ನವದೆಹಲಿ: ಭಾರತೀಯ ರೈಲ್ವೆ ವಿಶಾಲವಾದ ರೈಲು ಜಾಲ ಮತ್ತು ವೈವಿಧ್ಯಮಯ ರೈಲುಗಳಿಗೆ ವಿಶ್ವದಾದ್ಯಂತ ಹೆಸರುವಾಸಿಯಾಗಿದೆ. ದೂರದ ಪ್ರಯಾಣವಾಗಿರಲಿ ಅಥವಾ ಸ್ಥಳೀಯ ಪ್ರಯಾಣವಾಗಿರಲಿ ಪ್ರತಿಯೊಂದು ಅಗತ್ಯಕ್ಕೂ ರೈಲು ಸೇವೆಗಳು ಲಭ್ಯವಿದೆ.
ಭಾರತೀಯ ರೈಲ್ವೆ ಎಲ್ಲಾ ವರ್ಗದ ಜನರಿಗೆ ಅನುಕೂಲಕರ ಮತ್ತು ಸುಲಭವಾಗಿ ತಲುಪಬಹುದಾದ ಪ್ರಯಾಣ ಸಾಧನವಾಗಿದೆ. ಇದರಲ್ಲಿ ಅನೇಕ ಕೌತುಕಗಳು ಮತ್ತು ಅದ್ಬುತಗಳಿವೆ. ವೇಗದ ರೈಲುಗಳ ಜೊತೆಗೆ ಅತಿ ನಿಧಾನವಾಗಿ ಓಡುವ ರೈಲುಗಳು ಮತ್ತು ಯಾವಾಗಲೂ ಹೆಚ್ಚಿನ ಪ್ರಯಾಣಿಕರಿಂದ ತುಂಬಿರುವ ನಿಲ್ದಾಣಗಳಿವೆ. ಇದಲ್ಲದೆ ರೈಲ್ವೆ ಪ್ರಯಾಣವು ಅನುಕೂಲತೆಯ ಬಗ್ಗೆ ಮಾತ್ರವಲ್ಲ. ಇದು ಅದ್ಭುತ ಅನುಭವ ಮತ್ತು ಸುಂದರವಾದ ನೈಸರ್ಗಿಕ ಸೌಂದರ್ಯಗಳನ್ನು ಪರಿಚಯಿಸುತ್ತದೆ.
ಆದರೆ ಭಾರತದಲ್ಲಿ ಕೇವಲ ಮೂರು ಬೋಗಿಗಳೊಂದಿಗೆ ಕಾರ್ಯನಿರ್ವಹಿಸುವ ರೈಲು ಇದೆ ಎಂದು ನೀವು ಎಂದಾದರೂ ಕೇಳಿದ್ದೀರಾ ? ಒಂದು ವೇಳೆ ನೀವು ಕೇಳಿರದಿದ್ದರೆ ಈ ರೈಲಿನ ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಈ ರೈಲು ಕೇವಲ ಮೂರು ಬೋಗಿಗಳನ್ನು ಹೊಂದಿದ್ದು, ಇದನ್ನು ನಮ್ಮ ದೇಶದ ಅತ್ಯಂತ ಚಿಕ್ಕ ರೈಲು ಎಂದು ಕರೆಯಲಾಗುತ್ತದೆ. ಈ ರೈಲು DEMU (ಡೀಸೆಲ್ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್) ಸೇವೆಯಾಗಿದ್ದು, ಇದು ಕಡಿಮೆ ಉದ್ದ ಮತ್ತು ಸೀಮಿತ ದೂರಕ್ಕೆ ಹೆಸರುವಾಸಿಯಾಗಿದೆ.
ಹಸಿರು ಬಣ್ಣದ ಈ DEMU ರೈಲಿನಲ್ಲಿ 300 ಪ್ರಯಾಣಿಕರಿಗೆ ಅವಕಾಶ ಕಲ್ಪಿಸುವ ಮೂರು ಬೋಗಿಗಳಿವೆ. ಇದು ಕೊಚ್ಚಿ ಹಾರ್ಬರ್ ಟರ್ಮಿನಸ್ ನಿಂದ ಕೇರಳ ರಾಜ್ಯದ ಎರ್ನಾಕುಲಂ ಜಂಕ್ಷನ್’ವರೆಗೆ ಚಲಿಸುತ್ತದೆ. ಇದು ದಾರಿಯುದ್ದಕ್ಕೂ ಕೇವಲ ಒಂದು ನಿಲ್ದಾಣದಲ್ಲಿ ನಿಲ್ಲುತ್ತದೆ. ಈ ರೈಲಿನ ಮಾರ್ಗವು ಕರಾವಳಿಯುದ್ದಕ್ಕೂ ಹಾದುಹೋಗುತ್ತದೆ, ಪ್ರಯಾಣಿಕರಿಗೆ ನೈಸರ್ಗಿಕ ಸೌಂದರ್ಯ ಮತ್ತು ನೆಮ್ಮದಿಯ ಅನುಭವ ನೀಡುತ್ತದೆ. ಈ ರೈಲು ದಿನಕ್ಕೆ ಎರಡು ಬಾರಿ, ಬೆಳಿಗ್ಗೆ ಮತ್ತು ಸಂಜೆ ಚಲಿಸುತ್ತದೆ. ಸ್ಥಳೀಯರು ಇದನ್ನು ತುಂಬಾ ಆನಂದಿಸುತ್ತಾರೆ.
ಈ ರೈಲು ಒಂದೆ ನಿಲ್ದಾಣದಲ್ಲಿ 40 ನಿಮಿಷಗಳಲ್ಲಿ 9 ಕಿಲೋಮೀಟರ್ ಪ್ರಯಾಣಿಸುತ್ತದೆ. 300 ಜನರು ಪ್ರಯಾಣಿಕರು ಪ್ರಯಾಣಿಸುವ ಸಾಮರ್ಥ್ಯ ಹೊಂದಿದ್ದರೂ ಸಹಿತ ಕೇವಲ 12 ಜನರು ಮಾತ್ರ ಪ್ರತಿದಿನ ಇದರಲ್ಲಿ ಪ್ರಯಾಣಿಸುತ್ತಾರೆ ಎನ್ನಲಾಗಿದೆ. ಹೀಗಾಗಿ ಪ್ರಯಾಣಿಕರ ಕೊರತೆಯಿಂದಾಗಿ ಈ ರೈಲು ಸೇವೆ ಕೊನೆಗೊಳ್ಳುತ್ತದೆ ಎಂಬ ಆತಂಕ ಜನರಲ್ಲಿದೆ.