ತನ್ನ ಪತ್ನಿ ಚಿಕನ್​ ತಿನ್ನಲ್ಲ ಎಂದಿದ್ದಕ್ಕೆ ಸೂಸೈಡ್​ ಮಾಡಿಕೊಂಡ ಗಂಡ

ತನ್ನ ಪತ್ನಿ ಚಿಕನ್ ತಿನ್ನಲ್ಲ ಎಂದಿದಕ್ಕೆ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನಲ್ಲಿ ರವಿವಾರ ನಡೆದಿದೆ. ತಂಜವೂರು ಜಿಲ್ಲೆಯ ಕುಂಭಕೋಣ ತಾಲೂಕಿನ ಸಕ್ಕೋಟ್ಟೈ ಪ್ರದೇಶದ ನಿವಾಸಿ ಮಣಿಕಂಠನ್ ​(29) ಮೃತಪಟ್ಟಿದ್ದಾರೆ. ಪೀಠೋಪಕರಣ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಣಿಕಂಠನ್​, ಅಲ್ಲಿಯೇ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ ಸುಬ್ಬಲಕ್ಷ್ಮಿ (25) ಅವರನ್ನು ಪ್ರೀತಿಸುತ್ತಿದ್ದರು. ಒಂದು ತಿಂಗಳ ಹಿಂದೆ ಮನೆಯವರನ್ನು ದಿಕ್ಕರಿಸಿ ಇಬ್ಬರು ಮದುವೆಯಾಗಿದ್ದರು. ಕುಟುಂಬ ವಿರೋಧಿಸಿದ್ದರಿಂದ ತಿರುಪ್ಪೂರು ಜಿಲ್ಲೆಯ ವೆಲ್ಲಾ ಕೋವಿಲ್‌ನ ಪುತ್ತೂರಿನಲ್ಲಿರುವ ಸುಬ್ಬಲಕ್ಷ್ಮಿಯ ಸಹೋದರಿ ಮೇನಕಾ ಅವರ ಮನೆಯಲ್ಲಿ ಉಳಿದುಕೊಂಡರು. […]

Continue Reading

ಇಂಜಿನಿಯರಿಂಗ್ ವೃತ್ತಿ ತೊರೆದು ಕೃಷಿಗೆ ಮರಳಿದ ಈಕೆ ಈಗ ಕೋಟ್ಯಾಧಿಪತಿ

ಛತ್ತೀಸ್‌ಗಢ: ಕೃಷಿಯಲ್ಲಿ ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿದರೆ ಅಧುನಿಕ ತಂತ್ರಜ್ಞಾನವನ್ನು ಬಳಸಿದರೆ ಯಶಸ್ಸು ಸಾಧ್ಯ ಎಂಬುದನ್ನು ತೋರಿಸಿಕೊಟ್ಟ ಅನೇಕ ಯುವ ಕೃಷಿಕರಿದ್ದಾರೆ ಅವರೊಲ್ಲಬರು ಛತ್ತೀಸ್‌ಗಢದ ಸ್ಮರಿಕಾ ಚಂದ್ರಕರ್ ಆಗಿದ್ದಾರೆ. ಛತ್ತಿಸ್‌ಗಢದ ಚಾರ್ಮುಡಿಯಾ ಎಂಬ ಹಳ್ಳಿಯಲ್ಲಿ ಕೃಷಿ ಕುಟುಂಬದಲ್ಲಿ ಕೃಷಿಯನ್ನು ನೋಡುತ್ತಲೇ ದೊಡ್ಡವಳಾದ ಸ್ಮರಿಕಾ ಓದಿದ್ದು ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಜಿನಿಯರಿಂಗ್ ಹಾಗೂ ಎಂಬಿಎ. ಇಷ್ಟು ಓದಿದ ಅವರು ಪುಣೆಯಲ್ಲಿ 5 ವರ್ಷಗಳ ಕಾಲ ಹಿರಿಯ ಬ್ಯುಸಿನೆಸ್ ಡೆವಲಪ್‌ಮೆಂಟ್ ಎಕ್ಸಿಕ್ಯೂಟಿವ್ ಆಗಿಯೂ ಕೆಲಸ ಮಾಡಿದ್ದಾರೆ. 5 ವರ್ಷಗಳ ಕಾಲ ಹೊರಗೆ ಕೆಲಸ […]

Continue Reading

ಅನಾಮಧೇಯ ಭಕ್ತನಿಂದ ಶಿರಡಿ ಸನ್ನಿಧಿಗೆ 59 ಲಕ್ಷದ ಚಿನ್ನದ ಕಿರೀಟ ಸೇರಿ 65 ಲಕ್ಷ ಮೌಲ್ಯದ ಆಭರಣ ದಾನ

ಮುಂಬೈ: ಗುರುಪೂರ್ಣಿಮೆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಅನಾಮಧೇಯ ಭಕ್ತರೊಬ್ಬರು 59 ಲಕ್ಷದ ಚಿನ್ನದ ಕಿರೀಟ ಸೇರಿದಂತೆ 65 ಲಕ್ಷ ರೂ. ಮೌಲ್ಯದ ಆಭರಣಗಳನ್ನು ದಾನವಾಗಿ ನೀಡಿದ್ದು, ಬಾಬಾ ಕೃಪೆಗೆ ಪಾತ್ರರಾಗಿದ್ದಾರೆ. ದೇಣಿಗೆ ನೀಡಲಾದ 65 ಲಕ್ಷ ರೂ. ಮೌಲ್ಯದ ಆರಭರಣಗಳ ಪೈಕಿ 566 ಗ್ರಾಂ ತೂಕದ 59 ಲಕ್ಷ ಮೌಲ್ಯದ ಚಿನ್ನದ ಕಿರೀಟ, 54 ಗ್ರಾಂ ತೂಕದ ಚಿನ್ನದ ಹೂವುಗಳು (ಆಭರಣ), 2 ಕೆಜಿ ತೂಕದ ಬೆಳ್ಳಿಯ ಹಾರ ಸೇರಿವೆ. ಆಭರಣವನ್ನು ಬಾಬಾಗೆ ಅರ್ಪಿಸುವಾಗ ಭಕ್ತರು […]

Continue Reading

ಆಸ್ಪತ್ರೆಯಲ್ಲಿ ಸತ್ತಿದೆ ಎಂದ ಕಂದಮ್ಮ ಅಂತ್ಯಕ್ರಿಯೆಗೂ ಮುನ್ನ ಜೀವಂತ

ಮಹಾರಾಷ್ಟ್ರ: ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯದ ಆರೋಪದ ಮೇಲೆ ಸತ್ತಿದೆ ಎಂದು ಘೋಷಿಸಿದ ನವಜಾತ ಶಿಶು ಸುಮಾರು 12 ಗಂಟೆಗಳ ನಂತರ, ಅಂತ್ಯಕ್ರಿಯೆಗಿಂತ ಕೆಲವೇ ಕ್ಷಣಗಳ ಮೊದಲು ಜೀವಂತವಾಗಿ ಪತ್ತೆಯಾದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಈ ಘಟನೆ ಅಂಬಾಜೋಗೈನಲ್ಲಿರುವ ಸ್ವಾಮಿ ರಮಾನಂದ ತೀರ್ಥ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ವರದಿಗಳ ಪ್ರಕಾರ, ಜುಲೈ 7ರ ರಾತ್ರಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ನವಜಾತ ಶಿಶು ರಾತ್ರಿ 8:00 ಗಂಟೆ ಸುಮಾರಿಗೆ ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ, […]

Continue Reading

ರಸ್ತೆಯಲ್ಲಿ ಬಿಟ್ಟು ಕಾರಿನಲ್ಲಿ ತೆರಳಿದ ಮಾಲೀಕನ ಹಿಂಬಾಲಿಸಿದ ನಾಯಿ, ಮನಕಲುಕುವ ವಿಡಿಯೋ

ಫರೀದಾಬಾದ್: ನಾಯಿ ಮರಿಯನ್ನು ತಂದು ಮುದ್ದಾಗಿ ಸಾಕುತ್ತಾರೆ. ಆದರೆ ನಾಯಿಗೆ ವಯಸ್ಸಾದರೆ, ಆರೋಗ್ಯ ಹದಗೆಟ್ಟಿದ್ದರೆ, ನಾಯಿ ಮಾತು ಕೇಳದಿದ್ದರೆ ಕೆಲವರು ಸಾಕಿದ ನಾಯಿಯನ್ನು ರಸ್ತೆಯಲ್ಲಿ ಬಿಡುತ್ತಾರೆ. ಹಾಗೆಯೇ ಇಲ್ಲೊಬ್ಬ ಮಾಲೀಕ ಸಾಕಿದ ನಾಯಿಯನ್ನು ಮನೆಯಿಂದ ಹಲವು ಕಿಲೋಮೀಟರ್ ದೂರದವರೆಗೆ ಕಾರಿನಲ್ಲಿ ಕರೆದುಕೊಂಡು ಬಂದು ಮಾರುಕಟ್ಟೆ ಬಳಿ ಕಾರಿನಿಂದ ಕೆಳಗಿಳಿಸಿ, ಅತಿ ವೇಗವಾಗಿ ಕಾರು ಚಲಾಯಿಸಿಕೊಂಡು ತೆರಳಿದ್ದಾನೆ. ಮಾಲೀಕನ ಕಾರು ತೆರಳುತ್ತಿರುವುು ಗಮನಿಸಿದ ನಾಯಿ ಕಾರನ್ನು ಹಿಂಬಾಲಿಸಿದೆ. ಹಲವು ಕಿಲೋಮೀಟರ್ ವರೆಗೆ ನಾಯಿ ಕಾರು ಹಿಂಬಾಲಿಸಿ ಬಸವಳಿದ ಘಟನೆ […]

Continue Reading

ಒಂದು ಗೋಡೆಗೆ ಬಣ್ಣ ಬಳಿಯಲು 443 ಕಾರ್ಮಿಕರು, 24 ಲೀ. ಪೇಂಟ್, 3.38 ಲಕ್ಷ ರೂ. ಬಿಲ್: ಮಧ್ಯಪ್ರದೇಶ ಶಾಲೆಯ ಗೋಲ್ ಮಾಲ್

ಶಾದೋಲ್‌: ಮಧ್ಯಪ್ರದೇಶದ ಶಾದೋಲ್‌ ಜಿಲ್ಲೆಯ ಶಾಲೆಗೆ 24 ಲೀಟರ್‌ ಬಣ್ಣ ಬಳಿಯಲು ವೆಚ್ಚ ಮಾಡಿದ್ದು ಬರೋಬ್ಬರಿ 3.38 ಲಕ್ಷ ರೂ. ಅಷ್ಟೇ ಅಲ್ಲದೇ ಬಣ್ಣ ಹಚ್ಚಲು 443 ಕೂಲಿಯಾಳುಗಳನ್ನು ಬಳಸಿಕೊಳ್ಳಲಾಗಿದೆ. ಇಂತಹ ಹಗರಣ ಬೆಳಕಿಗೆ ಬಂದಿದ್ದು ಈ ಬಿಲ್‌ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆದಮೇಲೆ ಎನ್ನುವುದು ವಿಶೇಷ. ಈಗ ಶಿಕ್ಷಣಾಧಿಕಾರಿಗಳು ಹಗರಣದ ತನಿಖೆಗೆ ಮುಂದಾಗಿದ್ದಾರೆ. ಈ ಬಗ್ಗೆ ಪ್ರಶ್ನೆ ಕೇಳಿದರೆ ಅಲ್ಲಿನ ಮುಖ್ಯೋಪಾಧ್ಯಾಯರು ಮಾಧ್ಯಮಗಳಿಂದ ದೂರ ಓಡಿದ್ದಾರೆ. ಎರಡು ಶಾಲೆಗಳಿಗೆ ಬಣ್ಣ ಬಳಿಯಲು 215 ಮೇಸ್ತ್ರಿಗಳು ಹಾಗೂ […]

Continue Reading

ಟ್ರ್ಯಾಕ್ಟರ್‌ಗೆ ಬಾಡಿಗೆ ನೀಡಲು ಹಣವಿಲ್ಲದೆ ಸ್ವತಃ ನೊಗ-ನೇಗಿಲು ಹೊತ್ತ ವೃದ್ಧ ದಂಪತಿಯ ನೆರವಿಗೆ ಧಾವಿಸಿದ ಸಚಿವ

ಮುಂಬೈ: ಸಾಲ ಮಾಡಿಕೊಂಡ ಕಾರಣ ಎತ್ತು, ಟ್ರ್ಯಾಕ್ಟರ್‌ಗೆ ಬಾಡಿಗೆ ನೀಡಲು ಹಣವಿಲ್ಲದೆ, ಕಾರ್ಮಿಕರಿಗೆ ಕೂಲಿ ನೀಡಲು ಸಾಧ್ಯವಾಗದ ಕಾರಣ ಸ್ವತಃ ನೊಗ-ನೇಗಿಲು ಹೊತ್ತ ವೃದ್ಧ ದಂಪತಿಯ ವಿಡಿಯೊ ಇತ್ತೀಚೆಗೆ ವೈರಲ್‌ ಆಗಿತ್ತು. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿ ದೇಶವೇ ಮರುಗಿತ್ತು. ಬೆಳೆ ನಾಶವಾದ ಹಿನ್ನೆಲೆಯಲ್ಲಿ ಸಾಲ ಮಾಡಿದ್ದರಿಂದ ಅನಿವಾರ್ಯವಾಗಿ 75 ವರ್ಷದ ಪತಿ ನೊಗ ಹೊತ್ತಿದ್ದರೆ, 65 ವರ್ಷದ ಪತ್ನಿ ನೇಗಿಲು ಹಿಡಿದು ನೆಲ ಹದ ಮಾಡುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿತ್ತು. ಇದೀಗ ಸಚಿವರೊಬ್ಬರು ಈ […]

Continue Reading

ಕಣ್ಣು ಕಾಣದ, ಕಿವಿ ಕೇಳದ, ಮಾತನಾಡಲು ಬರದಿದ್ದರೂ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡ ಗಟ್ಟಿಗಿತ್ತಿ

ಇಂದೋರ್: ಸಾಧಿಸುವ ಛಲವೊಂದಿದ್ದರೆ ಎಂತಹ ಕೆಲಸವನ್ನು ಬೇಕಾದರೂ ಮಾಡಬಹುದು, ಅಸಾಧ್ಯವಾದದ್ದು ಸಾಧ್ಯ ಎಂದು ತೋರಿಸಬಹುದು. ದೈಹಿಕವಾಗಿ ಗಟ್ಟಿಮುಟ್ಟಾಗಿದ್ದರೆ ಏನು ಬೇಕಾದರೂ ಮಾಡಬಹುದು. ಆದರೆ ದೈಹಿಕ ನ್ಯೂನತೆಯಿದ್ದರೂ ಇಡಿ ದೇಶವೇ ಕೊಂಡಾಡುವಂತ ಸಾಧನೆಯೊಂದು ಇಂದೋರ್‌ನ ಮಹಿಳೆಯೊಬ್ಬರು ಮಾಡಿ ತೋರಿಸಿದ್ದಾರೆ. ಗುರುದೀಪ್ ಕೌರ್ ವಾಸು 34 ವರ್ಷ ವಯಸ್ಸಿನ ಇವರು ಊರಿನಲ್ಲಿ ‘Indore’s Helen Keller’ ಎಂದೇ ಪ್ರಖ್ಯಾತಿ ಪಡೆದುಕೊಂಡಿದ್ದಾರೆ. (ಹೆಲೆನ್ ಆಡಮ್ಸ್ ಕೆಲ್ಲರ್ – ಅಮೆರಿಕ ಮೂಲದ ಕಿವುಡು ಮತ್ತು ಅಂಧ ವ್ಯಕ್ತಿಯಾಗಿ ಕಲಾ ಪದವಿ ಪಡೆದ ಪ್ರಪ್ರಥಮ […]

Continue Reading

ಬಾಲಕನ ಕೋರಿಕೆ ಹಿಂದಿದೆ ಹೃದಯ ಹಿಂಡುವ ಕಥೆ: ಸಹಾಯಕ್ಕೆ ಡಿಸಿ ಅಸ್ತು

ಬೆಳಗಿನ ತಿಂಡಿ ಮಳಿಗೆಯನ್ನು ನಡೆಸುತ್ತಿದ್ದ ಮಹಿಳೆಯ ಅಂಗಡಿಯನ್ನು ರಸ್ತೆ ಅಗಲೀಕರಣದ ಸಲುವಾಗಿ ಅಧಿಕಾರಿಗಳು ಎತ್ತಂಗಡಿ ಮಾಡಿಸಿದ ಹಿನ್ನೆಲೆಯಲ್ಲಿ 8 ವರ್ಷದ ಬಾಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಘಟನೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ವರದಿಯಾಗಿದೆ. ಜಿಲ್ಲಾಧಿಕಾರಿ ನಾಗಲಕ್ಷ್ಮಿ ಅವರನ್ನು ಭೇಟಿಯಾಗಲು ಡಿಸಿ ಕಚೇರಿಗೆ ಆಗಮಿಸಿದ ಯಶವಂತ್ ಎಂಬ ಪುಟ್ಟ ಬಾಲಕ ತನ್ನ ಸಮಸ್ಯೆಯ ಬಗ್ಗೆ ಬರೆದ ಪತ್ರವನ್ನು ಕೈಯಲ್ಲಿ ಹಿಡಿದು ಬಂದಿರುವುದು ಸಿಬ್ಬಂದಿಗಳ ಗಮನ ಸೆಳೆದಿದೆ. ಇದನ್ನು ಓದಿದ ಬಳಿಕ ಅಧಿಕಾರಿಗಳ ಕಣ್ಣಂಚಲ್ಲಿ ನೀರು ಮೂಡಿದೆ. ಪತ್ರದಲ್ಲಿ ‘ನನ್ನ […]

Continue Reading

ವೋಲ್ವೋ ಕಾರು, 800 ಗ್ರಾಂ ಚಿನ್ನ ಕೊಟ್ಟರು ವರದಕ್ಷಿಣೆ ಕಿರುಕುಳ: ಕಾರಿನಲ್ಲಿ ನವವಿವಾಹಿತೆಯ ಶವ ಪತ್ತೆ

ತಮಿಳುನಾಡು: ಮದುವೆಯಾದ ಕೇವಲ ಎರಡು ತಿಂಗಳ ನಂತರ ವರದಕ್ಷಿಣೆಗಾಗಿ ಅತ್ತೆ-ಮಾವ ನೀಡುತ್ತಿದ್ದ ಕಿರುಕುಳ ಸಹಿಸಲಾಗದೆ ಯುವತಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ತಿರುಪ್ಪೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ತಿರುಪ್ಪೂರಿನ ಜವಳಿ ವ್ಯಾಪಾರಿ ಅಣ್ಣಾದೊರೈ ಅವರ ಪುತ್ರಿ ರಿಧಾನ್ಯ (27) ಈ ವರ್ಷದ ಏಪ್ರಿಲ್‌ನಲ್ಲಿ ಕವಿನ್ ಕುಮಾರ್ (28) ಎಂಬ ಯುವಕನನ್ನು ವಿವಾಹವಾದರು. ವರದಿಗಳ ಪ್ರಕಾರ, ಮದುವೆಯಲ್ಲಿ 800 ಗ್ರಾಂ ಚಿನ್ನಾಭರಣ ಮತ್ತು 70 ಲಕ್ಷ ರೂ. ಮೌಲ್ಯದ ವೋಲ್ವೋ ಕಾರು ವರದಕ್ಷಿಣೆಯಾಗಿ ನೀಡಲಾಗಿತ್ತು. ಆದರೆ […]

Continue Reading