆ ಅನನ್ಯ: ಡಾ.ಮೋಹನ್ ಆಳ್ವಾ

ಚಿತ್ತಾಪುರ: ಕನ್ನಡ ನಾಡಿನಾದ್ಯಂತ ಸರಕಾರಕ್ಕಿಂತ ಮೊದಲು ಮಠ ಮಾನ್ಯಗಳು ಉಚಿತವಾಗಿ ಅನ್ನ, ಅಕ್ಷರ, ಆಶ್ರಯ ನೀಡುತ್ತಾ ಬಂದಿದ್ದು ಜನರಲ್ಲಿ ಅಕ್ಷರ ಸಂಸ್ಕೃತಿ ಬಿತ್ತುವಲ್ಲಿ ಮಠಗಳ ಪಾತ್ರ ಅನನ್ಯ ಎಂದು ಮೂಡಬಿದಿರೆಯ ಆಳ್ವಾಸ್ ಸಂಸ್ಥೆಯ ಸಂಸ್ಥಾಪಕ, ನಾಡೋಜ ಡಾ.ಮೋಹನ್ ಆಳ್ವಾ ಹೇಳಿದರು. ನಾಲವಾರದ ಸದ್ಗುರು ಕೋರಿಸಿದ್ಧೇಶ್ವರ ಸಂಸ್ಥಾನ ಮಠದ ವತಿಯಿಂದ ಪ್ರದಾನ ಮಾಡಿದ ಪ್ರತಿಷ್ಠಿತ “ಶ್ರೀ ಸಿದ್ಧತೋಟೇಂದ್ರ ಶಿಕ್ಷಣ ರತ್ನ” ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಕನ್ನಡ ನಾಡು ಸಂಸ್ಕಾರಯುತವಾಗಿ ಬೆಳೆಯಲು ಮಠಗಳು ಜನಮನದಲ್ಲಿ ಬಿತ್ತಿದ ಆಧ್ಯಾತ್ಮಿಕ ಮೌಲ್ಯಗಳೇ […]

Continue Reading

ನಾಲವಾರ ಮಠ ಕಲಾವಿದರ ಆಶ್ರಯ ಧಾಮ: ನಟ ಶರಣ್

ಚಿತ್ತಾಪುರ: ನಾಲವಾರದ ಸದ್ಗುರು ಕೋರಿಸಿದ್ದೇಶ್ವರ ಸಂಸ್ಥಾನ ಮಠವು ನನ್ನಂತಹ ಅನೇಕ ಕಲಾವಿದರನ್ನು ಬೆಳೆಸಿ ಪ್ರೋತ್ಸಾಹಿಸಿದ ಆಶ್ರಯಧಾಮ ಎಂದು ಕನ್ನಡದ ಖ್ಯಾತ ಚಿತ್ರನಟ ಶರಣ್ ಹೇಳಿದರು. ನಾಲವಾರದ ಸದ್ಗುರು ಕೋರಿಸಿದ್ಧೇಶ್ವರ ಸಂಸ್ಥಾನ ಜಾತ್ರಾಮಹೋತ್ಸವ ಸಾಂಸ್ಕೃತಿಕ ಸಮಾರೋಪ ಸಮಾರಂಭದ ವಿಶೇಷ ಅತಿಥಿಯಾಗಿ ಮಾತನಾಡಿದ ಅವರು, ಪಕ್ಕದ ಯಾದಗಿರಿ ಜಿಲ್ಲೆಯ ಅಮೇರಿಕನ್ ಆಸ್ಪತ್ರೆ ಎಂದು ಕರೆಯಲ್ಪಡುತ್ತಿದ್ದ ಹೋಲ್ ಸ್ಟನ್ ಆಸ್ಪತ್ರೆಯಲ್ಲಿ ನನ್ನ ಜನನವಾಗಿದ್ದು,ಈ ಭಾಗಕ್ಕೆ ಬಂದಾಗಲೆಲ್ಲ ನನ್ನ ಮನೆಗೆ ಬಂದ ಅನುಭವವಾಗುತ್ತದೆ ಎಂದರು. ಕಲಬುರಗಿ ಶರಣನ ಆಶೀರ್ವಾದ ಫಲದಿಂದ ನಾನು ಜನ್ಮತಾಳಿರುವೆ, […]

Continue Reading

ರಾಜಮೌಳಿ ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ಸಂಭಾವನೆ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ

ಪ್ರಿಯಾಂಕಾ ಚೋಪ್ರಾ ಅವರು ಹಿಂದಿ ಸಿನಿಮಾದಲ್ಲಿ ನಟಿಸಲಾರದ್ದು ಹಲವು ವರ್ಷಗಳೇ ಕಳೆದಿವೆ. ಹಾಲಿವುಡ್ ಸಿನಿಮಾಗಳಲ್ಲಿ ಆ್ಯಕ್ಟೀವ್ ಆಗಿರುವ ನಟಿ ಈಗ ಮತ್ತೆ ಸೌತ್ ಸಿನಿಮಾಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ರಾಜಮೌಳಿ ನಿರ್ದೇಶನದಲ್ಲಿ ಮಹೇಶ್ ಬಾಬು ಜೊತೆಗೆ ನಟಿಸಲು 30 ಕೋಟಿ ರೂ. ಸಂಭಾವನೆಯನ್ನು ನಟಿ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಪ್ರಿಯಾಂಕಾಗೆ ಈಗ 42 ವರ್ಷವಾದ್ರೂ ನಟಿಯ ಚಾರ್ಮ್ ಇನ್ನೂ ಕಮ್ಮಿಯಾಗಿಲ್ಲ. ಅವರಿಗೆ ಇನ್ನೂ ಬೇಡಿಕೆಯಿದೆ. ಹಾಲಿವುಡ್‌ನಲ್ಲಿ ಆ್ಯಕ್ಷನ್ ಕ್ವೀನ್ ಆಗಿ ಮಿಂಚುತ್ತಿದ್ದಾರೆ. […]

Continue Reading

ಟಿಕ್‌ಟಾಕ್ ವೀಡಿಯೋ ಮಾಡಿದ್ದಕ್ಕೆ ಪಾಕಿಸ್ತಾನದಲ್ಲಿ 15 ವರ್ಷದ ಪುತ್ರಿಯನ್ನೇ ಗುಂಡಿಕ್ಕಿ ಕೊಂದ ಅಪ್ಪ

ಇಸ್ಲಾಮಾಬಾದ್‌: ತನ್ನ ಎಚ್ಚರಿಕೆ ಮೀರಿಯೂ ಟಿಕ್‌ಟಾಕ್‌ನಲ್ಲಿ ವೀಡಿಯೋ ಪೋಸ್ಟ್‌ ಮಾಡಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ 15 ವರ್ಷದ ಮಗಳನ್ನೇ ಗುಂಡಿಕ್ಕಿ ಕೊಂದಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. 28 ವರ್ಷಗಳ ಹಿಂದೆ ಅಮೇರಿಕದಲ್ಲಿ ನೆಲೆಸಿದ್ದ ವ್ಯಕ್ತಿ ಇತ್ತೀಚೆಗಷ್ಟೇ ತನ್ನ ಕುಟುಂಬವನ್ನು ಪಾಕಿಸ್ತಾನಕ್ಕೆ ಕರೆತಂದಿದ್ದ. ತನ್ನ ಎಚ್ಚರಿಕೆ ಹೊರತಾಗಿಯೂ ಮಗಳು ವಿಡಿಯೋ ಪೋಸ್ಟ್‌ ಮಾಡುವುದನ್ನು ಮುಂದುವರಿಸಿದ್ದಳು. ಇದರಿಂದ ಗುಂಡಿಕ್ಕಿ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಟಿಕ್‌ ಟಾಕ್‌ನಲ್ಲಿ ವಿಡಿಯೋ ಪೋಸ್ಟ್‌ ಮಾಡಿದ್ದಕ್ಕಾಗಿ ಆಕೆಯ ಅಪ್ಪ, ಚಿಕ್ಕಪ್ಪ ಸೇರಿ ಗುಂಡಿಕ್ಕಿ ಕೊಂದಿದ್ದಾರೆ. ಸದ್ಯ ಆರೋಪಿಯನ್ನು ಮರ್ಯಾದಾ […]

Continue Reading

ಸೇವಾಲಾಲ್ ಮಹಾರಾಜರ ಜಯಂತಿಗೆ ಬಿ.ವೈ ವಿಜಯೇಂದ್ರ ಅವರಿಗೆ ಆಮಂತ್ರಣ

ವಾಡಿ: ಫೆ.15 ರಂದು ಪಟ್ಟಣದಲ್ಲಿ ನಡೆಯುವ ಸಂತ ಸೇವಾಲಾಲ್ ಮಹಾರಾಜರ 286ನೇ ಜಯಂತೋತ್ಸವ ಸಮಾರಂಭಕ್ಕೆ ಬಿಜೆಪಿ ರಾಜಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರನ್ನು ಬಂಜಾರ ಸಮಾಜದ ಮುಖಂಡರು ಆಹ್ವಾನಿಸಿದರು. ಸೇಡಂ ತಾಲೂಕಿನ ಬೀರನಳ್ಳಿಯಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಬಿ.ವೈ ವಿಜಯೇಂದ್ರ ಅವರನ್ನು ಕಲಬುರಗಿಯಲ್ಲಿ ಭೇಟಿಯಾಗಿ ಆಮಂತ್ರಿಸಿದರು. ಪಟ್ಟಣದಲ್ಲಿ ಸುಮಾರು ಇಪ್ಪತ್ನಾಲ್ಕು ವರ್ಷಗಳಿಂದ ಬಂಜಾರ ಸಮಾಜದ ಮುಖಂಡರು ಸಂಪ್ರದಾಯದ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ಜಯಂತಿ ಆಚರಿಸಿಕೊಂಡು ಬರುತ್ತಿದ್ದಾರೆ. ಈ ಭಾಗದ ಸ್ವಾಮಿಜಿಗಳು, ಎಲ್ಲಾ ಸಮಾಜದ ಮುಖಂಡರು ಭಾಗವಹಿಸಿ […]

Continue Reading

ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 128ನೇ ಜನ್ಮದಿನಾಚರಣೆ

ಚಿತ್ತಾಪುರ: ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 128ನೇ ದಿನಾಚರಣೆಯನ್ನು ಇಂದು ಮಹಾತ್ಮಾ ಗಾಂಧೀಜಿ ಪ್ರೌಢಶಾಲೆ AIDSO ವಿದ್ಯಾರ್ಥಿ ಸಂಘಟನೆಯಿಂದ ಆಚರಿಸಲಾಯಿತು. AIDSO ಜಿಲ್ಲಾ ಸಮಿತಿ ಸದಸ್ಯ ದೇವರಾಜ ರಾಜೋಳಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ಮಕ್ಕಳು ಮಹಾನ್ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟದ ನೇತಾರ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಳ್ಳುವದು ಬಹಳ ಅವಶ್ಯಕ. ಮಕ್ಕಳು ಮೊಬೈಲ್’ಗಳಿಂದ ಹೊರ ಬರಬೇಕು. ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳುವುದು ಉತ್ತಮ. ಮಕ್ಕಳನ್ನು […]

Continue Reading

ಬೇಂದ್ರೆಯವರ ಸಾಹಿತ್ಯ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ: ಭುವನೇಶ್ವರಿ ಎಂ

ಚಿತ್ತಾಪುರ: ಕನ್ನಡ ಸಾರಸತ್ವ ಲೋಕದಲ್ಲಿ ದ್ರುವ ನಕ್ಷತ್ರದಂತೆ ಬೆಳಗಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕೀರ್ತಿ ವರಕವಿ ದ.ರಾ ಬೇಂದ್ರೆ ಅವರಿಗೆ ಸಲ್ಲುತ್ತದೆ ಎಂದು ಶಿಕ್ಷಕಿ ಭುವನೇಶ್ವರಿ ಎಂ ಹೇಳಿದರು. ಸಮೀಪದ ರಾವೂರ ಗ್ರಾಮದ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ದ.ರಾ ಬೇಂದ್ರೆ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಬೆಂದರೆ ಮಾತ್ರ ಬೇಂದ್ರೆ ಆಗಲು ಸಾಧ್ಯವೆಂಬ ಮಾತು ಸಾಹಿತ್ಯ ವಲಯದಲ್ಲಿ ಕೇಳುತ್ತೆವೆ. ಹುಟ್ಟು ಸಾಮಾನ್ಯವಾದರೂ ಸಾವು ಚರಿತ್ರೆ ಆಗಬೇಕು ಎನ್ನುವ ಮಾತಿನಂತೆ ಬಡತನದಲ್ಲೇ ಹುಟ್ಟಿ […]

Continue Reading

ನಾಡು-ನುಡಿಗೆ ಬೇಂದ್ರೆಯವರ ಕೊಡುಗೆ ಅಪಾರ: ಸಿ.ಎಸ್ ಮಾಲಿಪಾಟೀಲ

ಕಲಬುರಗಿ: ಮಾನವೀಯ ಮೌಲ್ಯ, ನೈಜತೆಗಳಿಂದ ಕೂಡಿದ ಸಾಹಿತ್ಯ ರಚಿಸಿ ಕನ್ನಡ ನಾಡು-ನುಡಿಗೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಸಿ.ಎಸ್ ಮಾಲಿಪಾಟೀಲ ಹೇಳಿದರು. ನಗರದ ಗಂಜ್ ಬಸ್ ಸ್ಟಾಂಡ್ ಸಮೀಪದ ಆಚಾರ್ಯ ಪದವಿ ಪೂರ್ವ ಕಾಲೇಜ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ‘ವರಕವಿ ಡಾ.ದ.ರಾ ಬೇಂದ್ರೆಯವರ 129ನೇ ಜನ್ಮದಿನೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ‌ ಮಾತನಾಡಿದ ಅವರು, ಸಮಾಜ ನಿರ್ಮಾಣಕ್ಕೆ ಅನುಭವ, ನೈಜತೆ, ಮೌಲ್ಯಗಳಿಂದ ಕೂಡಿದ ಶ್ರೇಷ್ಠ ಸಾಹಿತ್ಯವನ್ನು ರಚಿಸಿ, ಕನ್ನಡವನ್ನು […]

Continue Reading

ಕುಷ್ಠರೋಗ ಶಾಪವಲ್ಲ, ಚಿಕಿತ್ಸೆಯಿಂದ ಗುಣಪಡಿಸಬಹುದು: ಡಾ.ಅನುಪಮಾ ಎಸ್

ಕಲಬುರಗಿ: ಕುಷ್ಠರೋಗ ಶಾಪ, ಹಿಂದಿನ ಜನ್ಮದ ಪಾಪದ ಪ್ರತಿಫಲ, ಗುಣಪಡಿಸಲು ಅಸಾಧ್ಯವೆಂಬ ನಂಬಿಕೆ ಅಥವಾ ಅಭಿಪ್ರಾಯ ಬೇಡ. ಕುಷ್ಠರೋಗದ ಲಕ್ಷಣಗಳು ಕಂಡುಬಂದರೆ ತಜ್ಞ ವೈದ್ಯರನ್ನು ಸಂಪರ್ಕಿಸಿ, ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಬಹುದಾಗಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಹೇಳಿದರು. ನಗರದ ಶೇಖರೋಜಾದ ಶಹಾಬಜಾರ ಯುಪಿಎಚ್‌ಸಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ಸಹಯೋಗದೊಂದಿಗೆ ಗುರುವಾರ ಏರ್ಪಡಿಸಿದ್ದ ‘ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನೆ ದಿನಾಚರಣೆ ಹಾಗೂ ‘ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ-2025’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮೈಕ್ರೋಬ್ಯಾಕ್ಟಿರಿಯಂ ಲೆಪ್ರೆ ಎಂಬ […]

Continue Reading

ಕುಷ್ಠರೋಗ ಶಾಪವಲ್ಲ, ಚಿಕಿತ್ಸೆಯಿಂದ ಗುಣಪಡಿಸಬಹುದು: ಡಾ.ಅನುಪಮಾ ಎಸ್

ಕಲಬುರಗಿ: ಕುಷ್ಠರೋಗ ಶಾಪ, ಹಿಂದಿನ ಜನ್ಮದ ಪಾಪದ ಪ್ರತಿಫಲ, ಗುಣಪಡಿಸಲು ಅಸಾಧ್ಯವೆಂಬ ನಂಬಿಕೆ ಅಥವಾ ಅಭಿಪ್ರಾಯ ಬೇಡ. ಕುಷ್ಠರೋಗದ ಲಕ್ಷಣಗಳು ಕಂಡುಬಂದರೆ ತಜ್ಞ ವೈದ್ಯರನ್ನು ಸಂಪರ್ಕಿಸಿ, ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಬಹುದಾಗಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಹೇಳಿದರು. ನಗರದ ಶೇಖರೋಜಾದ ಶಹಾಬಜಾರ ಯುಪಿಎಚ್‌ಸಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ಸಹಯೋಗದೊಂದಿಗೆ ಗುರುವಾರ ಏರ್ಪಡಿಸಿದ್ದ ‘ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನೆ ದಿನಾಚರಣೆ ಹಾಗೂ ‘ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ-2025’ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡದ ಅವರು, ಮೈಕ್ರೋಬ್ಯಾಕ್ಟಿರಿಯಂ ಲೆಪ್ರೆಂ ಎಂಬ […]

Continue Reading